ಹೃದಯಾಘಾತ ಮತ್ತು ಪಾರ್ಶ್ವವಾಯುದಂತಹ ಮುಂತಾದ ಮಾರಕ ಕಾಯಿಲೆಗಳಿಗೆ ಅಧಿಕ ರಕ್ತದೊತ್ತಡ (High BP) ಪ್ರಮುಖ ಕಾರಣವಾಗಿದೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಔಷಧಿಗಳು ಮಾತ್ರವಲ್ಲದೆ, ಆರೋಗ್ಯಕರ ಆಹಾರವೂ ಅತ್ಯಗತ್ಯ. ನಮ್ಮ ಅಡುಗೆಮನೆಯಲ್ಲಿ ಯಾವಾಗಲೂ ಲಭ್ಯವಿರುವ ಕೆಲವು ತರಕಾರಿ, ಸೊಪ್ಪುಗಳು ಅಧಿಕ ರಕ್ತದೊತ್ತಡವನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅದರಲ್ಲಿ ಲೆಟಿಸ್ ಉತ್ತಮ ಆಯ್ಕೆಯಾಗಿದೆ! ಈ ಹಸಿರು ಎಲೆಯ ತರಕಾರಿ ನೋಡುವುದಕ್ಕೆ ಎಲೆಕೋಸಿನ ತರಹ ಕಂಡರೂ ಎಲೆಕೋಸಲ್ಲ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಇದು ಈಗ ಸೂಪರ್ ಮಾರ್ಕೆಟ್‌ಗಳಲ್ಲಿ ಮಾತ್ರವಲ್ಲ, ಎಲ್ಲ ತರಕಾರಿ ಅಂಗಡಿಗಳಲ್ಲೂ ಲಭ್ಯ.