ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಬಿಸಿನೀರಿನಲ್ಲಿ ಲಿಂಬೆ ರಸ ಸೇವನೆಯು ಎಲ್ಲರಿಗೂ ಸೂಕ್ತವಲ್ಲ. ಆಯುರ್ವೇದ ವೈದ್ಯರ ಪ್ರಕಾರ, ಆ್ಯಸಿಡಿಟಿ, ಗ್ಯಾಸ್ಟ್ರಿಕ್, ಮತ್ತು ಮೂಳೆ ನೋವಿನ ಸಮಸ್ಯೆ ಇರುವವರು ಇದನ್ನು ಸೇವಿಸಿದರೆ ದೇಹದ ಉಷ್ಣತೆ ಹೆಚ್ಚಾಗಿ ಅನಾರೋಗ್ಯಕ್ಕೆ ಕಾರಣವಾಗಬಹುದು.
ಈಗ ಸೋಷಿಯಲ್ ಮೀಡಿಯಾ ಹೆಚ್ಚಿದಂತೆ ವೈದ್ಯರಾಗ್ತಿರುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಹಾಗೆ ಮಾಡಿ, ಹೀಗೆ ಮಾಡಿ ಎಂದು ವಿಡಿಯೋ ಮಾಡುವುದು, ಯಾರೋ ಮಾಡಿದ ವಿಡಿಯೋ ಸಕತ್ ಕ್ಲಿಕ್ ಆಯಿತು ಎಂದಾಕ್ಷಣ, ಅದನ್ನೇ ಉಲ್ಟಾ ಪಲ್ಟಾ ಮಾಡಿ ತಾವು ವಿಡಿಯೋ ಮಾಡುವುದು, ಇದರಿಂದ ಕ್ಲಿಕ್ಸ್, ಲೈಕ್ಸ್ ಪಡೆಯುವುದು ಹೆಚ್ಚಾಗುತ್ತಿದೆ. ಆದರೆ ದುರದೃಷ್ಟ ಎಂದರೆ ಆರೋಗ್ಯದ ವಿಷಯದಲ್ಲಿಯೂ ಈ ರೀತಿಯ ಇಲ್ಲಸಲ್ಲದ ವಿಡಿಯೋ ಮಾಡಿ ಹಾಕುತ್ತಿರುವ ಕಾರಣ, ಅದನ್ನು ನಂಬಿದರೆ ಅನಾರೋಗ್ಯ ಕಾಡುವುದು ಕಟ್ಟಿಟ್ಟದ್ದೇ.
26
ಕ್ಲಿಕ್ಸ್ಗಾಗಿ ವಿಡಿಯೋ
ಅದರಲ್ಲಿ ಒಂದು, ವೇಟ್ ಲಾಸ್ ಮಾಡಲು, ಆರೋಗ್ಯ ವೃದ್ಧಿಗೆ ಪ್ರತಿನಿತ್ಯವೂ ಬೆಳಿಗ್ಗೆ ಬಿಸಿನೀರಿನಲ್ಲಿ ಲಿಂಬೆ ಹಣ್ಣನ್ನು ಹಿಂಡಿ ಕುಡಿಯಿರಿ ಎನ್ನುವುದು. ನೀವಂತೂ ಹಲವಾರು ಈ ವಿಡಿಯೋಗಳನ್ನು ನೋಡಿರಬಹುದು. ಇದು ಒಂದು ಮಟ್ಟಿಗೆ ನಿಜವಾದರೂ, ಕೆಲವೊಂದು ದೋಷ ಇರುವವರು, ಕೆಲವೊಂದು ಸಮಸ್ಯೆ ಇರುವವರು ಹೀಗೇನಾದ್ರೂ ಮಾಡುತ್ತಿದ್ದರೆ ಅದರಿಂದ ಭಾರಿ ಅಪಾಯ ತಂದುಕೊಳ್ಳುವುದು ಗ್ಯಾರೆಂಟಿ.
36
ಡಾ.ವರುಣ್ ಶರ್ಮಾ ಎಚ್ಚರಿಕೆ
ಈ ಬಗ್ಗೆ ಆಯುರ್ವೇದ ವೈದ್ಯರಾಗಿರುವ ಡಾ.ವರುಣ್ ಶರ್ಮಾ ಎಚ್ಚರಿಕೆ ನೀಡಿದ್ದಾರೆ. ಈಗಿನವರಲ್ಲಿ ಹೆಚ್ಚಿನವರಿಗೆ ಆ್ಯಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಸರ್ವೆ ಸಾಮಾನ್ಯವಾಗಿದೆ. ನಿಂಬೆ ಹಣ್ಣು ಉಷ್ಣ ಪ್ರಕೃತಿಯದ್ದು. ಆದ್ದರಿಂದ ಇದನ್ನು ಬಿಸಿ ನೀರಿನಲ್ಲಿ ಹಾಕಿ ಈ ಸಮಸ್ಯೆ ಇರುವವರು ಕುಡಿದರೆ ದೇಹದಲ್ಲಿನ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸಿ ಅದು ದೇಹಕ್ಕೆ ಹಾನಿ ಮಾಡುತ್ತದೆ ಎನ್ನುತ್ತಾರೆ ವೈದ್ಯರು.
ಕಫ ಮತ್ತು ಪಿತ್ತ ದೋಷದಿಂದ ಬಳಲುತ್ತಿರುವವರು ಈ ಬಿಸಿನೀರಿನ ಲಿಂಬೆ ರಸವನ್ನು ದಿನನಿತ್ಯ ಸೇವನೆ ಮಾಡುತ್ತಾ ಬಂದರೆ ಅದು ಆರೋಗ್ಯದ ಬದಲು ಅನಾರೋಗ್ಯವನ್ನು ಹೆಚ್ಚಿಸುತ್ತಾ ಬರುತ್ತದೆ. ಇದರಿಂದ ಇನ್ನಿಲ್ಲದ ಸಮಸ್ಯೆ ಎದುರಾಗುತ್ತದೆ ಎನ್ನುತ್ತಾರೆ ಡಾ.ವರುಣ್ ಶರ್ಮಾ.
56
ಅನಾರೋಗ್ಯ ಬಾಧೆ
ಆ್ಯಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರನ್ನು ಇದನ್ನು ತೆಗೆದುಕೊಂಡರೆ ದೇಹದಲ್ಲಿ ಪಿತ್ತ ಮತ್ತು ವಾತಗಳು ಸಮತೋಲನ ಕಳೆದುಕೊಳ್ಳುತ್ತದೆ. ಇದರಿಂದ ಕ್ರಮೇಣ ದೇಹದಲ್ಲಿ ಅನಾರೋಗ್ಯ ಬಾಧೆ ಕಾಡುತ್ತದೆ ಎನ್ನುತ್ತಾರೆ ಅವರು.
66
ಮೂಳೆಗಳ ನೋವು ಇರುವವರಿಗೂ ವ್ಯರ್ಜ್ಯ
ಅಷ್ಟೇ ಅಲ್ಲದೇ ಕೈಕಾಲು, ಮೂಳೆಗಳ ನೋವು ಇರುವವರು ಕೂಡ ಬಿಸಿ ನೀರಿನಲ್ಲಿ ಲಿಂಬೆಹಣ್ಣಿನ ಸೇವನೆ ಮಾಡಬಾರದು. ಇದು ಕೂಡ ಅದೇ ಸಮಸ್ಯೆಯನ್ನು ತಂದೊಡ್ಡುತ್ತದೆ. ಅದರ ಬದಲು ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.