Tannishtha Chatterjee Cancer: ಬಾಲಿವುಡ್ ಮತ್ತು ಕಿರುತೆರೆಯಲ್ಲಿ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯೊಂದಿಗೆ ಹೋರಾಡಿದ ಅನೇಕ ತಾರೆಯರಿದ್ದಾರೆ. ಈಗ ನಟಿ ತನ್ನಿಷ್ಠ ಚಟರ್ಜಿ ಅವರ ಹೆಸರೂ ಈ ಪಟ್ಟಿಗೆ ಸೇರ್ಪಡೆಯಾಗಿದೆ. ಸದ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಮಾಡುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
27
ಸ್ಟೇಜ್ 4 ಆಲಿಗೋ ಮೆಟಾಸ್ಟಾಟಿಕ್ ಕ್ಯಾನ್ಸರ್ ನಿಂದ ಬಳಲುತ್ತಿರುವ ತನ್ನಿಷ್ಠ, ತಮಗೆ ಕ್ಯಾನ್ಸರ್ ಇರುವ ವಿಷಯವನ್ನ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಬಳಕೆದಾರರು ಸಹ ಭಾವುಕರಾಗಿದ್ದಾರೆ. ಈಗ ನಟಿಯ ಕೂದಲು ಉದುರುತ್ತಿರುವುದು ಕಂಡುಬಂದಿದೆ. ಆದರೂ ಅವರು ನಗುತ್ತಿದ್ದಾರೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರು ತಮ್ಮ ದೊಡ್ಡ ಶಕ್ತಿ ಎಂದು ತನ್ನಿಷ್ಠ ಹೇಳಿದ್ದಾರೆ.
37
ತನ್ನಿಷ್ಠ ಚಟರ್ಜಿ, ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಹಂಚಿಕೊಂಡು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. "ಕಳೆದ ಎಂಟು ತಿಂಗಳುಗಳು ನನಗೆ ತುಂಬಾ ಕಷ್ಟಕರವಾಗಿತ್ತು. ಇತ್ತೀಚೆಗೆ, ನಾನು ಕ್ಯಾನ್ಸರ್‌ನಿಂದಾಗಿ ನನ್ನ ತಂದೆಯನ್ನು ಕಳೆದುಕೊಂಡೆ ಮತ್ತು ಈಗ ನನಗೂ ಈ ಕಾಯಿಲೆ ಇರುವುದು ಪತ್ತೆಯಾಗಿದೆ" ಎಂದು ಅವರು ಬರೆದುಕೊಂಡಿದ್ದಾರೆ.
47
"ನನ್ನ ಈ ಪೋಸ್ಟ್ ಯಾವುದೇ ನೋವು ಅಥವಾ ದುಃಖ ತೋಡಿಕೊಳ್ಳುವುದಕ್ಕೆ ಅಲ್ಲ, ಆದರೆ ಇದು ಪ್ರೀತಿ ಮತ್ತು ಶಕ್ತಿಯ ಕಥೆ ಎಂದು ತನೀಶಾ ಹೇಳಿದ್ದಾರೆ. ಇದಕ್ಕಿಂತ ಕೆಟ್ಟದ್ದು ಯಾವುದೂ ಇಲ್ಲ. 70 ವರ್ಷದ ತಾಯಿ ಮತ್ತು 9 ವರ್ಷದ ಮಗಳು. ಇಬ್ಬರೂ ಸಂಪೂರ್ಣವಾಗಿ ನನ್ನ ಮೇಲೆ ಅವಲಂಬಿತರಾಗಿದ್ದಾರೆ" ಎಂದು ತಿಳಿಸಿದ್ದಾರೆ ತನ್ನಿಷ್ಠ.
57
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನಿಷ್ಠ, "ಅತ್ಯಂತ ಕಷ್ಟದ ಕ್ಷಣಗಳಲ್ಲಿ ನನ್ನ ಸ್ನೇಹಿತರು ಮತ್ತು ಕುಟುಂಬದಿಂದ ನನಗೆ ಅಪಾರ ಪ್ರೀತಿ ಸಿಕ್ಕಿದೆ. ಅವರ ಬೆಂಬಲವು ಅತ್ಯಂತ ಕಷ್ಟದ ದಿನಗಳಲ್ಲಿಯೂ ನನ್ನ ಮುಖದಲ್ಲಿ ನಿಜವಾದ ನಗುವನ್ನು ತಂದಿದೆ. ಇಂದಿನ ಯಾಂತ್ರಿಕ ಜಗತ್ತಿನಲ್ಲಿ, ಮಾನವರ ನಿಜವಾದ ಸಹಾನುಭೂತಿ ಮತ್ತು ಮಾನವೀಯತೆಯೇ ನನ್ನನ್ನು ಉಳಿಸುತ್ತಿದೆ." ಎಂದಿದ್ದಾರೆ.
67
ತನ್ನಿಷ್ಠ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕೆಲವು ವಿಶೇಷ ಸ್ನೇಹಿತರನ್ನು ಸಹ ಉಲ್ಲೇಖಿಸಿದ್ದಾರೆ. ಅವರಲ್ಲಿ ಶಬಾನಾ ಅಜ್ಮಿ, ದಿಯಾ ಮಿರ್ಜಾ, ಕೊಂಕಣ ಸೇನ್ ಶರ್ಮಾ, ದಿವ್ಯಾ ದತ್ತಾ, ರಿಚಾ ಚಡ್ಡಾ, ಸಹನಾ ಗೋಸ್ವಾಮಿ, ಅಲಿ ಫಜಲ್ ಮತ್ತು ಸುನಿತಾ ರಾಜ್ವರ್ ಮುಂತಾದ ಕಲಾವಿದರು ಸೇರಿದ್ದಾರೆ.
77
ವಿಶೇಷ ಬೆಂಬಲ ನೀಡಿದ್ದಕ್ಕಾಗಿ ಅವರು ತಮ್ಮ ಮಹಿಳಾ ಸ್ನೇಹಿತರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈಗ ಜನರು ತನ್ನಿಷ್ಠ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಅಭಿಮಾನಿಗಳು ಅವರು ಬೇಗನೆ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಧೈರ್ಯದ ಕಥೆ ಕೇಳಿ ಅವರನ್ನು ಪ್ರೇರೇಪಿಸುತ್ತಿದ್ದಾರೆ.