ರೆಪ್ಪೆಗಳಲ್ಲಿ ಹೊಟ್ಟಿನ ಸಮಸ್ಯೆಯೇ? ಈ 5 ಮನೆಮದ್ದುಗಳನ್ನು ಟ್ರೈ ಮಾಡಿ

First Published | Oct 13, 2022, 2:17 PM IST

ಕೂದಲಿನಲ್ಲಿ ಹೊಟ್ಟಿನ ಸಮಸ್ಯೆಯಿಂದ ಹೆಚ್ಚಿನ ಎಲ್ಲಾ ಜನ ನೋವನ್ನು ಅನುಭವಿಸಿದ್ದಾರೆ. ನಿಮಗೂ ಈ ಸಮಸ್ಯೆ ಒಂದಲ್ಲ ಒಂದು ಬಾರಿ ಕಾಡಿರಬಹುದು. ಆದರೆ ಕಣ್ಣಿನ ರೆಪ್ಪೆಯಲ್ಲಿ ಹೊಟ್ಟು ಉಂಟಾದರೆ ಏನು ಮಾಡೋದು? ಕಣ್ಣಿನ ರೆಪ್ಪೆಗಳಲ್ಲಿ ಹೊಟ್ಟಿನ ಸಮಸ್ಯೆ ಸಾಕಷ್ಟು ತೊಂದರೆಯನ್ನುಂಟುಮಾಡಬಹುದು. ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ನೀವೂ ಈ ಸಮಸ್ಯೆಯನ್ನು ಹೊಂದಿದ್ದರೆ ಈ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳಿ..

ಅಂದಹಾಗೆ, ಹೆಚ್ಚಿನ ಜನರು ಕೂದಲಿನಲ್ಲಿ ತಲೆಹೊಟ್ಟಿನ ಸಮಸ್ಯೆಯನ್ನು ಅನುಭವಿಸಿರಬೇಕು, ಇದು ಸಾಮಾನ್ಯ ಸಮಸ್ಯೆಯಾಗಿದೆ. ಕೂದಲಿನಲ್ಲಿ ತಲೆಹೊಟ್ಟನ್ನು ತೊಡೆದುಹಾಕಲು ಜನರು ವಿವಿಧ ರೀತಿಯ ಪ್ರಿಸ್ಕ್ರಿಪ್ಷನ್ ಗಳನ್ನು ಪ್ರಯತ್ನಿಸುತ್ತಾರೆ. ಆದರೆ ತಲೆಹೊಟ್ಟಿನ ಈ ಸಮಸ್ಯೆಯು ಕೂದಲಿನಿಂದ ರೆಪ್ಪೆಗಳನ್ನು ತಲುಪಿದರೆ ಏನು ಮಾಡುವುದು? ರೆಪ್ಪೆಗಳಲ್ಲಿ ಹೊಟ್ಟಿನ ಸಮಸ್ಯೆಯ (dandruff problem) ಬಗ್ಗೆ ಕೇಳುವುದು ವಿಚಿತ್ರವಾಗಿ ತೋರಬಹುದು, ಆದರೆ ಅನೇಕ ಜನರು ಈ ಸಮಸ್ಯೆಯೊಂದಿಗೆ ಹೆಣಗಾಡುತ್ತಾರೆ. 

ಕಣ್ಣಿನ ರೆಪ್ಪೆಗಳ ಮೇಲಿನ ಹೊಟ್ಟು ಕಣ್ಣುಗಳ ಸೌಂದರ್ಯವನ್ನು ಹಾಳು ಮಾಡಬಹುದು. ಇದು ಗಂಭೀರ ಕಾಯಿಲೆಯಲ್ಲ, ಆದರೆ ಈ ಸಮಸ್ಯೆಯು ಕಣ್ಣುಗಳಿಗೆ ನೋವನ್ನು ಉಂಟು ಮಾಡುವ ಸಾಧ್ಯತೆ ಇದೆ. ಕೆಲವು ಮನೆಮದ್ದುಗಳಿಂದ (home remedies) ಕಣ್ಣಿನ ರೆಪ್ಪೆಗಳಲ್ಲಿನ ಹೊಟ್ಟಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಈ ಮೂಲಕ ರೆಪ್ಪೆಗಳು ಮತ್ತು ಕಣ್ಣುಗಳ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.
 

Tap to resize

ಬಾದಾಮಿ ಎಣ್ಣೆ (almond oil)
ಕಣ್ಣಿನ ರೆಪ್ಪೆಗಳಲ್ಲಿ ಹೊಟ್ಟು ಒಣ ಚರ್ಮದಿಂದ ಉಂಟಾಗುತ್ತದೆ. ಬಾದಾಮಿ ಎಣ್ಣೆಯು ಹೈಡ್ರೇಟಿಂಗ್ ಆಗಿದೆ. ಇದು ರೆಪ್ಪೆಗಳ ಹೊಟ್ಟನ್ನು ಗುಣಪಡಿಸುತ್ತದೆ. ಸ್ವಲ್ಪ ಬಾದಾಮಿ ಎಣ್ಣೆಯನ್ನು ಬೆರಳುಗಳ ಸಹಾಯದಿಂದ ಕಣ್ಣುರೆಪ್ಪೆಗಳ ಮೇಲೆ ಮಸಾಜ್ ಮಾಡುವ ಮೂಲಕ ಹೊಟ್ಟನ್ನು ನಿವಾರಿಸಬಹುದು.

ಟೀ ಟ್ರೀ ಆಯಿಲ್ (tea tree oil)
ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಟೀ ಟ್ರೀ ಆಯಿಲ್ ಕಣ್ಣಿನ ರೆಪ್ಪೆಗಳ ಹೊಟ್ಟನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಉಗುರುಬೆಚ್ಚನೆಯ ಟೀ ಟ್ರೀ ಆಯಿಲ್ ನ್ನು ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚಿ. ಸುಮಾರು ಹತ್ತು ನಿಮಿಷಗಳ ನಂತರ ತೊಳೆಯಿರಿ. ಈ ಪ್ರಕ್ರಿಯೆಯನ್ನು ಪ್ರತಿದಿನ ಮಾಡಿ. ಪರಿಣಾಮವನ್ನು ತ್ವರಿತವಾಗಿ ಸಿಗುತ್ತೆ.

ಬಿಸಿ ನೀರಿನ ಮಸಾಜ್
ಹೊಟ್ಟನ್ನು ತೆಗೆದುಹಾಕಲು ಬಿಸಿ ನೀರಿನ ಶಾಖ ಪ್ರಯೋಜನಕಾರಿಯಾಗಿದೆ. ಇದು ಕಣ್ಣುಗಳಿಗೆ ವಿಶ್ರಾಂತಿ ನೀಡುತ್ತದೆ. ಇದಲ್ಲದೆ, ರೆಪ್ಪೆಗಳಿಂದ ಸಂಗ್ರಹವಾದ ಕೊಳೆಯನ್ನು ಸಹ ತೆಗೆದುಹಾಕಲಾಗುತ್ತದೆ. ಹತ್ತಿಯ ಸಹಾಯದಿಂದ, ಬಿಸಿ ನೀರನ್ನು ವಾರದಲ್ಲಿ ಮೂರು ಬಾರಿ ಕಣ್ಣುಗಳಿಗೆ ಶಾಖ ನೀಡಬಹುದು.

ಆಲಿವ್ ಎಣ್ಣೆ
ಆಲಿವ್ ಎಣ್ಣೆಯಲ್ಲಿ ಹೆಚ್ಚಿನ ಪೋಷಕಾಂಶಗಳಿವೆ. ಇದು ಚರ್ಮವನ್ನು ಹೈಡ್ರೇಟ್ ಆಗಿರಿಸುತ್ತದೆ. ರೆಪ್ಪೆಗಳ ಹೊಟ್ಟನ್ನು ಕಡಿಮೆ ಮಾಡಲು, ರೆಪ್ಪೆಗಳ ಮೇಲೆ ಸ್ವಲ್ಪ ಆಲಿವ್ ಎಣ್ಣೆ (olive oil) ಹಚ್ಚಿ. ನಂತರ ನಿಧಾನವಾಗಿ ಮಸಾಜ್ ಮಾಡಿ. ಇದು ತಲೆಹೊಟ್ಟನ್ನು ಸಹ ಕಡಿಮೆ ಮಾಡುತ್ತದೆ ಮತ್ತು ಕಣ್ಣುರೆಪ್ಪೆಗಳು ಸಹ ದಟ್ಟವಾಗಿರುತ್ತವೆ.

ಕಣ್ಣುರೆಪ್ಪೆಗಳಲ್ಲಿ ಹೆಪ್ಪುಗಟ್ಟಿದ ಹೊಟ್ಟನ್ನು ತೆಗೆದುಹಾಕಲು ಅಲೋವೆರಾ ಜೆಲ್ ಉತ್ತಮ ಆಯ್ಕೆಯಾಗಿದೆ. ಬೆರಳುಗಳ ಸಹಾಯದಿಂದ ಅಲೋವೆರಾ ಜೆಲ್ ಅನ್ನು ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚಿ ಮತ್ತು ಕೆಲವು ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ರೆಪ್ಪೆಗಳ ಹೊಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕಣ್ಣುರೆಪ್ಪೆಗಳಲ್ಲಿ ಹೊಟ್ಟಿನ ಸಮಸ್ಯೆಯಿಂದ ಒಬ್ಬ ವ್ಯಕ್ತಿಯು ತೊಂದರೆಗೀಡಾದರೆ, ಈ ಮನೆಮದ್ದು ಸಹಾಯಕ್ಕೆ ಬರಬಹುದು.

Latest Videos

click me!