ನಿದ್ದೆಗೆ ಸಂಬಂಧಿಸಿದ ಈ ತಪ್ಪು 172 ಕಾಯಿಲೆಗೆ ಕಾರಣವಾಗ್ಬೋದು; ಅಧ್ಯಯನದಲ್ಲಿ ಬಹಿರಂಗ

Published : Jul 30, 2025, 11:18 AM ISTUpdated : Jul 30, 2025, 01:03 PM IST

ನಾವೆಲ್ಲಾ 7-9 ಗಂಟೆಗಳ ನಿದ್ದೆ ಅತ್ಯಗತ್ಯ ಎಂದು ಭಾವಿಸಿದ್ದೇವೆ ಅಲ್ಲವೇ, ಆದರೆ ನಿಜ ಹೇಳಬೇಕೆಂದರೆ ಸರಿಯಾದ ಸಮಯದಲ್ಲಿ ನಿದ್ದೆ ಮಾಡುವುದು ಮತ್ತು ನಿದ್ದೆ ಗುಣಮಟ್ಟವು ಆರೋಗ್ಯಕ್ಕೆ ಹೆಚ್ಚು ಮುಖ್ಯ.

PREV
16

ಹೆಚ್ಚು ನಿದ್ದೆ ಮಾಡುವುದರಿಂದಲೂ ಹೃದಯ ಕಾಯಿಲೆ, ಖಿನ್ನತೆ ಮತ್ತು ಅಕಾಲಿಕ ಮರಣವೂ ಸಂಭವಿಸಬಹುದು ಎಂದು ನಿದ್ದೆ ತಜ್ಞರು ವರ್ಷಗಳಿಂದ ಎಚ್ಚರಿಸುತ್ತಿದ್ದಾರೆ. ಏತನ್ಮಧ್ಯೆ ನಿದ್ದೆಯ ಕುರಿತಾದ ವಿಶ್ವದ ಅತಿದೊಡ್ಡ ಅಧ್ಯಯನವು ಈ ಚಿಂತನೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇತ್ತೀಚಿನ ಸಂಶೋಧನೆಯು ನಿಜವಾದ ಸಮಸ್ಯೆ ನಿದ್ದೆಯ ಪ್ರಮಾಣವಲ್ಲ ಎಂದು ಸ್ಪಷ್ಟಪಡಿಸಿದೆ.

26

ಜನರು ಸಾಮಾನ್ಯವಾಗಿ 8 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ವಿಜ್ಞಾನಿಗಳು ಫಿಟ್‌ನೆಸ್ ಟ್ರ್ಯಾಕರ್‌(Fitness tracker) ಗಳೊಂದಿಗೆ ಅವರ ನಿಜವಾದ ನಿದ್ದೆಯನ್ನು ಅಳೆದಾಗ ಅನೇಕ ಜನರು 6 ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡುತ್ತಿದ್ದಾರೆ ಎಂದು ಅವರು ಕಂಡುಕೊಂಡರು.

36

ಜೂನ್ 3, 2025 ರಂದು ಹೆಲ್ತ್ ಡೇಟಾ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು ಸುಮಾರು 90,000 ಜನರನ್ನು 7 ವರ್ಷಗಳ ಕಾಲ ಟ್ರ್ಯಾಕ್ ಮಾಡಿದೆ. ಇದರಲ್ಲಿ ಭಾಗವಹಿಸುವವರು ತಮ್ಮ ಮಣಿಕಟ್ಟಿನ ಮೇಲೆ ಫಿಟ್‌ನೆಸ್ ಟ್ರ್ಯಾಕರ್‌ಗಳನ್ನು ಧರಿಸಿದ್ದರು. ಇದು ಅವರ ನಿದ್ದೆಯ ಬಗ್ಗೆ ನಿಖರವಾದ ಡೇಟಾವನ್ನು ಒದಗಿಸಿತು. 8 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡಿದ್ದೇವೆ ಎಂದು ಹೇಳಿದವರಲ್ಲಿ ಅನೇಕರು ವಾಸ್ತವವಾಗಿ 6 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡುತ್ತಾರೆ ಎಂದು ಕಂಡುಬಂದಿದೆ. ಹಾಗೆ ನೋಡಿದರೆ ಹಿಂದಿನ ಅಧ್ಯಯನಗಳು ನಿದ್ದೆ ಮತ್ತು ರೋಗದ ನಡುವೆ ತಪ್ಪು ಸಂಪರ್ಕವನ್ನು ಮಾಡಿದ್ದವು.

46

ಈ ಅಧ್ಯಯನದ ನೇತೃತ್ವವನ್ನು ಚನಾದ ಮೂರನೇ ಮಿಲಿಟರಿ ವೈದ್ಯಕೀಯ ವಿಶ್ವವಿದ್ಯಾಲಯದ ಡಾ. ಕಿಂಗ್ ಚೆನ್ ವಹಿಸಿದ್ದರು. ನೀವು ಎಷ್ಟು ಗಂಟೆ ನಿದ್ರಿಸುತ್ತೀರಿ ಎಂಬುದು ಮುಖ್ಯವಲ್ಲ, ನೀವು ಯಾವಾಗ ನಿದ್ರಿಸುತ್ತೀರಿ, ಎಷ್ಟು ಬಾರಿ ಎಚ್ಚರಗೊಳ್ಳುತ್ತೀರಿ ಮತ್ತು ನಿಮ್ಮ ನಿದ್ದೆಯ ಮಾದರಿಯು ಪ್ರತಿದಿನ ಎಷ್ಟು ಸ್ಥಿರವಾಗಿರುತ್ತದೆ ಎಂಬುದು ಹೆಚ್ಚು ಮುಖ್ಯ ಎಂದು ಸಂಶೋಧನೆ ಬಹಿರಂಗಪಡಿಸಿದೆ. ನಿದ್ದೆಯ ಅಡಚಣೆಗಳು, ಅಂದರೆ ಕೆಲವೊಮ್ಮೆ ತಡರಾತ್ರಿ ಮಲಗುವುದು, ಕೆಲವೊಮ್ಮೆ ಬೇಗನೆ ಮಲಗುವುದು, ಕೆಲವೊಮ್ಮೆ ಸಾಕಷ್ಟು ನಿದ್ದೆ ಬರದಿರುವುದು 172 ರೋಗಗಳ ಅಪಾಯದೊಂದಿಗೆ ಸಂಬಂಧ ಹೊಂದಿವೆ ಎಂದು ಕಂಡುಬಂದಿದೆ.

56

ಈ ಸಂಶೋಧನೆಯಲ್ಲಿ ನಿದ್ರಾ ಭಂಗವು ಪಾರ್ಕಿನ್ಸನ್ ಕಾಯಿಲೆಯ ಅಪಾಯವನ್ನು ಶೇ.37 ರಷ್ಟು, ಟೈಪ್ 2 ಮಧುಮೇಹವು ಶೇ.36 ರಷ್ಟು ಮತ್ತು ತೀವ್ರ ಮೂತ್ರಪಿಂಡ ವೈಫಲ್ಯದ ಅಪಾಯವನ್ನು ಶೇ.22 ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಉತ್ತಮ ನಿದ್ದೆಯಿಂದ ಮಾತ್ರ 92 ಕಾಯಿಲೆಗಳ ಪ್ರಕರಣಗಳಲ್ಲಿ ಶೇ.20 ರಷ್ಟು ತಡೆಯಬಹುದು ಎಂದು ಸಹ ಕಂಡುಬಂದಿದೆ.

66

ಇಲ್ಲಿಯವರೆಗೆ ಆರೋಗ್ಯ ತಜ್ಞರು 7–9 ಗಂಟೆಗಳ ನಿದ್ದೆ ಮಾಡುವಂತೆ ಒತ್ತಾಯಿಸುತ್ತಿದ್ದರು, ಆದರೆ ಈ ಅಧ್ಯಯನವು ನಿದ್ದೆ ನಿಯಮಿತವಾಗಿ ಮತ್ತು ಸ್ಥಿರವಾಗಿರುವುದು ಹೆಚ್ಚು ಮುಖ್ಯ ಎಂದು ತೋರಿಸಿದೆ. ಅನಿಯಮಿತ ನಿದ್ದೆಯು COPD (ಶ್ವಾಸಕೋಶದ ಕಾಯಿಲೆ), ಮೂತ್ರಪಿಂಡ ವೈಫಲ್ಯ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯದೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಸಂಬಂಧಿಸಿದೆ ಎಂದು ಕಂಡುಬಂದಿದೆ. ಅಮೆರಿಕದ NHANES ಅಧ್ಯಯನವು ಸಹ ಈ ಫಲಿತಾಂಶಗಳನ್ನು ಬೆಂಬಲಿಸಿದೆ.

Read more Photos on
click me!

Recommended Stories