ಎಸಿ ಇಲ್ಲದೆ ಮನೆಯನ್ನು ತಂಪಾಗಿ ಇರಿಸಲು ಕೆಲವು ಟಿಪ್ಸ್!

First Published | Apr 5, 2022, 5:26 PM IST

ಬೇಸಿಗೆಯು ಶುರುವಾಗಿದೆ, ಸುಡುವ ಬಿಸಿಲಿನ ಬೇಗೆಗೆ ಜನ ಬೇಸತ್ತಿರೋದಂತು ನಿಜ.  ಈವಾಗ್ಲೇ ಹೀಗೆ ಆದ್ರೆ ಇನ್ನು ಏಪ್ರಿಲ್ ಕೊನೆಗೆ ಹೇಗಪ್ಪಾ ಬಿಸಿಲನ್ನು ಸಹಿಸೋದು ಎಂದು ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಈ ರೀತಿಯಲ್ಲಿ, ಸುಡುವ ಬಿಸಿಲಿನಲ್ಲಿ ಎಸಿ , ಫ್ಯಾನ್ ಇಲ್ಲದೆ ಮನೆಯನ್ನು ತಂಪಾಗಿಡುವುದು ಅಸಾಧ್ಯವೆಂದು ತೋರುತ್ತದೆ.

ಎಸಿ(AC) ಇಲ್ಲದೆ ಮನೆಯನ್ನು ತಂಪಾಗಿಡಿ

ಆದಾಗ್ಯೂ, ಬೇಸಿಗೆಯಲ್ಲಿ(Summer) ಎಸಿ ಇಲ್ಲದೆ ನೀವು ಮನೆಯನ್ನು ತಂಪಾಗಿಡಲು ಕೆಲವು ಕ್ರಮಗಳಿವೆ. ಏನಪ್ಪಾ ಹೇಳ್ತಿದ್ದಾರೆ ಇವ್ರು ಎಂದು ಅಂದ್ಕೊಳ್ಳಬೇಡಿ. ಹೌದು, ನೀವು ಕೆಲವೊಂದು ಟ್ರಿಕ್ಸ್ ಉಪಯೋಗಿಸಿದ್ರೆ ಈ ಸುಡು ಬೇಸಿಗೆಯಲ್ಲಿ ಎಸಿ ಇಲ್ಲದೇನೆ ಮನೆಯನ್ನು ಕೂಲ್ ಆಗಿಡಬಹುದು. ಹೇಗೆ ಅನ್ನೋದನ್ನು ನೋಡೋಣ... 

ಹೀಟ್ ರಿಫ್ಲೆಕ್ಟಿವ್ ಪೇಂಟ್

ಮನೆಯ ಹೊರಗಿನ ಗೋಡೆಗಳ ಮೇಲೆ ಹೀಟ್ ರಿಫ್ಲೆಕ್ಟಿವ್ ಪೇಂಟ್ (heat reflective paint) ಹಚ್ಚಬಹುದು, ಹಾಗೆಯೇ ಮನೆಯ ಒಳಗೆ ಸುಣ್ಣಬಣ್ಣವನ್ನು ಹಚ್ಚಬಹುದು. ಇದು ಮನೆಯ ತಾಪಮಾನವನ್ನು 5 ರಿಂದ 10 ಡಿಗ್ರಿಗಳಷ್ಟು ಕಡಿಮೆ ಮಾಡುತ್ತದೆ.ಸುಲಭ ವಿಧಾನ ಇಂದೇ ಟ್ರೈ ಮಾಡಿ. 

Tap to resize

ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಹಾಕಿ

ವಿದ್ಯುನ್ಮಾನ ಸಾಧನಗಳ ಬಳಕೆಯಿಂದಾಗಿ, ಮನೆಯ ತಾಪಮಾನವು ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ,  ಎಲೆಕ್ಟ್ರಾನಿಕ್(Electronic) ಸಾಧನಗಳ ಬಳಕೆಯನ್ನು ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಅದಕ್ಕೆ ಪರ್ಯಾಯವಾದ ಉಪಕರಣಗಳನ್ನು ಬಳಕೆ ಮಾಡುವುದು ಉಚಿತ. 

ಮನೆಯಲ್ಲಿ ಗಿಡಗಳನ್ನು(Plants) ನೆಡಿರಿ

ತಾಪಮಾನವನ್ನು ಕಾಪಾಡಿಕೊಳ್ಳಲು, ನೀವು ಮನೆಯಲ್ಲಿ ಸುಂದರವಾದ ಒಳಾಂಗಣ ಸಸ್ಯಗಳನ್ನು ನೆಡಬಹುದು. ಒಳಾಂಗಣ ಸಸ್ಯಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ, ಇದು ಮನೆಯನ್ನು ತಂಪಾಗಿರಿಸುತ್ತದೆ. ಮನೆಯ ಒಳಗಿನ ಉಷ್ಣ, ಕೆಟ್ಟ ಗಾಳಿಯನ್ನು ದೂರ ಮಾಡಿ ಶುದ್ಧ ಮತ್ತು ತಂಪಾದ ಗಾಳಿ ನೀಡುವ ಹಲವು ಗಿಡಗಳು ಲಭ್ಯವಿದೆ. 

ವಾತಾಯನ ಅಗತ್ಯ

ಮನೆಯನ್ನು ತಂಪಾಗಿಡಲು ವೆಂಟಿಲೇಷನ್(Ventilation) ಬಹಳ ಮುಖ್ಯ. ಬೆಳಿಗ್ಗೆ ಮತ್ತು ಸಂಜೆ ಕಿಟಕಿಗಳನ್ನು ತೆರೆದಿಡಿ. ಮನೆಯ ಒಳಗೆ ಗಾಳಿ ಮತ್ತು ಬೆಳಕು ಚೆನ್ನಾಗಿ ಬೀಳುವಂತೆ ನೋಡಿಕೊಳ್ಳಿ, ಇದರಿಂದ ವೆಂಟಿಲೇಷನ್ ಉತ್ತಮವಾಗಿರುತ್ತದೆ. ಹೀಗೆ ಆದರೆ ಮನೆಯೂ ಕೂಡ ತಂಪಾಗಿರಲು ಸಾಧ್ಯವಾಗುತ್ತದೆ. 

ಎಕ್ಸಾಸ್ಟ್ ಫ್ಯಾನ್(Exhaust fan) ಹಾಕಿ

ಅಡುಗೆಮನೆಯಲ್ಲಿ ಹೆಚ್ಚು ಶಾಖವಿರುತ್ತದೆ, ಬೆಳಗ್ಗೆ ಇಂದ ರಾತ್ರಿಯವರೆಗೆ ಅಡುಗೆ ಮನೆಯಲ್ಲಿ ಹೆಚ್ಚಿನ ಕೆಲಸಗಳು ನಡೆಯೋದರಿಂದ ಶಾಖ ಹೆಚ್ಚಾಗಿ, ಮನೆಯಿಡೀ ಬಿಸಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಎಕ್ಸಾಸ್ಟ್ ಫ್ಯಾನ್ ಅನ್ನು ಈ ಸ್ಥಳದಲ್ಲಿ ಇರಿಸಿ. ಇದರಿಂದ ಮನೆ ತಂಪಾಗಿರುತ್ತದೆ. 

ಸ್ಟ್ಯಾಂಡ್ ಫ್ಯಾನ್  ಬಳಕೆ

ಸ್ಟ್ಯಾಂಡ್  ಫ್ಯಾನ್ ಬಳಕೆ ಮಾಡಬೇಕು, ಮತ್ತು ಹೆಚ್ಚು ಸೆಕೆಯಾದಾಗ ಅದರ ಮುಂದೆ ಐಸ್ ಕ್ಯೂಬ್(Ice cube) ತುಂಬಿದ ಬೌಲ್ ಅನ್ನು ಇರಿಸುವುದರಿಂದ  ಮನೆಯನ್ನು ತಂಪಾಗಿರಿಸುತ್ತದೆ ಮತ್ತು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ. ನೀವು ಸಹ ಆರಾಮವನ್ನು ಪಡೆಯಲು ಸಾಧ್ಯವಾಗುತ್ತದೆ.

ಕಾರ್ಪೆಟ್ ಗಳನ್ನು(Carpet) ಹಾಕಬೇಡಿ

ಬೇಸಿಗೆಯಲ್ಲಿ ಕಾರ್ಪೆಟ್ ಗಳನ್ನು ಹಾಕಬೇಡಿ, ಏಕೆಂದರೆ ಕಾರ್ಪೆಟ್ ಗಳು ನೆಲವನ್ನು ಬಿಸಿ ಮಾಡುತ್ತವೆ. ಹೆಚ್ಚು ಹೆಚ್ಚು ಶಾಖ ಉತ್ಪತ್ತಿಯಾದರೆ ಪೂರ್ತಿ ಮನೆ ಬಿಸಿಯಾಗುತ್ತದೆ. ಆದುದರಿಂದ ಸಾಧ್ಯವಾದಷ್ಟು ಕಾರ್ಪೆಟ್ ನ್ನು  ಬೇಸಿಗೆಯಲ್ಲಿ ಬಳಕೆ ಮಾಡದೇ ಇರಲು ಟ್ರೈ ಮಾಡಿ. 

Latest Videos

click me!