ಪುರುಷರೇ ಅತೀ ಬಿಸಿ ನೀರಲ್ಲಿ ಸ್ನಾನ ಮಾಡ್ತೀರಾ? ಈಗ್ಲೇ ಬಿಟ್ಟುಬಿಡಿ! ಏನೇನು ಅನಾಹುತ ಆಗಬಹುದು ನೋಡಿ

Published : Apr 07, 2025, 01:38 PM ISTUpdated : Apr 07, 2025, 02:11 PM IST

ಅಪ್ಪನಾಗುವುದೆಂದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಿದ್ಧತೆಯನ್ನು ಒಳಗೊಂಡ ಪ್ರಕ್ರಿಯೆ ಆಗಿದೆ. ಆದರೆ, ವೀರ್ಯದ ಪ್ರಮಾಣ ಗರಿಷ್ಠವಾಗಿರೋದು ಯಾವ ವಯಸ್ಸಿನಲ್ಲಿ? ಯಾವಾಗ ಮಗು ಮಾಡಿಕೊಂಡರೆ ಒಳ್ಳೇದು? ಇದಕ್ಕೆ ಬಿಸಿನೀರಿನ ಸ್ನಾನ ಪರಿಣಾಮ ಬೀರಲಿದೆಯೇ ಎಂಬ ವಿವರ ಇTಲ್ಲಿದೆ.

PREV
18
ಪುರುಷರೇ ಅತೀ ಬಿಸಿ ನೀರಲ್ಲಿ ಸ್ನಾನ ಮಾಡ್ತೀರಾ? ಈಗ್ಲೇ ಬಿಟ್ಟುಬಿಡಿ! ಏನೇನು ಅನಾಹುತ ಆಗಬಹುದು ನೋಡಿ
bathing in winter

'ನಾನೇನು ಗಂಡು?' ಯಾವ ವಯಸ್ಸಿಗೆ ಬೇಕಾದರೂ ಪುರುಷತ್ವ ತೋರಿಸಬಹುದೆಂದು ಪುರುಷ ಮಹನೀಯರು ಜಂಬ ಕೊಚ್ಚಿಕೊಳ್ಳುವುದುಂಟು. ತಾಯಿಯಾಗಲು ಹೆಣ್ಣಿನ ವಯಸ್ಸು ಸೂಕ್ತವಾಗಿದೆಯೇ ಎಂದು ಸಾಮಾನ್ಯವಾಗಿ ನೋಡುತ್ತಾರೆ. ಆದರೆ ಗಂಡಸಿಗೂ ವೀರ್ಯದ ಗುಣಮಟ್ಟ ಹಾಗೂ ಪ್ರಮಾಣಕ್ಕೂ ಸಂಬಂಧವಿದೆ. ವೀರ್ಯದ ಗುಣಮಟ್ಟ ವಯಸ್ಸಾದಂತೆ ಕುಸಿಯುತ್ತದೆ. ಹಾಗಾದರೆ ಯಾವ ವಯಸ್ಸಿನಲ್ಲಿ ತಂದೆಯಾಗೋದು ಬೆಸ್ಟ್? ಪುರುಷರು 50-60ನೇ ವಯಸ್ಸಿನವರೆಗೂ ತಂದೆಯಾಗಬಹುದು. 92 ವರ್ಷದವರೂ ತಂದೆಯಾಗಿ ಗಿನ್ನೀಸ್ ದಾಖಲೆ ಮಾಡಿದ್ದಾರೆ. ಬದಲಾದ ಜೀವನಶೈಲಿಯಿಂದ 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿಯೇ ಇದೀಗ ಯಶಸ್ಸಿನ ಸಾಧ್ಯತೆ ಕಡಿಮೆ. ಸಂಶೋಧನೆಗಳ ಪ್ರಕಾರ ಮನುಷ್ಯರ ಫಲವತ್ತತೆ ಪ್ರಮಾಣ ಕುಸಿಯುತ್ತಿದೆ. ಜೈವಿಕ ದೃಷ್ಟಿಕೋನದಿಂದ, 20ರ ಹರೆಯದಿಂದ 30ರ ವರೆಗಿನ ವಯಸ್ಸು ಪಿತೃತ್ವಕ್ಕೆ ಸೂಕ್ತವೆನ್ನುತ್ತಾರೆ ತಜ್ಞರು.

28

ಸಾಮಾನ್ಯವಾಗಿ ಪುರುಷರಲ್ಲಿ ವೀರ್ಯ ಉತ್ಪಾದನೆ ನಿಲ್ಲುವುದಿಲ್ಲ. ಪುರುಷರಿಗೆ ವಯಸ್ಸಾದಂತೆ ಅವನ ವೀರ್ಯವೂ ಅನುವಂಶಿಕ ರೂಪಾಂತರಗೊಳ್ಳುತ್ತದೆ. ಅವನ ವೀರ್ಯದ ಡಿಎನ್‌ಎ ಹಾನಿಗೊಳಗಾಗಬಹುದು. ಇದು ಫಲವತ್ತತೆ ಮೇಲೆ ಸಹಜವಾಗಿಯೇ ಪ್ರಭಾವ ಬೀರಬಹುದು. ಆಗ ಹುಟ್ಟುವ ಮಕ್ಕಳ ಆರೋಗ್ಯದ ಮೇಲೂ ವ್ಯತಿರಿಕ್ತ  ಪರಿಣಾಮ ಬೀರಬಹುದು. 40 ವರ್ಷದ ಮೇಲೆ ತಂದೆಯಾದರೆ ಮಕ್ಕಳ ನರಗಳ ಬೆಳವಣಿಗೆಯು ಅಸ್ವಸ್ಥತೆ ಹೊಂದಬಹುದು. 2010ರಲ್ಲಿ ನಡೆದ ಅಧ್ಯಯನದಂತೆ 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಂದ ಮಕ್ಕಳು ಹುಟ್ಟಿದರೆ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಅನ್ನು ಹೊಂದುವ ಅಪಾಯ 5 ಪಟ್ಟು ಹೆಚ್ಚಿದೆ.

38
lap

ವೀರ್ಯ ಹೇಗಿರಬೇಕು?
ವಯಸ್ಸಾದಂತೆ ಪುರುಷರ ವೀರ್ಯಾಣು ಗುಣಮಟ್ಟ ಇಳಿಯುತ್ತದೆ. ವೀರ್ಯದ ಗುಣಮಟ್ಟಕ್ಕೆ ವಿಶ್ವ ಆರೋಗ್ಯ ಸಂಸ್ಥೆ ನಿಯತಾಂಕಗಳನ್ನು ನಿಗದಿಪಡಿಸಿದೆ. ಇದು ಆರೋಗ್ಯಕರ ವೀರ್ಯದ ಮಾನದಂಡ. ಇದರಲ್ಲಿ ವೀರ್ಯದ್ರವದ ವೀರ್ಯಾಣುಗಳ ಸಂಖ್ಯೆ, ಆಕಾರ ಮತ್ತು ಚಲನಶೀಲತೆಯೂ ಸೇರಿವೆ. 35 ವರ್ಷ ವಯಸ್ಸಾದ ಮೇಲೆ ವೀರ್ಯದ ನಿಯತಾಂಕಗಳು ಹದಗೆಡುತ್ತವೆ. ಸ್ಖಲನದ ನಂತರ ವಿಸರ್ಜನೆಯಾಗುವ ವೀರ್ಯದ್ರವದಲ್ಲಿ ಪ್ರತಿ ಮಿಲಿ ಲೀಟರ್‌ಗೆ ಕನಿಷ್ಠ 15 ಮಿಲಿಯ ವೀರ್ಯಾಣುಗಳಿದ್ದರೆ ಫಲವತ್ತತೆ ಹೆಚ್ಚು. ತುಂಬಾ ಕಡಿಮೆ ವೀರ್ಯವಿದ್ದರೆ ಗರ್ಭಿಣಿಯಾಗೋದು ಕಷ್ಟ. ಚಲನಶೀಲತೆಯ ವಿಷಯಕ್ಕೆ ಬಂದಾಗ, ಸ್ಖಲನದ್ರವದಲ್ಲಿ ಶೇ.40ಕ್ಕಿಂತ ಅಧಿಕ ವೀರ್ಯಾಣುಗಳು ಈಜುತ್ತಿದ್ದರೆ ಗರ್ಭಧಾರಣೆ ಸುಲಭ.

48

ಗಂಡಿನ ಹೆಚ್ಚು ಫಲವತ್ತಾದ ವಯಸ್ಸು ಎಂದರೆ 22ರಿಂದ 25 ವರ್ಷವಾಗಿದೆ. ಇನ್ನು 35 ವರ್ಷಕ್ಕಿಂತ ಮುಂಚೆಯೇ ಮಕ್ಕಳನ್ನು ಹೊಂದಿದರೆ ಉತ್ತಮವೆಂದು ತಜ್ಞರು ಹೇಳುತ್ತಾರೆ. ಹೀಗಾಗಿ, 35 ವರ್ಷ ವಯಸ್ಸಿನ ನಂತರ ಪುರುಷ ಫಲವತ್ತತೆ ಕಡಿಮೆಯಾಗುತ್ತದೆ. 35ರ ನಂತರ, ವೀರ್ಯಾಣುವಿನ ಡಿಎನ್‌ಎ ರೂಪಾಂತರವಾಗುತ್ತದೆ. ಪುರುಷನ ವಯಸ್ಸು 45 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಗರ್ಭಿಣಿ ಮಹಿಳೆಯ ವಯಸ್ಸನ್ನು ಲೆಕ್ಕಿಸದೆ (ಮಹಿಳೆ 25 ವರ್ಷಕ್ಕಿಂತ ಕಡಿಮೆ ಇದ್ದರೂ) ಗರ್ಭಪಾತವೂ ಆಗಬಹುದು.

58

ಯಾವ ವಯಸ್ಸಿನಲ್ಲಿ ತಂದೆಯಾಗಬಾರದು?
ಜರ್ನಲ್ ಆಫ್ ಎಪಿಡೆಮಿಯಾಲಜಿ ಮತ್ತು ಕಮ್ಯುನಿಟಿ ಹೆಲ್ತ್‌ನಲ್ಲಿ ಪ್ರಕಟವಾದ ಸಂಶೋಧನೆಯಂತೆ 25 ವರ್ಷಕ್ಕಿಂತ ಮೊದಲು ತಂದೆಯಾಗುವುದು ಗಂಭೀರ ಆರೋಗ್ಯ ಪರಿಣಾಮಗಳಿಗೆ ಎಡೆ ಮಾಡಿಕೊಡಬಹುದು. ಮಧ್ಯವಯಸ್ಸಿನಲ್ಲಿ ಅಕಾಲಿಕ ಮರಣಕ್ಕೂ ಕಾರಣವಾಗಬಹುದು. ಬಹಳ ಬೇಗ ತಂದೆಯಾಗುವ ಪುರುಷರು ಕಳಪೆ ಆರೋಗ್ಯ ಹೊಂದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುತವುದಿಲ್ಲ, ಎಂದು ಅಧ್ಯಯನ ಹೇಳುತ್ತದೆ. ಇದಲ್ಲದೇ ಸಣ್ಣ ವಯಸ್ಸಿನಲ್ಲಿ ಪಿತೃತ್ವಕ್ಕೆ ತಯಾರಾಗಿರದಿದ್ದಾಗ ಸೃಷ್ಟಿಯಾಗುವ ಮಾನಸಿಕ ಮತ್ತು ಆರ್ಥಿಕ ಒತ್ತಡ ಆರೋಗ್ಯವನ್ನು ಬಲಿ ಪಡೆಯಬಹುದು.

68

ಫಲವತ್ತತೆಗೆ ಜೀವನಶೈಲಿ ಅಡ್ಡಿ:
ವೀರ್ಯ ಗುಣಮಟ್ಟವನ್ನು ಹಾಳು ಮಾಡುವ ಅನೇಕ ಜೀವನಶೈಲಿ ಅಂಶಗಳನ್ನು ಹೊಂದಿರುತ್ತೇವೆ. ಕಳಪೆ ಆಹಾರ ಸೇವನೆ, ಡ್ರಗ್ಸ್‌ ಸೇವನೆ, ಧೂಮಪಾನ, ಮದ್ಯಪಾನ  ಮತ್ತು ಸ್ಥೂಲಕಾಯವೂ ಇದರಲ್ಲಿವೆ. ಆರೋಗ್ಯವಂತ, ಉತ್ತಮ ಪ್ರಮಾಣದ ವೀರ್ಯ ಉತ್ಪಾದಿಸಲು, ಪೌಷ್ಟಿಕ ಆಹಾರ ಸೇವಿಸಬೇಕು. ದೇಹದ ತೂಕ ಹೆಚ್ಚಿದ್ದರೆ, ಇಳಿಸಿಕೊಳ್ಳುವುದು ಒಳ್ಳೆಯದು. ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಆಹಾರಗಳು ಇದಕ್ಕೆ ಸಹ ಸಹಕರಿಸುತ್ತದೆ. ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಆಲ್ಕೋಹಾಲ್ ಮತ್ತು ಧೂಮಪಾನವನ್ನು ತ್ಯಜಿಸಲೇಬೇಕು.

78

ವೀರ್ಯವನ್ನು ಉತ್ಪಾದಿಸುವ ವೃಷಣಗಳು ದೇಹದ ಉಳಿದ ಭಾಗಗಳಿಗಿಂತ ಸ್ವಲ್ಪ ತಂಪಾಗಿರಬೇಕು. ತೊಡೆಸಂದಿ ತಂಪಾಗಿರುವಂತೆ ನೋಡಿಕೊಳ್ಳಿ. ತುಂಬಾ ಬಿಗಿ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಲ್ಯಾಪ್‌ಟಾಪ್ ಅನ್ನು ತೊಡೆಗಳ ಮೇಲೆ ದೀರ್ಘಕಾಲ ಇಟ್ಟಿಕೊಂಡು ಕೆಲಸ ಮಾಡಬೇಡಿ. ಬಿಸಿಯಾದ ವಾತಾವರಣದಲ್ಲಿ ಹೆಚ್ಚು ಸಮಯ ಕಳೆಯುವುದು ಅಥವಾ ದೀರ್ಘಕಾಲ ಕುಳಿತುಕೊಳ್ಳುವುದನ್ನು ಅವೈಡ್ ಮಾಡಿ. ಅತಿ ಬಿಸಿ ನೀರನಲ್ಲಿ ಸ್ನಾನ ಬೇಡ ಎಂದು ವೈದ್ಯರು ತಿಳಿಸಿದ್ದಾರೆ.

88

ಅಪ್ಪನಾಗುವುದೆಂದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಿದ್ಧತೆಯನ್ನು ಒಳಗೊಂಡ ಪ್ರಕ್ರಿಯೆ ಆಗಿದೆ. ಆದರೆ, ವೀರ್ಯದ ಪ್ರಮಾಣ ಗರಿಷ್ಠವಾಗಿರೋದು ಯಾವ ವಯಸ್ಸಿನಲ್ಲಿ? ಯಾವಾಗ ಮಗು ಮಾಡಿಕೊಂಡರೆ ಒಳ್ಳೇದು? ಇದಕ್ಕೆ ಬಿಸಿನೀರಿನ ಸ್ನಾನ ಪರಿಣಾಮ ಬೀರಲಿದೆ ಎಂಬುದನ್ನು ಸ್ವತಃ ವೈದ್ಯರೇ ದೃಢಪಡಿಸಿದ್ದಾರೆ.

Read more Photos on
click me!

Recommended Stories