ದೇಹದ ಅತಿದೊಡ್ಡ ಅಂಗ ಯಾವ್ದು? ಅದನ್ನ ಹೇಗೆ ರಕ್ಷಿಸಿಕೊಳ್ಳಬೇಕು; ಇಲ್ಲಿದೆ ಮಾಹಿತಿ
First Published | Oct 27, 2022, 5:15 PM ISTನಾವು ದೇಹದ ಅಂಗದ ಬಗ್ಗೆ ಯೋಚಿಸಿದ್ರೆ, ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳು ಮೆದುಳಿನ ಬಗ್ಗೆ ಮಾತ್ರ ಹೆಚ್ಚಿನ ಮಾತುಕತೆ ನಡೆಸುತ್ತೇವೆ. ಅವುಗಳೇ ನಮ್ಮ ದೇಹದ ಅತಿ ದೊಡ್ಡ ಅಂಗಗಳು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ದೇಹದಲ್ಲಿ ಅತ್ಯಂತ ದೊಡ್ಡ ಮತ್ತು ಗೋಚರ ಅಂಗ ಯಾವುದು ಎಂದು ನಿಮಗೆ ತಿಳಿದಿದ್ಯಾ? ದೇಹದ ಅತಿದೊಡ್ಡ ಅಂಗವೆಂದರೆ ಚರ್ಮ. ಸುಂದರವಾಗಿ ಕಾಣುವುದರ ಜೊತೆಗೆ, ಚರ್ಮವು ಹಾನಿಕಾರಕ ಜೀವಿಗಳಿಂದ ದೇಹವನ್ನು ರಕ್ಷಿಸುವಲ್ಲಿ ಮತ್ತು ದೇಹದ ತಾಪಮಾನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.