ಪ್ರಕೃತಿ ನಮಗೆ ಅನೇಕ ಉಡುಗೊರೆಗಳನ್ನು ನೀಡಿದೆ. ನಾವು ಸವಿಯಲು ಮತ್ತು ಹೊಟ್ಟೆ ತುಂಬಿಸಲು ತಿನ್ನುವ ಹಣ್ಣುಗಳು, ತರಕಾರಿಗಳು ಸಹ ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಈ ಆಹಾರಗಳಲ್ಲಿ ಬೆರ್ರಿಗಳು ಸಹ ಬರುತ್ತವೆ. ಬೆರ್ರಿಗಳನ್ನು ವಿಶ್ವದ ಅತ್ಯಂತ ಆರೋಗ್ಯಕರ ಆಹಾರವೆಂದು (super food) ಪರಿಗಣಿಸಲಾಗುತ್ತದೆ.
ಬ್ಲೂ ಬೆರ್ರಿಗಳು, ಸ್ಟ್ರಾಬೆರಿಗಳು, ಬ್ಲ್ಯಾಕ್ ಬೆರ್ರಿಗಳು, ಕ್ರಾನ್ಬೆರಿಗಳು ಮಾತ್ರವಲ್ಲದೆ, ಭಾರತೀಯ ನೆಲ್ಲಿಕಾಯಿ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರಪಂಚದಾದ್ಯಂತ 400 ಕ್ಕೂ ಹೆಚ್ಚು ಜಾತಿಯ ಹಣ್ಣುಗಳಿವೆ. ಅನೇಕ ರೀತಿಯ ಸೂಕ್ಷ್ಮ ಪೋಷಕಾಂಶಗಳನ್ನು ಬೆರ್ರಿಗಳಲ್ಲಿ ಕಾಣಬಹುದು. ಅವು ನಿಮ್ಮನ್ನು ಪ್ರಮುಖ ರೋಗಗಳಿಂದ ರಕ್ಷಿಸುತ್ತವೆ. ಅವುಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಆಂಟಿ ಆಕ್ಸಿಡೆಂಟ್ ನ ಆಗರ
ಬೆರ್ರಿಗಳು ಆಂಟಿ ಆಕ್ಸಿಡೆಂಟ್ ನ (antioxidant) ಆಗರವಾಗಿದೆ. ಇದು ದೇಹದಲ್ಲಿ ರೂಪುಗೊಂಡ ಫ್ರೀರೆಡಿಕಲ್ ಗಳನ್ನು ನಿಯಂತ್ರಣದಲ್ಲಿಡುತ್ತದೆ. ಇದು ನಿಮ್ಮ ಡಿಎನ್ ಎಯನ್ನು ಹಾನಿಯಿಂದ ರಕ್ಷಿಸುತ್ತದೆ. ಅವು ಕ್ಯಾನ್ಸರ್ ನಂತಹ ರೋಗದ ಅಪಾಯವನ್ನು ಸಹ ಕಡಿಮೆ ಮಾಡುತ್ತವೆ. ಒಂದು ಅಧ್ಯಯನದ ಪ್ರಕಾರ, ಪ್ರತಿದಿನ 300 ಗ್ರಾಂ ಬ್ಲೂ ಬೆರ್ರಿ ತಿನ್ನುವುದರಿಂದ ಡಿಎನ್ಎ ಹಾನಿಯ ಅಪಾಯವನ್ನು ಕಡಿಮೆ ಮಾಡುತ್ತದೆ ಅನ್ನೋದು ತಿಳಿದು ಬಂದಿದೆ.
ತೂಕ ನಿಯಂತ್ರಣದಲ್ಲಿಡುತ್ತೆ
ಬೆರ್ರಿಗಳಲ್ಲಿ ನಾರಿನಂಶ ಸಮೃದ್ಧವಾಗಿದೆ. ಕಚೇರಿ, ಕಾಲೇಜು ಅಥವಾ ಸಂಜೆಯ ತಿಂಡಿಗೆ ಇವು ಅತ್ಯುತ್ತಮ ಆಯ್ಕೆಯಾಗಿದೆ. ತೂಕವನ್ನು ನಿಯಂತ್ರಣದಲ್ಲಿಡಲು (weight control) ಬಯಸುವವರು ತಮ್ಮ ದೈನಂದಿನ ಆಹಾರದಲ್ಲಿ ಬೆರ್ರಿಗಳನ್ನು ಸೇರಿಸಬೇಕು. ಇದು ಹಸಿವನ್ನು ನಿಯಂತ್ರಿಸುತ್ತೆ. ಅಲ್ಲದೇ ಇದರಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಪೌಷ್ಟಿಕಾಂಶ ಅಧಿಕವಾಗಿರುತ್ತದೆ.
ಇಮ್ಯೂನ್ ಸಿಸ್ಟಮ್ ಸ್ಟ್ರಾಂಗ್ ಆಗಿರುತ್ತೆ
ಸ್ಟ್ರಾಬೆರಿಯಲ್ಲಿ ಸಾಕಷ್ಟು ವಿಟಮಿನ್ ಸಿ ಇದೆ. ವಿಟಮಿನ್ ಸಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲವಾಗಿರಿಸುತ್ತದೆ. ಇದನ್ನು ಬ್ಯೂಟಿ ಎಂದು ಸಹ ಹೇಳಲಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸೋದ್ರಿಂದ ಉತ್ತಮ ಆರೋಗ್ಯದ ಜೊತೆಗೆ ಸೌಂದರ್ಯವೂ ಉತ್ತಮವಾಗಿರುತ್ತೆ.
ಕ್ಯಾನ್ಸರ್-ವಿರೋಧಿ ಗುಣ
ಬ್ಲೂಬೆರ್ರಿಗಳು ಮತ್ತು ರಾಸ್ಪ್ಬೆರ್ರಿಗಳು ಫ್ಲೇವನಾಯ್ಡ್ಗಳನ್ನು ಹೊಂದಿರುತ್ತವೆ. ಅವುಗಳನ್ನು ಕ್ಯಾನ್ಸರ್-ವಿರೋಧಿ (anti cancer) ಆಹಾರಗಳು ಎಂದು ಪರಿಗಣಿಸಲಾಗುತ್ತೆ, ಅಷ್ಟೇ ಅಲ್ಲ ಕ್ರಾನ್ಬೆರಿಗಳು ಮೂತ್ರನಾಳದ ಸೋಂಕಿಗೆ ಸಹಾಯಕವಾಗಿದೆ. ಆಂಥೋಸಯಾನಿನ್ ಗಳು ಇದರಲ್ಲಿ ಕಂಡುಬರುತ್ತವೆ. ಇದು ಇ.ಕೋಲಿ ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ.
ನೆಲ್ಲಿಕಾಯಿ (gooseberries)
ಬೆರ್ರಿಗಳು ಪ್ರತಿಯೊಂದು ಪ್ರದೇಶದಲ್ಲೂ ಸುಲಭವಾಗಿ ಲಭ್ಯವಿಲ್ಲ. ಆದ್ದರಿಂದ ನೀವು ಒಣ ಬೆರ್ರಿಗಳನ್ನು ತೆಗೆದುಕೊಳ್ಳಬಹುದು. ಮಿಕ್ಸ್ ಬೆರ್ರಿಗಳು ಉತ್ತಮ ಆಯ್ಕೆಯಾಗಿದೆ. ನಿಮಗೆ ಅವು ದುಬಾರಿ ಎಂದೆನಿಸಿದರೆ, ನೆಲ್ಲಿಕಾಯಿಯನ್ನು ತೆಗೆದುಕೊಳ್ಳಿ, ಇದು ಅತ್ಯುತ್ತಮ ಆಯ್ಕೆಯಾಗಿದೆ.
ನೆಲ್ಲಿಕಾಯಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದನ್ನು ಕ್ಯಾಂಡಿ, ಮಾರ್ಮಲೇಡ್, ಜ್ಯೂಸ್ ಅಥವಾ ಪೌಡರ್ ಹೀಗೆ ಅನೇಕ ರೂಪಗಳಲ್ಲಿ ತಿನ್ನಬಹುದು. ಇದು ಆರೋಗ್ಯಕರ ಬ್ಲೂಬೆರ್ರಿಯಷ್ಟೇ ಪೌಷ್ಟಿಕವಾಗಿದೆ ಎಂದು ನಂಬಲಾಗಿದೆ. ಇವುಗಳನ್ನು ನಿಯಮಿತವಾಗಿ ಸೇವಿಸೋದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ. ಜೊತೆಗೆ ನೀವು ಆರೋಗ್ಯದಿಂದಿರಲು, ಉತ್ತಮ ತ್ವಚೆಯನ್ನು ಪಡೆಯಲು ನೆರವಾಗುತ್ತೆ.