ಕೆಫೀನ್(Caffeine) ದೇಹದಲ್ಲಿ ಅನೇಕ ಕೆಟ್ಟ ಪರಿಣಾಮಗಳನ್ನು ಉಂಟುಮಾಡುವ ಒಂದು ವಸ್ತುವಾಗಿದೆ. ಚಹಾ, ಕಾಫಿ, ಸೋಡಾ, ಚಾಕೊಲೇಟ್(Chocolate), ಎಲ್ಲವೂ ಕೆಫೀನ್ ಅನ್ನು ಹೊಂದಿರುತ್ತವೆ ಮತ್ತು ಕಣ್ಣುಗಳ ಸೆಳೆತವನ್ನು ಹೆಚ್ಚಿಸುತ್ತವೆ. ನೀವು ಕೆಫೀನ್ ಅನ್ನು ಕ್ರಮೇಣ ಕಡಿಮೆ ಮಾಡಬಹುದು ಅಥವಾ ಅದನ್ನು ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಬಹುದು. ಇದು ಕಣ್ಣುಗಳ ಸೆಳೆತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.