ಆದರೆ ನಮ್ಮಲ್ಲಿ ಬಹಳಷ್ಟು ಜನರು ವಿವಿಧ ಕಾರಣಗಳಿಗಾಗಿ ಹಾಲು ಕುಡಿಯಲು ಹಿಂಜರಿಯುತ್ತಾರೆ. ಆದಾಗ್ಯೂ ಹಾಗೆ ಮಾಡುವುದು ದೇಹಕ್ಕೆ ತುಂಬಾ ನಷ್ಟ. ನೀವು ಹಾಲು(Milk) ಕುಡಿಯಲು ಇಷ್ಟಪಡದಿದ್ದರೆ, ದೇಹದಲ್ಲಿ ಹಾಲಿನಿಂದ ಪೋಷಕಾಂಶಗಳನ್ನು ಪಡೆಯಲು, ನೀವು ಕೆಲವು ಆಹಾರಗಳನ್ನು ಸೇವಿಸಬೇಕು, ಅದು ದೇಹಕ್ಕೆ ಹಾಲಿನಂತೆಯೇ ಗುಣಲಕ್ಷಣಗಳನ್ನು ನೀಡುತ್ತದೆ. ಅವರ ಬಗ್ಗೆ ಇಲ್ಲಿ ತಿಳಿಯಿರಿ...
ಈ ಕಾರಣಗಳಿಗಾಗಿ ಹಾಲು ಕುಡಿಯಲು ಜನರು ಹಿಂಜರಿಯುತ್ತಾರೆ
ಹಾಲಿನ ವಾಸನೆ ಕೆಲವರಿಗೆ ಇಷ್ಟವಿರೋದಿಲ್ಲ, ಇನ್ನು ಕೆಲವರು ಹಾಲಿನ ಟೇಸ್ಟ್(Taste) ಇಷ್ಟಪಡುವುದಿಲ್ಲ. ಇನ್ನು ಮತ್ತೆ ಕೆಲವರಿಗೆ ಹಾಲು ಜೀರ್ಣವಾಗುವುದಿಲ್ಲ. ಮತ್ತೆ ಒಂದಿಷ್ಟು ಜನರಿಗೆ ಲೆಕ್ಟೋಸ್ ಗೆ ಅಲರ್ಜಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಹಾಲು ಕುಡಿಯಲು ಸಾಧ್ಯವಾಗೋದಿಲ್ಲ.
7 ರುಚಿಕರವಾದ ಹಾಲಿನ ಆಯ್ಕೆಗಳು. ಅಂದರೆ ನಿಮಗೆ ಹಾಲು ಇಷ್ಟವಿರದೆ ಇದ್ದರೆ , ಆದರೆ ದೇಹಕ್ಕೆ ಹಾಲಿನ ಪೋಷಕಾಂಶಗಳು ಬೇಕು ಎನಿಸಿದರೆ ನೀವು ಹಾಲಿನ ಬದಲು ಈ ಆಹಾರಗಳನ್ನು ಸೇವಿಸಬಹುದು.
1. ಸೋಯಾ ಹಾಲು
2. ಬಾದಾಮಿ(Almond)
3. ಅಣಬೆಗಳು
4. ಬಿಳಿ ಎಳ್ಳು
5. ಓಟ್ ಮೀಲ್
6. ಕಡಲೆಕಾಯಿ
7. ಹಸಿರು ಬೀನ್ಸ್
ಹಾಲಿನ ಬದಲು, ಇಲ್ಲಿ ಸೇವಿಸಲು ನಿಮಗೆ ಸಲಹೆ ನೀಡಲಾದ ಎಲ್ಲ ಆಹಾರಗಳೂ ಕ್ಯಾಲ್ಸಿಯಂ(Calcium) ಸಮೃದ್ಧವಾಗಿವೆ. ಅವು ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಇತರ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಹೊಂದಿರುತ್ತವೆ. ಇದು ಹಾಲು ಕುಡಿಯುವ ರೀತಿಯಲ್ಲಿಯೇ ದೇಹವನ್ನು ಪೋಷಿಸುತ್ತದೆ.
ಮಕ್ಕಳು ಹಾಲು ಕುಡಿಯಲು ಇಷ್ಟಪಡದಿದ್ದರೆ ಅಥವಾ ಹಾಲಿಗೆ ಅಲರ್ಜಿ(Allergy) ಹೊಂದಿದ್ದರೆ, ನೀವು ಇಲ್ಲಿ ಉಲ್ಲೇಖಿಸಿದ ಆಯ್ಕೆಗಳನ್ನು ಅವರ ದೈನಂದಿನ ಆಹಾರದಲ್ಲಿ ಸೇರಿಸಬೇಕು. ಇದರಿಂದ ಮಕ್ಕಳಿಗೆ ಹೆಚ್ಚಿನ ಪ್ರೊಟೀನ್ ಮತ್ತು ಹಾಲಿನಲ್ಲಿರುವ ಅಗತ್ಯ ಪೋಷಕಾಂಶಗಳು ಸಿಗುತ್ತವೆ.
ಬೇಸಿಗೆಯಲ್ಲಿ ಬಾದಾಮಿ ಮತ್ತು ಎಳ್ಳು ಗಳ(Sesame) ಸೇವನೆಯು ದೇಹದಲ್ಲಿ ಶಾಖಕ್ಕೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ರಸಭರಿತ ಹಣ್ಣುಗಳನ್ನು ಸೇವಿಸುವುದು ಬಹಳ ಮುಖ್ಯ. ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವುದಿಲ್ಲ ಮತ್ತು ದೇಹವು ಸಂಪೂರ್ಣ ಪೋಷಣೆಯನ್ನು ಪಡೆಯುತ್ತದೆ.
ನೀವು ಈ ಹಣ್ಣುಗಳನ್ನು ತಿನ್ನಬಹುದು. ಈ ಹಣ್ಣುಗಳಿಗೆ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಇರುವುದರಿಂದ ನಿಮ್ಮ ಆರೋಗ್ಯಕ್ಕೆ ಇದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ. ನೀವು ಸೇವಿಸಬಹುದಾದ ಹಣ್ಣುಗಳು ಯಾವುವು ಎಂದರೆ...
1.ಕರಬೂಜ
2. ಕಲ್ಲಂಗಡಿ(Watermelon)
3. ಸೌತೆಕಾಯಿ
4. ದ್ರಾಕ್ಷಿ
5. ಕಿತ್ತಳೆ
6. ಎಳನೀರು
ಯಾವುದೇ ಕಾರಣಕ್ಕೂ ಹಾಲು ಕುಡಿಯಲು ಸಾಧ್ಯವಾಗದವರು, ಖಂಡಿತವಾಗಿಯೂ ಪ್ರತಿದಿನ ಒಂದು ಎಳನೀರನ್ನು(Tender coconut) ಸೇವಿಸಬೇಕು. ಎಳನೀರಿನ ವಿಶೇಷವೆಂದರೆ, ಇದು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಜೊತೆಗೆ, ದೇಹವನ್ನು ತಂಪಾಗಿಸಲು ಕೆಲಸ ಮಾಡುತ್ತದೆ.
ಇನ್ನು ನೀವು ಪ್ರತಿದಿನ ಬಾದಾಮಿ, ಎಳ್ಳು ಅಥವಾ ಕಡಲೆಕಾಯಿಗಳನ್ನು(Peanut) ಸೇವಿಸಿದಾಗ, ನಿಮಗೆ ಹೆಚ್ಚಿನ ಶಾಖವನ್ನು ಅನುಭವಿಸುವ ಸಮಸ್ಯೆ ಇರುವುದಿಲ್ಲ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರು ಸಹ ಇದನ್ನ ಸೇವನೆ ಮಾಡಬಹುದು. ಉತ್ತಮ ಆರೋಗ್ಯಕ್ಕಾಗಿ, ನೀವು ಇದನ್ನು ಸೇವಿಸಬಹುದು.