ಹೂಸು ಅಸಹಜವಲ್ಲ. ಅಸಹಜವಾಗಿ ತೆಗೆದುಕೊಳ್ಳುವುದೇ ಹೆಚ್ಚು. ಹಾಗಾಗಿ ಹೂಸು ಬಂದರೆ ಜೀವ ಬಾಯಿಗೆ ಬಂದಂತಾಗುತ್ತದೆ. ಅತ್ತ ಹೂಸು ಬಿಟ್ಟರೆ ಕೆಲವರು ನಕ್ಕರೆ, ಅಪಹಾಸ್ಯ ಮಾಡಿದರೆ, ವಾಸನೆಗೆ ಕೆಟ್ನಾಗಿ ರಿಯಾಕ್ಟ್ ಮಾಡಿದರೆ ಏನು ಮಾಡೋದು ಅನ್ನೋ ತಳಮಳ. ಇನ್ನೊಂದೆಡೆ ಹೊರ ಬಿಡದಿದ್ದರೆ ಗ್ಯಾಸ್ ತುಂಬಿಕೊಂಡು ವೇದನೆ, ಸಂಕಟ. ಹಾಗೆ ನೋಡಿದರೆ ಫಾರ್ಟಿಂಗ್ ಅಥವಾ ಹೂಸು ಅನಾರೋಗ್ಯದ ಲಕ್ಷಣವಲ್ಲ. ಹೂಸು ಬಿಡುವುದು ಆರೋಗ್ಯಕರ. ಏಕೆಂದರೆ ಇದು ದೇಹದ ಹೆಚ್ಚುವರಿ ಅನಿಲವನ್ನು ಹೊರ ಹಾಕುತ್ತದೆ. ಇಲ್ಲದಿದ್ದರೆ ಹೊಟ್ಟೆಯುಬ್ಬರ, ನೋವು ಅನುಭವಿಸಬೇಕು.
ಹೂಸಿನ ಸಮಸ್ಯೆ ಸಾಮಾನ್ಯ. ಅತಿಯಾಗಿ ಕಾಡುತ್ತಿದ್ದರೆ, ಫಾರ್ಟಿಂಗ್ ನಿಲ್ಲಿಸುವುದು ಹೇಗೆ? ಸಾಮಾಜಿಕವಾಗಿ ಅವಮಾನ ಎದುರಿಸಬೇಕಾದ ಈ ಸಮಸ್ಯೆಗೆ ನಮ್ಮ ಆಹಾರ ಪದ್ಧತಿಯೇ ಕಾರಣ. ಜೀರ್ಣಕ್ರಿಯೆ ಮತ್ತು ಉಸಿರಾಟದಿಂದ ಸಣ್ಣ ಕರುಳಲ್ಲಿ ಗ್ಯಾಸ್ ಸಂಗ್ರಹವಾಗಿ ವಾಯು ಅಥವಾ ಗ್ಯಾಸ್ ಎಂದು ಕರೆಯಲ್ಪಡುವ ಈ ಹೂಸು ಬಿಡುಗಡೆಯಾಗುತ್ತದೆ. ಇದು ಹೆಚ್ಚುವರಿ ತೇಗು ಅಥವಾ ಹೂಸಿನ ರೂಪದಲ್ಲಿ ಹೊರ ಬರುತ್ತದೆ.
ಇದಕ್ಕೆ ಕಾರಣಗಳೂ ಇವೆ. ಸೂಕ್ತ ರೀತಿಯಲ್ಲಿ ಆಹಾರ ಜಗಿಯದಿದ್ದರೆ, ಕಾರ್ಬೊನೇಟೆಡ್ ಪಾನೀಯ ಸೇವನೆ, ಟೈಪ್ 2 ಡಯಾಬಿಟಿಸ್, ಬ್ಯಾಕ್ಟೀರಿಯಾವನ್ನು ಹೆಚ್ಚಿಸುವ ಯಕೃತ್ತಿನ ಕಾಯಿಲೆಯಿಂದ ಆ ಸಮಸ್ಯೆ ಕಾಡುತ್ತದೆ. ಹೆಚ್ಚಿನ ಸಲ ಹೂಸು ವಾಸನೆ ಇರುವುದಿಲ್ಲ. ಕೆಲವು ಸಲ ವಾಸನೆಯೂ ಇರುತ್ತದೆ. ಆದರೆ ಸದ್ದು ಮಾಡೋಲ್ಲ.
ಜನ ಇಂಥ ವಸ್ತುನೂ ಖರೀದಿ ಮಾಡ್ತಾರಾ? ತನ್ನ ಹೂಸು, ಬೆವರು ಮಾರಿ, ಲಕ್ಷ ಗಳಿಸಿದ ಮಹಿಳೆ!
ಕೆಟ್ಟ ವಾಸನೆಯಿಂದ ಕೂಡಿದ ಹೂಸಾದರೆ ತಿನ್ನುವ ಆಹಾರದ ಬಗ್ಗೆ ಗಮನ ವಹಿಸಬೇಕು. ಆರೋಗ್ಯಕರ ಜೀವನಕ್ಕೆ ಮಿತವಾಗಿ ತಿನ್ನುವುದು ಒಳ್ಳೇದು. ಕಡಿಮೆ ತಿನ್ನುವುದು ಜೀರ್ಣ ಕ್ರಿಯೆಯನ್ನು ಉತ್ತಮ ಗೊಳಿಸುತ್ತದೆ. ಅತಿ ಆಹಾರ ಸೇವನೆ ಬೊಜ್ಜು ಸಹ ಫಾರ್ಟಿಂಗ್‌ಗೆ ಕಾರಣ.
ಕಡಿಮೆ ತಿನ್ನುವ ಜೊತೆಗೆ, ಸೂಕ್ತ ರೀತಿಯಲ್ಲಿ ಆಹಾರ ತಿನ್ನಬೇಕು. ಆಹಾರವನ್ನು ಚೆನ್ನಾಗಿ ಜಗಿದು, ಅಗೆದು ತಿನ್ನುವುದು ಒಳ್ಳೇದು. ಬೇಗ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಗಾಳಿ ಪ್ರವೇಶಿಸಬಹುದು. ಇದು ನಿಮ್ಮ ಗ್ಯಾಸಿಗೆ ಸಹ ಕಾರಣವಾಗುತ್ತದೆ. ಸಿಗರೇಟ್ ವಿಪರೀತ ಸೇವನೆಯೂ ಹೊಟ್ಟೆಯಸ್ಸಿ ಗ್ಯಾಸ್ ಉಂಟು ಮಾಡುತ್ತದೆ. ಧೂಮಪಾನ ಮಾಡುವವರಲ್ಲಿ ಮಲಬದ್ಧತೆಯೂ ಹೆಚ್ಚು. ಅದಕ್ಕೆ ಗ್ಯಾಸ್ಟ್ರಿಕ್ ಹೆಚ್ಚುತ್ತದೆ.
ಹೌದು! ಪಬ್ಲಿಕ್‌ನಲ್ಲಿ ಹೂಸು ಬಿಟ್ಟಿದ್ದೀನಿ ಆದರೆ ಸೈಲೆಂಟ್ ಆಗಿ: ಪ್ರಿಯಾಂಕಾ ಚೋಪ್ರಾ
ಕೊಬ್ಬಿರೋ ಆಹಾರ, ಪಾನೀಯವೂ ಈ ಅನಾರೋಗ್ಯಕರ ಆಹಾರ ಪದ್ಧತಿ ಗ್ಯಾಸಿಗೆ ಕಾರಣ. ಫ್ರುಕ್ಟೋಸ್ ಮತ್ತು ಸೋರ್ಬಿಟೋಲ್ನಂತಹ ಅನಿಲವನ್ನು ಉಂಟುಮಾಡುವ ಸಿಹಿ ಪದಾರ್ಥಗಳನ್ನು ಅವೈಡ್ ಮಾಡಿ. ಹೂಸಿಗೆ ಆಹಾರದೊಂದಿಗೆ ವೈದ್ಯಕೀಯ ಪರಿಸ್ಥಿತಿಗಳೂ ಕಾರಣವಾಗಬಲ್ಲದು. ಉರಿಯೂತದ ಕರುಳಿನ ಅನಾರೋಗ್ಯ, ತಿನ್ನುವ ಅಸ್ವಸ್ಥತೆಗಳು ಮತ್ತು ಕ್ರೋನ್ಸ್ ಕಾಯಿಲೆಯೂ ಫಾರ್ಟಿಂಗ್‌ಗೆ ಕಾರಣ.
ಹೂಸು ತಡೆಯೋದು ಹೇಗೆ?
ಹಲವು ಆರೋಗ್ಯ ಸಮಸ್ಯೆಗೆ ನೀರು ಸೇವನೆಯೇ ಮದ್ದು. ಸಾಧ್ಯವಾದಷ್ಟು ನೀರು ಕುಡಿಯಬೇಕು. ನೀರಿನೊಂದಿಗೆ ಮಜ್ಜಿಗೆ, ಮೊಸರು ಸೇವಿಸಬಹುದು. ಮಸಾಲಾ ಪದಾರ್ಥ ಲವಂಗ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ರೋಗಗಳ ಹೊರೆಯಿಂದ ರಕ್ಷಿಸುವ ಅನೇಕ ಔಷಧೀಯ ಗುಣಗಳಿವೆ. ಲವಂಗದ ಟೀ ವಿವಿಧ ಸೋಂಕುಗಳನ್ನು ತಡೆಯಬಲ್ಲದು.
ಊಟಕ್ಕೆ ಗಂಟೆ ಮೊದಲು ಲವಂಗದಿಂದ ಮಾಡಿದ ಕಪ್ ಚಹಾ ಕುಡಿದರೆ ಅಜೀರ್ಣದ ಸಮಸ್ಯೆಗೆ ಗುಡ್ ಬೈ ಹೇಳಬಹುದು. ಹೊಟ್ಟೆ ಅಸ್ವಸ್ಥತೆ ಮತ್ತು ಉಬ್ಬುವಿಕೆಯಂಥ ಸಮಸ್ಯೆಗಳನ್ನೂ ನಿವಾರಿಸಬಹುದು. ಓಂಕಾಳಿನಲ್ಲಿ ಥೈಮೋಲ್ ಎಂಬ ವಸ್ತುವಿದೆ. ಇದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಇದು ಆಹಾರದಲ್ಲಿನ ವಾಯುವನ್ನು ತಡೆಯುತ್ತದೆ.
1/2 ಚಮಚ ಓಂಕಾಳು ನೀರಲ್ಲಿ ಕುದಿಸಿ ಪ್ರತಿದಿನ ಕುಡಿಯುವುದರಿಂದ ಗ್ಯಾಸ್ ಕಡಿಮೆಯಾಗುತ್ತದೆ. ಅಸಹಜವಾಗಿ ಹೂಸು ಬಿಡುತ್ತಿದ್ದರೆ ಹೊಟ್ಟೆ ಉಬ್ಬುವುದು ಮತ್ತು ಅಧಿಕ ತೇಗಿನೊಂದಿಗೆ ನೋವು ಮತ್ತು ಅಸ್ವಸ್ಥತೆಯನ್ನು ಅನುಭವಿಸಿದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ,