ಈ ಸಮಸ್ಯೆಯಿರುವವರು ಸೀಬೆಕಾಯಿ ತಿನ್ನುವಾಗ ಎಚ್ಚರದಿಂದಿರಿ!

Published : Aug 25, 2025, 06:07 PM IST

ಸೀಬೆಕಾಯಿ ಸಿಹಿಯಾಗಿ ರುಚಿಯಾಗಿರೋದಷ್ಟೇ ಅಲ್ಲ, ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಸೀಬೆಕಾಯಿಯನ್ನು ತಿನ್ನಲೇಬಾರದು ಅಂತಾರೆ ತಜ್ಞರು. ಯಾರ್ಯಾರು ಅಂತ ಒಮ್ಮೆ ನೋಡಿ… 

PREV
15
ಪೋಷಕಾಂಶದ ಕೊರತೆ ನೀಗಿಸುವ ಹಣ್ಣು

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಿದ್ದಾರೆ. ಆರೋಗ್ಯವಾಗಿರಲು ನಾನಾ ಹಣ್ಣುಗಳನ್ನು ತಿಂತಿದ್ದಾರೆ. ಹಣ್ಣುಗಳಲ್ಲಿ ನಮ್ಮ ಶರೀರಕ್ಕೆ ಬೇಕಾದ ಪೋಷಕಾಂಶಗಳು ಹೇರಳವಾಗಿವೆ. ಇವು ನಮ್ಮಲ್ಲಿನ ಪೋಷಕಾಂಶಗಳ ಕೊರತೆಯನ್ನೂ ನೀಗಿಸುತ್ತವೆ. ಅಂಥ ಹಣ್ಣುಗಳಲ್ಲಿ ಸೀಬೆಕಾಯಿ ಕೂಡ ಒಂದು. ಸೀಬೆಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ನಾರಿನಂಶ ಹೇರಳವಾಗಿದೆ. 

25
ರೋಗ ನಿರೋಧಕ ಶಕ್ತಿ ಹೆಚ್ಚಳ

ಸೀಬೆಕಾಯಿ ತಿಂದ್ರೆ ನಮ್ಮ ಹೃದಯ ಆರೋಗ್ಯವಾಗಿರುತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಅನೇಕ ರೋಗಗಳಿಂದ ದೂರವಿರಬಹುದು. ಜೊತೆಗೆ ಜೀರ್ಣಕ್ರಿಯೆಯೂ ಸರಾಗವಾಗಿ ನಡೆಯುತ್ತೆ. ಅದಕ್ಕೇ ಇದನ್ನು ಹೆಚ್ಚಾಗಿ ತಿನ್ನಬೇಕು ಅಂತಾರೆ ಆರೋಗ್ಯ ತಜ್ಞರು. ಆದ್ರೆ ಈ ಹಣ್ಣು ಎಷ್ಟೇ ಆರೋಗ್ಯಕಾರಿಯಾಗಿದ್ರೂ ಕೆಲವರಿಗೆ ಮಾತ್ರ ಹಾನಿಕಾರಕ. ಅಂದ್ರೆ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಸೀಬೆಕಾಯಿಯನ್ನು ತಿನ್ನಲೇಬಾರದು ಅಂತಾರೆ ತಜ್ಞರು.  

35
ಸೀಬೆಕಾಯಿ ಯಾರು ತಿನ್ನಬಾರದು?

ಸೀಬೆಕಾಯಿ ಒಳ್ಳೆಯ ಆರೋಗ್ಯಕರ  ಹಣ್ಣು. ಆದ್ರೂ ಇದನ್ನು ಯಾರು ತಿನ್ನಬೇಕು, ಯಾರು ತಿನ್ನಬಾರದು ಅನ್ನೋದನ್ನ ತಿಳ್ಕೊಳ್ಳೋದು ಮುಖ್ಯ. ಇದರಲ್ಲಿರೋ ಪೊಟ್ಯಾಶಿಯಂ ಸ್ನಾಯು ಮತ್ತು ನರಗಳ ಆರೋಗ್ಯಕ್ಕೆ ಸಹಾಯ ಮಾಡುತ್ತೆ. ಆದ್ರೆ ಮೂತ್ರಪಿಂಡದ ಸಮಸ್ಯೆ, ಅಲರ್ಜಿ, ಹೊಟ್ಟೆ ಸಮಸ್ಯೆ ಇರೋರು ಸೀಬೆಕಾಯಿ ಹೆಚ್ಚಾಗಿ ತಿನ್ನಬಾರದು. 

45
ಕರುಳಿನ ಸಮಸ್ಯೆ

ಸೀಬೆಕಾಯಿಯಲ್ಲಿ ನಾರಿನಂಶ ಹೇರಳವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ಇದನ್ನು ತಿಂದ್ರೆ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ. ಆದ್ರೆ ಇದನ್ನು ಕರುಳಿನ ಸಮಸ್ಯೆ ಇರೋರು ಮಾತ್ರ ತಿನ್ನಬಾರದು. ಹಾಗೇ ನಿಮಗೆ ಏನಾದ್ರೂ ಹೊಟ್ಟೆ ಸಮಸ್ಯೆ ಇದ್ರೂ ತಿನ್ನಬಾರದು. ಯಾಕಂದ್ರೆ ಇದರಲ್ಲಿ ಹೆಚ್ಚಾಗಿರೋ ನಾರಿನಂಶದಿಂದ ಗ್ಯಾಸ್, ಅತಿಸಾರದಂತ ಸಮಸ್ಯೆಗಳು ಹೆಚ್ಚಾಗುತ್ತವೆ ಅಂತ ಸೈನ್ಸ್ ಡೈರೆಕ್ಟ್ ನಲ್ಲಿ ಪ್ರಕಟವಾದ ಒಂದು ಅಧ್ಯಯನ ಹೇಳುತ್ತೆ. 

55
ಮೂತ್ರಪಿಂಡದ ಸಮಸ್ಯೆ

ಸೀಬೆಕಾಯಿಯಲ್ಲಿ ಪೊಟ್ಯಾಶಿಯಂ ಹೇರಳವಾಗಿದೆ. ಇದು ಹೃದಯ ಮತ್ತು ಸ್ನಾಯುಗಳ ಆರೋಗ್ಯ ಕಾಪಾಡಲು ಮುಖ್ಯ ಪಾತ್ರ ವಹಿಸುತ್ತೆ. ಆದ್ರೆ ಈ ಪೊಟ್ಯಾಶಿಯಂ ಅನ್ನು ಹೆಚ್ಚಾಗಿ ಸೇವಿಸಿದ್ರೆ ಮೂತ್ರಪಿಂಡದ ಸಮಸ್ಯೆ ಹೆಚ್ಚಾಗುತ್ತವೆ ಅಂತ ಕಿಡ್ನಿ ಫೌಂಡೇಶನ್ ಹೇಳುತ್ತೆ. ಅದಕ್ಕೇ ಮೂತ್ರಪಿಂಡದ ಸಮಸ್ಯೆ ಇರೋರು ಸೀಬೆಕಾಯಿಯನ್ನ ಹೆಚ್ಚಾಗಿ ತಿನ್ನಬಾರದು.

ಸೀಬೆಕಾಯಿ ಹೇಗೆ ತಿನ್ನಬೇಕು?
ಆರೋಗ್ಯ ತಜ್ಞರ ಪ್ರಕಾರ, ದಿನಕ್ಕೆ ಒಂದೇ ಸೀಬೆಕಾಯಿ ತಿನ್ನಬೇಕು. ಹಾಗೇ ಚೆನ್ನಾಗಿ ಹಣ್ಣಾದ ಸೀಬೆಕಾಯಿ ಹಣ್ಣನ್ನೇ ತಿನ್ನಬೇಕು. ಇದು ಹೊಟ್ಟೆಗೆ ಒಳ್ಳೆಯದು. ಓಟ್ಸ್ ಅಥವಾ ಮೊಸರಿನ ಜೊತೆ ಸೀಬೆಕಾಯಿ ತಿಂದ್ರೆ ಜೀರ್ಣಕ್ರಿಯೆ ಸುಧಾರಿಸುತ್ತೆ. ಆದ್ರೆ ಈ ಸೀಬೆಕಾಯಿ ಬದಲು ನೀವು ಪಪ್ಪಾಯ ತಿಂದ್ರೆ ಒಳ್ಳೆಯದು. ಇದರಲ್ಲೂ ನಾರಿನಂಶ ಮತ್ತು ವಿಟಮಿನ್ ಸಿ ಹೇರಳವಾಗಿದೆ. 

Read more Photos on
click me!

Recommended Stories