ಬಾಯಾರಿಕೆ ನೀಗಲು ಡಯಟ್ ಸೋಡಾ ಕುಡಿತೀರಾ ? ಆರೋಗ್ಯಕ್ಕೆ ಡೇಂಜರ್

First Published | Oct 16, 2022, 11:40 AM IST

ಸೆಖೆ ಆರಂಭವಾದ ಕೂಡಲೇ ರಸ್ತೆ ಬದಿಯಲ್ಲಿ ಜೀರಿಗೆ ನೀರು, ನಿಂಬೆ ಜ್ಯೂಸ್ ಮತ್ತು ಕಬ್ಬಿನ ರಸದ ಅಂಗಡಿಗಳು ಬರಲು ಪ್ರಾರಂಭಿಸುತ್ತವೆ. ಕಬ್ಬಿನ ರಸವನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಮತ್ತು ಸೆಖೆ ಇದ್ದಾಗ ಅದರ ಸೇವನೆಯು ಗಮನಾರ್ಹವಾಗಿ ಹೆಚ್ಚಾಗುತ್ತೆ. ಯಾರು ಬೇಕಾದರೂ ಅವುಗಳನ್ನು ಕುಡಿಯುವ ಮೂಲಕ ಬಾಯಾರಿಕೆ ತಣಿಸಬಹುದು ಮತ್ತು ದೇಹವನ್ನು ಹೈಡ್ರೇಟ್ ಆಗಿಡಬಹುದು. ಆದರೆ ಬಾಯಾರಿಕೆ ನೀಗಲು ಡಯಟ್ ಕೋಲ್ಡ್ ಡ್ರಿಂಕ್ ಕುಡಿಯೋ ಮುನ್ನ ಯೋಚನೆ ಮಾಡ್ಬೇಕು.

ನಾವು ಯಾವಾಗಲೂ ಮನೆಯ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಅನೇಕ ಜನರು ಕೆಲಸಗಳನ್ನು ಮಾಡುತ್ತಾರೆ ಅಥವಾ ಇನ್ನಾವುದೋ ಕಾರಣಕ್ಕಾಗಿ ಮನೆಯಿಂದ ಹೊರಗೆ ಇರಬಹುದು. ಅಂತಹ ಪರಿಸ್ಥಿತಿಯಲ್ಲಿ, ಮನೆ ಆಹಾರ ಸೇವಿಸುವುದು ಸ್ವಲ್ಪ ಕಷ್ಟವಾಗುತ್ತೆ. ಆರೋಗ್ಯಕರ ಹಣ್ಣುಗಳು ಮತ್ತು ತರಕಾರಿ ಜ್ಯೂಸ್ (vegetable juice) ಫಿಟ್ ಆಗಿರಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತೆ. ಬಾಯಾರಿಕೆಯನ್ನು ತಣಿಸಲು ನೀವು ಡಯಟ್ ಕೋಲ್ಡ್ ಡ್ರಿಂಕ್ ಕುಡಿಯುತ್ತೀರಾ? ಹಾಗಿದ್ರೆ ಇದನ್ನ ನೀವು ಓದಲೇ ಬೇಕು.

ಕೆಲವು ಜನರು ಮನೆಯಲ್ಲಿಯೇ ಅತ್ಯುತ್ತಮ ಪಾನೀಯಗಳನ್ನು ತಯಾರಿಸುತ್ತಾರೆ, ಆದರೆ ಮನೆಯಿಂದ ಹೊರಗಿದ್ದರೆ, ಆಗಾಗ ಕೋಲ್ಡ್ ಡ್ರಿಂಕ್ಸ್ ಸೇವಿಸುತ್ತಾರೆ. ಈ ಪಾನೀಯಗಳನ್ನು ಡಯಟ್ ಸೋಡಾ ಎಂದೂ ಕರೆಯಲಾಗುತ್ತೆ. ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ತಂಪು ಪಾನೀಯಗಳು (cold drink) ಮಾರುಕಟ್ಟೆಗೆ ಬರಲು ಪ್ರಾರಂಭಿಸಿವೆ, ಅವುಗಳನ್ನು ವಿವಿಧ ರೀತಿಯ ಮಾರ್ಕೆಟಿಂಗ್ ತಂತ್ರಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಕೆಲವರು ಇದರಲ್ಲಿ ಕ್ಯಾಲರಿ ಇಲ್ಲ, ಶುಗರ್ ಇಲ್ಲ ಎಂದು ಹೇಳುತ್ತಾರೆ. ಆದರೆ ತಂಪು ಪಾನೀಯಗಳ ಲೇಬಲ್ ಓದಿದರೆ, ಸತ್ಯ ಏನೆಂದು ತಿಳಿಯುತ್ತೆ. 

Tap to resize

ಆದರೆ ಕೋಲ್ಡ್ ಡ್ರಿಂಕ್ಸ್ ಕುಡಿಯೋ ಮುನ್ನ ಯಾರು ಲೇಬಲ್ ಓದುತ್ತಾರೆ. ಅದನ್ನು ಓದೋ ಟೈಮ್ ಆದ್ರೂ ಯಾರಿಗಿರುತ್ತೆ?. ಏಕೆಂದರೆ 10ರಲ್ಲಿ 1 ಜನರು ಮಾತ್ರ ಕುಡಿಯುವ ಮೊದಲು ಲೇಬಲ್ ಓದುತ್ತಾರೆ. ಈ ಡಯಟ್ ಡ್ರಿಂಕ್ ಕುಡಿಯುವುದರಿಂದ ಅನೇಕ ಅನಾನುಕೂಲತೆಗಳು ಉಂಟಾಗುತ್ತವೆ. ಆದ್ದರಿಂದ ಇಂದಿನ ಲೇಖನದಲ್ಲಿ ನಾವು ಡಯಟ್ ಕೋಲ್ಡ್ ಡ್ರಿಂಕ್ ಕುಡಿಯುವುದರಿಂದ ಉಂಟಾಗುವ ಅನಾನುಕೂಲತೆಗಳು ಅಥವಾ ಅಡ್ಡಪರಿಣಾಮಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

ಸೊಂಟದಲ್ಲಿ ಕೊಬ್ಬು ಹೆಚ್ಚುತ್ತೆ
ಸ್ಯಾನ್ ಅಂಟೋನಿಯೊದ ಟೆಕ್ಸಾಸ್ ಹೆಲ್ತ್ ಸೈನ್ಸ್ ಸೆಂಟರ್ನ ಸ್ಕೂಲ್ ಆಫ್ ಮೆಡಿಸಿನ್ ನಡೆಸಿದ ಎರಡು ಅಧ್ಯಯನಗಳು (2011 ಮತ್ತು 2015) ಡಯಟ್ ಸೋಡಾದ 2 ಸರ್ವಿಂಗ್‌ಗಳು, ವಿಶೇಷವಾಗಿ ಡಯಟ್ ಕೋಕ್, ಮೂರು ಇಂಚುಗಳಿಗಿಂತ ಹೆಚ್ಚು ಸೊಂಟವನ್ನು ಹೆಚ್ಚಿಸಿವೆ. ಅಂದರೆ ಇದರಿಂದ ಬೊಜ್ಜು ಹೆಚ್ಚಾಗಿದೆ ಎಂದು ಕಂಡುಕೊಂಡಿದೆ. 

ಅಷ್ಟೇ ಅಲ್ಲ, ಡಯಟ್ ಡ್ರಿಂಕ್ (diet drink) ಸೇವಿಸಿದವರ ಸೊಂಟದ ಗಾತ್ರವು ಅದನ್ನು ಸೇವಿಸದವರಿಗಿಂತ ಶೇಕಡಾ 70ರಷ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ, ಇದನ್ನು ದಿನಕ್ಕೆ 2 ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೇವಿಸುವವರು ಡಯಟ್ ಕೋಲ್ಡ್ ಡ್ರಿಂಕ್ ಸೇವಿಸದವರಿಗೆ ಹೋಲಿಸಿದರೆ 500% ಸೊಂಟದ ಹೆಚ್ಚಳವನ್ನು ಹೊಂದಿದ್ದರು.

ಇದಕ್ಕೆ ಕಾರಣವೆಂದರೆ ಡಯಟ್ ಕೋಲ್ಡ್ ಡ್ರಿಂಕ್ಸ್ ದೇಹದ ನೈಸರ್ಗಿಕ ಕ್ಯಾಲೊರಿ ಸೇವನೆಯನ್ನು ಹೆಚ್ಚಿಸುತ್ತದೆ. ಇದನ್ನು ಕುಡಿದರೆ ನಿಮಗೆ ಮತ್ತೆ ಮತ್ತೆ ಕೋಲ್ಡ್ ಡ್ರಿಂಕ್ (cold drink) ಕುಡಿಯುವ ಮನಸಾಗುತ್ತದೆ. ಆ ಮೂಲಕ ನೀವು ಹೆಚ್ಚು ಪಾನೀಯಗಳನ್ನು ಕುಡಿಯುತ್ತೀರಿ, ಜೊತೆಗೆ ಸಿಹಿ ತಿಂಡಿಗಳನ್ನು ಸಹ ಸೇವಿಸುತ್ತೀರಿ. ಇದರಿಂದ ದೇಹದಲ್ಲಿ ಕ್ಯಾಲರಿ ಹೆಚ್ಚುತ್ತದೆ.

ಚಯಾಪಚಯ ಸಿಂಡ್ರೋಮ್ ಮತ್ತು ಮಧುಮೇಹದ ಅಪಾಯ 
ಅಧ್ಯಯನಗಳ ಪ್ರಕಾರ, ಡಯಟ್ ಕೋಲ್ಡ್ ಡ್ರಿಂಕ್ (diet cold drink) ಚಯಾಪಚಯ ಸಿಂಡ್ರೋಮ್ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ. ಮೆಟಾಬಾಲಿಕ್ ಸಿಂಡ್ರೋಮ್ ಎಂಬುದು ಹೊಟ್ಟೆಯ ಕೊಬ್ಬು ಮತ್ತು ಹೆಚ್ಚಿನ ಕೊಲೆಸ್ಟ್ರಾಲ್, ಹೃದಯದ ಸಮಸ್ಯೆಗಳು ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುವ ಅಪಾಯದ ಅಂಶಗಳ ಒಂದು ಗುಂಪು. 

ಮಿನ್ನೆಸೋಟ ವಿಶ್ವವಿದ್ಯಾಲಯದಲ್ಲಿ ಸುಮಾರು 10,000 ವಯಸ್ಕರ ಬಗ್ಗೆ 2008 ರಲ್ಲಿ ಒಂದು ಅಧ್ಯಯನ ನಡೆಸುತ್ತು. ದಿನಕ್ಕೆ 1 ಸೋಡಾ ಪಾನೀಯ ಕುಡಿಯುವುದರಿಂದ metabolic syndrome ಅಪಾಯವನ್ನು 34% ರಷ್ಟು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ., ಮತ್ತೊಂದು ಅಧ್ಯಯನದಲ್ಲಿ, ಡಯಟ್ ಸೋಡಾ ಕುಡಿಯುವುದರಿಂದ metabolic syndrome ಅಪಾಯವನ್ನು 36% ರಷ್ಟು ಮತ್ತು ಟೈಪ್ 2 ಮಧುಮೇಹದ ಅಪಾಯ 67% ರಷ್ಟು ಹೆಚ್ಸುತ್ತೆ ಎಂದು ತಿಳಿದು ಬಂದಿದೆ.

ಹೃದಯಕ್ಕೆ ಹಾನಿ 
ಸ್ವೀಡನ್ನಿನ ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್‌ನ ಸಂಶೋಧನೆಯ ಪ್ರಕಾರ, 2 ಅಥವಾ ಅದಕ್ಕಿಂತ ಹೆಚ್ಚು ಸರ್ವಿಂಗ್ ಡಯಟ್ ಸೋಡಾ ಅಥವಾ ಪಾನೀಯವನ್ನು ಕುಡಿಯುವ ಪುರುಷರಲ್ಲಿ ಹೃದಯ ವೈಫಲ್ಯದ ಸಾಧ್ಯತೆ 23% ದಷ್ಟು ಹೆಚ್ಚಿದೆ. ಈ ಅಧ್ಯಯನದಲ್ಲಿ, 42.400 ಪುರುಷರನ್ನು 12 ವರ್ಷಗಳ ಕಾಲ ಮೇಲ್ವಿಚಾರಣೆ ಮಾಡಲಾಯಿತು ಮತ್ತು ಗಮನಿಸಲಾಯಿತು. ಈ ಜನರಲ್ಲಿ, 3604 ಹೃದಯ ವೈಫಲ್ಯದ ಪ್ರಕರಣಗಳು ವರದಿಯಾಗಿವೆ ಮತ್ತು ಅವರಲ್ಲಿ 509 ಜನರು ಸಾವನ್ನಪ್ಪಿದ್ದಾರೆ. 

ಮೂತ್ರಪಿಂಡದ ಸಮಸ್ಯೆ ಹೆಚ್ಚಳ (kidney problem)
2009ರಲ್ಲಿ 3000ಕ್ಕೂ ಹೆಚ್ಚು ಮಹಿಳೆಯರ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಡಯಟ್ ಸೋಡಾ ಮೂತ್ರಪಿಂಡದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೆಚ್ಚಿನ ಸೋಡಿಯಂ ಮತ್ತು ಕೃತಕ ಸಿಹಿಕಾರಕದ ಸೇವನೆಯು ಮೂತ್ರಪಿಂಡದ ಕಾರ್ಯವನ್ನು ಕಡಿಮೆ ಮಾಡುತ್ತದೆ ಎಂದು ಇಲ್ಲಿಯವರೆಗೆ ಅಧ್ಯಯನದಲ್ಲಿ ತಿಳಿದು ಬಂದಿರುವುದಾಗಿ ತಜ್ಞರು ಹೇಳುತ್ತಾರೆ.

ಖಿನ್ನತೆಯನ್ನು ಹೆಚ್ಚಿಸಬಹುದು
ಡಯಟ್ ಕೋಕ್ ಅಪಾಯಕಾರಿ ರಾಸಾಯನಿಕಗಳ ಇಪಿಎ ಪಟ್ಟಿಯಲ್ಲಿ ಸೇರಿಸಲಾದ ಆಸ್ಪರ್ಟೇಮ್ ಅಥವಾ ಸಿಹಿಕಾರಕಗಳನ್ನು ಹೊಂದಿರುತ್ತದೆ. ಕೃತಕ ಸಿಹಿ ಸೇರಿಸಿದ ಪಾನೀಯಗಳು ಖಿನ್ನತೆಯನ್ನು ಹೆಚ್ಚಿಸುತ್ತವೆ ಎಂದು ಅಮೇರಿಕನ್ ಅಕಾಡೆಮಿ ಆಫ್ ನ್ಯೂರಾಲಜಿ ಕಂಡುಹಿಡಿದಿದೆ.  ಸಿಹಿ ಪಾನೀಯಗಳು, ಕಾಫಿ ಮತ್ತು ಚಹಾ ಪ್ರಪಂಚದಾದ್ಯಂತ ಸಾಮಾನ್ಯವಾಗಿ ಸೇವಿಸಲಾಗುತ್ತದೆ, ಅದು ಹೆಚ್ಚು ಹಾನಿಯನ್ನು ಉಂಟುಮಾಡುವುದಿಲ್ಲ. ಆದರೆ ಡಯಟ್ ಕೋಲ್ಡ್ ಡ್ರಿಂಕ್ ಅಥವಾ ಡಯಟ್ ಸೋಡಾ ಸೇವಿಸುವ ಜನರು ಖಿನ್ನತೆಗೆ ಒಳಗಾಗಬಹುದು.

Latest Videos

click me!