Parenting Tips: ಮಕ್ಕಳಿಗೆ ತರಕಾರಿಗಳನ್ನು ತಿನ್ನಿಸೋದು ಕಷ್ಟ ಅನಿಸ್ತಿದ್ಯಾ, ಹೀಗೆ ಮಾಡಿ ನೋಡಿ!

First Published | Sep 21, 2022, 5:50 PM IST

ಮಕ್ಕಳಿಗೆ ತಿನ್ನಿಸೋದಕ್ಕಿಂತ ಹೆಚ್ಚು ಕಷ್ಟದ ಕೆಲಸ ಬೇರೊಂದಿಲ್ಲ ಎಂಬುದು ಎಲ್ಲ ತಾಯಂದಿರ ಗೋಳು. ಹಸಿರು ತರಕಾರಿಗಳನ್ನು ನೋಡಿದ ತಕ್ಷಣ ಮಕ್ಕಳು ಮುಖ ತಿರುಗಿಸ್ತಾರೆ. ಅವರು ಆಹಾರ ಅಥವಾ ತರಕಾರಿಗಳಲ್ಲಿ ರುಚಿ ಸಹ ನೋಡೋದಿಲ್ಲ, ಆದರೆ ತರಕಾರಿಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಎಲ್ಲಾ ವಿಟಮಿನ್ಸ್ ಮತ್ತು ಮಿನರಲ್ಸ್ ಗಳು ಮಕ್ಕಳ ಬೆಳವಣಿಗೆಗೆ ಅತ್ಯಗತ್ಯ. ಹಾಗಾದರೆ ಮಕ್ಕಳಿಗೆ ತರಕಾರಿ ತಿನ್ನೋ ಹಾಗೇ ಮಾಡೋದು ಹೇಗೆ ನೋಡೋಣ…

 ತರಕಾರಿಗಳು(Vegetables) ವಿಟಮಿನ್ಸ್ ಮತ್ತು ಮಿನರಲ್ಸ್ ಹೊಂದಿರುತ್ತವೆ. ಪ್ರತಿಯೊಬ್ಬ ತಾಯಿಯೂ ಮಗುವಿನ ಆಹಾರದಲ್ಲಿ ತರಕಾರಿಗಳನ್ನು ಸೇರಿಸಲು ಬಯಸುತ್ತಾರೆ. ನೀವು ಬಯಸಿದರೆ, ಆರಂಭದಲ್ಲಿ ಕೆಲವು ರುಚಿಕರ ಮತ್ತು ಆಕರ್ಷಕ ರೀತಿಯಲ್ಲಿ ಮಕ್ಕಳಿಗೆ ತರಕಾರಿಗಳನ್ನು ತಿನ್ನಿಸಬಹುದು. ಇದರೊಂದಿಗೆ, ತರಕಾರಿಗಳನ್ನು ತಿನ್ನೋದರಲ್ಲಿ ಮಗುವಿಗೆ ಆಸಕ್ತಿ ಮೂಡಲು ಪ್ರಾರಂಭಿಸುತ್ತೆ ಮತ್ತು ಮಕ್ಕಳು ಅವುಗಳ ರುಚಿಯ ಬಗ್ಗೆ ಅರಿತುಕೊಳ್ಳಲು ಪ್ರಾರಂಭಿಸುತ್ತಾರೆ. ಮಕ್ಕಳ ಆಹಾರದಲ್ಲಿ ನೀವು ಈ ರೀತಿಯಾಗಿ ತರಕಾರಿಗಳನ್ನು ಸೇರಿಸಬಹುದು. 

ಮಕ್ಕಳಿಗೆ ತರಕಾರಿಗಳನ್ನು ತಿನ್ನಿಸಲು ಸುಲಭ ವಿಧಾನ ಇಲ್ಲಿದೆ ನೋಡಿ 

ವೆಜ್ ಸ್ಯಾಂಡ್ ವಿಚ್(Veg Sandwich) ತಯಾರಿಸಿ : 
ಮಕ್ಕಳು ಸ್ಯಾಂಡ್ ವಿಚ್ ಇಷ್ಟಪಡುತ್ತಾರೆ. ನೀವು ಸ್ಯಾಂಡ್ ವಿಚ್ ನಲ್ಲಿ ಸ್ವಲ್ಪ ತರಕಾರಿಗಳನ್ನು ತುರಿದು ಅದನ್ನು ತುಂಬಬಹುದು.  ಇದಕ್ಕೆ ನೀವು ಸೌತೆಕಾಯಿ, ಟೊಮೆಟೊ, ಬೀನ್ಸ್, ಲೆಟ್ಯೂಸ್ ಮತ್ತು ಪಾಲಕ್ ಸೊಪ್ಪನ್ನು ಸೇರಿಸಬಹುದು. ಮಕ್ಕಳು ತಮ್ಮ ನೆಚ್ಚಿನ ವಸ್ತು ತಿನ್ನೋದನ್ನು ನಿಲ್ಲಿಸಲು ಸಾಧ್ಯವಿಲ್ಲ. ಈ ರೀತಿಯಾಗಿ, ಅವರು ಕ್ರಮೇಣ ತರಕಾರಿಗಳನ್ನು ತಿನ್ನಲು ಪ್ರಾರಂಭಿಸುತ್ತಾರೆ. 

Tap to resize

ಸ್ಟಫ್ಡ್ ಪರೋಟಾ :(Stuffed Paratha)
ಮಕ್ಕಳು ಪರಾಠಾಗಳನ್ನು ತಿನ್ನಲು ಇಷ್ಟಪಡುತ್ತಾರೆ. ವಿವಿಧ ತರಕಾರಿಗಳನ್ನು ಹಗುರವಾಗಿ ತುಂಬುವ ಮೂಲಕ ಸ್ಟಫ್ಡ್ ಪರಾಠಾ ತಯಾರಿಸುವ ಮೂಲಕ ನೀವು ಮಗುವಿಗೆ ಆಹಾರವನ್ನು ನೀಡಬಹುದು. ನೀವು ಬಯಸಿದರೆ,  ತರಕಾರಿಯನ್ನು ಮ್ಯಾಶ್ ಮಾಡಬಹುದು ಮತ್ತು ಅದರೊಂದಿಗೆ ಹಿಟ್ಟನ್ನು ನಾದಿಕೊಂಡು ಪರಾಠ ಮಾಡಬಹುದು. ಮಗುವಿನ ಇಷ್ಟದ ತರಕಾರಿಯನ್ನು ಸಹ ಪರೋಟಾ ತಯಾರಿಸಲು ಉಪಯೋಗಿಸಿ ನೀವು ತಿನ್ನಿಸಬಹುದು. 

ಬರ್ಗರ್(Burger) ತಯಾರಿಸಿ 
ನೀವು ಮನೆಯಲ್ಲಿ ವೆಜ್ ಬರ್ಗರ್ ತಯಾರಿಸಿ ಮಗುವಿಗೆ ತಿನ್ನಿಸಿ. ಪಿಜ್ಜಾ ಬರ್ಗರ್ ನ ಹೆಸರನ್ನು ಕೇಳಿದ ತಕ್ಷಣ ಮಕ್ಕಳು ತಮ್ಮ ಬಾಯಲ್ಲಿ ನೀರೂರಿಸಲು ಪ್ರಾರಂಭಿಸುತ್ತಾರೆ. ನೀವು ಬರ್ಗರ್ ಅನ್ನು ವೆಜ್ ಟಿಕ್ಕಿಯಿಂದ ತುಂಬಬಹುದು, ಇದರಲ್ಲಿ ನೀವು ಕ್ಯಾಪ್ಸಿಕಂ, ಆಲೂಗಡ್ಡೆ, ಕ್ಯಾರೆಟ್, ಬೀನ್ಸ್ ನಂತಹ ತರಕಾರಿಗಳನ್ನು ಸೇರಿಸಬಹುದು. ಟೊಮ್ಯಾಟೊ, ಸೌತೆಕಾಯಿ ಮತ್ತು ಎಲೆಕೋಸುಗಳನ್ನು ಒಟ್ಟಿಗೆ ಹಾಕುವ ಮೂಲಕ ಮಕ್ಕಳಿಗೆ ಪೂರ್ಣ ಸಸ್ಯಾಹಾರಿ ಚೀಸ್ ಬರ್ಗರ್ ತಿನ್ನಿಸಿ. 

ತರಕಾರಿ ಸೂಪ್ (Vegetable soup) ಕುಡಿಸಿರಿ 
ಮಗುವಿಗೆ ತರಕಾರಿಗಳನ್ನು ತಿನ್ನಲು ಇಷ್ಟವಿಲ್ಲದಿದ್ದರೆ, ಮಗುವಿಗೆ ತರಕಾರಿ ಸೂಪ್ ನೀಡಿ. ನೀವು ಮಗುವಿನ ನೆಚ್ಚಿನ ಟೊಮೆಟೊ ಸೂಪ್ ಅನ್ನು ತಯಾರಿಸಬಹುದು ಅಥವಾ ವೆಜ್ ಸೂಪ್, ಪಾಲಕ್ ಸೂಪ್, ಕೆನೆಭರಿತ ಬ್ರೊಕೋಲಿ ಸೂಪ್ ಮಿಶ್ರಣ ಮಾಡಬಹುದು. ಮಕ್ಕಳು ಸೂಪ್ ಕುಡಿಯಲು ಇಷ್ಟಪಡುತ್ತಾರೆ.

 ಉತ್ತಪಂ, ಇಡ್ಲಿ ಅಥವಾ ಉಪ್ಪಿಟ್ಟು(Upma)
ಮಕ್ಕಳಿಗೆ ಇಡ್ಲಿ, ಉತ್ತಪಂ ಅಥವಾ ಉಪ್ಪಿಟ್ಟನ್ನು ಫೀಡ್ ಮಾಡಿ. ನೀವು ಅದರಲ್ಲಿ ನುಣ್ಣಗೆ ಕತ್ತರಿಸಿದ ತರಕಾರಿಗಳನ್ನು ಬಳಸಬಹುದು. ಉತ್ತಪಂನಲ್ಲಿ ಸ್ವಲ್ಪ ಚೀಸ್ ಹಾಕಿ ಮತ್ತು ಪಿಜ್ಜಾ ಮಸಾಲೆಯನ್ನು ಒಟ್ಟಿಗೆ ಸೇರಿಸಿ ಮತ್ತು ಮಗುವಿಗೆ ಪಿಜ್ಜಾದಂತೆ ತಿನ್ನಿಸಿ. ಇಡ್ಲಿ ಮತ್ತು ಉಪ್ಪಿಟ್ಟಿಗೆ ತರಕಾರಿಗಳನ್ನು ಸೇರಿಸಿ ಬೇಯಿಸಿ.

Latest Videos

click me!