ಹಸಿ ಈರುಳ್ಳಿ (Onion)
ಆಹಾರದ ಜೊತೆಗೆ ನೀವು ಸಾಕಷ್ಟು ಹಸಿ ಈರುಳ್ಳಿಯನ್ನು ಸಲಾಡ್ಗಳಾಗಿ ಸೇವಿಸಬೇಕು. ಹೃದಯವನ್ನು (Heart) ಆರೋಗ್ಯಕರವಾಗಿರಿಸುವುದರಿಂದ ಹಿಡಿದು ಸೊಂಟವನ್ನು ತೆಳುಗೊಳಿಸುವವರೆಗೆ, ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತದೆ. ಈರುಳ್ಳಿಯಲ್ಲಿ ಅನೇಕ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಕಂಡುಬರುತ್ತವೆ. 2012 ರ ಅಧ್ಯಯನದಲ್ಲಿ, ಸಂಶೋಧಕರು ನಾಲ್ಕು ವಾರಗಳ ವರೆಗೆ ಈರುಳ್ಳಿಯನ್ನು ಸೇವಿಸುವುದರಿಂದ ಒಟ್ಟಾರೆ ಟೆಸ್ಟೋಸ್ಟೆರಾನ್ ಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಿದೆ ಎಂದು ಕಂಡುಕೊಂಡಿದ್ದಾರೆ.