ತಾಜ್ ಮಹಲ್ ಮುಂದೆ ತಾವೆ ಮುಮ್ತಾಜ್ ಆದ ಪ್ರಿಯಾಮಣಿಗೆ… ಗಂಡನಿಂದ ಸಿಹಿ ಮುತ್ತು

Published : Jul 29, 2025, 05:48 PM IST

ಬಹು ಭಾಷಾ ನಟಿ ಪ್ರಿಯಾಮಣಿ ಆಗ್ರಾಕ್ಕೆ ತೆರಳಿದ್ದು, ಪ್ರೀತಿಯ ಸಂಕೇತವಾದ ತಾಜ್ ಮಹಲ್ ಮುಂದೆ ತಮ್ಮ ಪ್ರೀತಿಯ ಪತಿ ಜೊತೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. 

PREV
17

ಮೂಲತಃ ಮಲಯಾಳಿ ಆದರೂ ನಮ್ಮ ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದು ಸದ್ಯ ಕನ್ನಡ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಾ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ ನಟಿ ಪ್ರಿಯಾಮಣಿ (Priyamani).

27

ಸದ್ಯಕ್ಕಂತೂ ವೆಬ್ ಸೀರೀಸ್ ಜೊತೆಗೆ ಸಿನಿಮಾಗಳಲ್ಲೂ ಪ್ರಿಯಾಮಣಿ ಬ್ಯುಸಿಯಾಗಿದ್ದಾರೆ. ಈವಾಗ ಪ್ರಿಯಾಮಣಿ ನಟಿಸಿರುವ ಗುಡ್ ವೈಫ್ (good wife)  ವೆಬ್ ಸೀರೀಸ್ ಬಿಡುಗಡೆಯಾಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.

37

ಇತ್ತೀಚೆಗಷ್ಟೇ ಪ್ರಿಯಾಮಣಿ ಅಭಿನಯದ ಆಫೀಸರ್ ಆನ್ ಡ್ಯೂಟಿ ಸಿನಿಮಾ ಮಲಯಾಲಂನಲ್ಲಿ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು. ಕುಂಜಾಕೋ ಬಾಬನ್ ನಾಯಕನಾಗಿ ನಟಿಸಿರುವ ಕ್ರೈಂ ಥ್ರಿಲ್ಲರ್ (crime thriller) ಜನರನ್ನು ಸೆಳೆದಿತ್ತು.

47

ಇಷ್ಟೇ ಅಲ್ಲ ಪ್ರಿಯಾಮಣಿ ಈಗಂತೂ ಬ್ಯುಸಿಯಾಗಿರುವ ನಟಿಯಾಗಿದ್ದು, ಜನ ನಾಯಗನ್ ಹಾಗೂ ಜೆಡಿಎನ್ ಎನ್ನುವ ಎರಡು ತಮಿಳು ಸಿನಿಮಾಗಳು ಕೂಡ ಪ್ರಿಯಾಮಣಿ ಕೈಯಲ್ಲಿದೆ. ಇವು ಯಾವಾಗ ಬಿಡುಗಡೆಯಾಗಲಿವೆ ಎನ್ನುವ ಮಾಹಿತಿ ಲಭ್ಯವಿಲ್ಲ.

57

ಸದ್ಯಕ್ಕಂತೂ ಪ್ರಿಯಾಮಣಿ ತಮ್ಮ ಶೂಟಿಂಗ್ ಗೆ ಬ್ರೇಕ್ ಕೊಟ್ಟು, ತಮ್ಮ ಪತಿ ಜೊತೆ ರೊಮ್ಯಾಂಟಿಕ್ ಆಗಿ ಸಮಯ ಕಳೆಯುತ್ತಿದ್ದಾರೆ. ಅದಕ್ಕಾಗಿಯೇ ಅವರು ಆಗ್ರಾಕ್ಕೆ ತೆರಳಿದ್ದು, ಪ್ರೇಮ ಸೌಧ ತಾಜ್ ಮಹಲ್ ಗೆ (Taj Mahal)ಭೇಟಿ ಕೊಟ್ಟಿದ್ದಾರೆ.

67

ಪ್ರಿಯಾಮಣಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಅದರ ಜೊತೆಗೆ ಅಮೃತಶಿಲೆಯಲ್ಲಿ ಕೆತ್ತಿದ ಪ್ರೇಮಕಥೆ ನೋಡಲು ಅದ್ಭುತ!!! ಪ್ರೀತಿಯ ಭರವಸೆ!! ಮುಮ್ತಾಜ್ - ಶಹಜಹಾನ್. ತಾಜ್ ಮಹಲ್ ಶಾಶ್ವತ ಎಂದು ಬರೆದುಕೊಂಡಿದ್ದಾರೆ.

77

ಅಷ್ಟೆ ಅಲ್ಲ ಗಂಡನ ಜೊತೆಗೆ ನಿಂತಿರುವ ಫೋಟೊವನ್ನು ಸಹ ಪ್ರಿಯಾಮಣಿ ಶೇರ್ ಮಾಡಿದ್ದು, ಮುದ್ದಿನ ಪತಿ ಮುಸ್ತಾಫಾ ರಾಜ್ (Mustafa Raj) ಪ್ರಿಯಾಮಣಿ ಅವರ ಹಣೆಗೆ ಪ್ರೇಮ ಸೌಧದ ಮುಂದೆಯೇ ಮುತ್ತಿನ್ನಿಡುವ ಮೂಲಕ, ತಮ್ಮ ಪ್ರೀತಿಯು ಶಾಶ್ವತವಾಗಿರಲೆಂದು ಹಾರೈಸಿದ್ದಾರೆ.

Read more Photos on
click me!

Recommended Stories