ಏನ್ ಚಳೀನಪ್ಪಾ ಅಂದ್ಕೊಂಡು ಸ್ವೆಟ್ಟರ್ ಹಾಕಿ ಮಲಗಿದ್ರೆ ಜೀವಾನೇ ಹೋಗ್ಬೋದು!

First Published Jan 11, 2023, 12:58 PM IST

ಸಿಕ್ಕಾಪಟ್ಟೆ ಚಳಿ ಅಂತ ನೀವು ರಾತ್ರಿಯಲ್ಲೂ ಸ್ವೆಟರ್ ಧರಿಸಿ ಮಲಗುತ್ತಿದ್ದರೆ ಇಂದಿನಿಂದಲೇ ಈ ಅಭ್ಯಾಸವನ್ನು ಬದಲಾಯಿಸಿ, ಏಕೆಂದರೆ ರಾತ್ರಿ ಸ್ವೆಟರ್ ಧರಿಸಿ ಮಲಗುವುದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಸ್ವೆಟರ್ ಧರಿಸಿ ಮಲಗುವುದರಿಂದ ಆಗುವ ಅನಾನುಕೂಲಗಳೇನು ತಿಳಿಯೋಣ.

ದೇಶಾದ್ಯಂತ ಚಳಿಯ ಪ್ರಮಾಣ ಹೆಚ್ಚಾಗತೊಡಗಿದೆ. ತಣ್ಣಗಿನ ಗಾಳಿ, ತಂಪಾದ ವಾತಾವರಣ ಜನರ ಆರೋಗ್ಯವನ್ನು ಹದಗೆಡಿಸುತ್ತಿದೆ. ಚಳಿಯನ್ನು ತಡೆಯಲು ಜನರು ನಾನಾ ಮಾರ್ಗವನ್ನು ಅನುಸರಿಸುತ್ತಿದ್ದಾರೆ.  ಬಿಸಿಲಿನಲ್ಲಿ ನಿಲ್ಲುವುದು, ಕಟ್ಟಿಗೆಯನ್ನು ಉರಿಸಿ ಬೆಂಕಿ ಕಾಯಿಸಿಕೊಳ್ಳುವುದು ಮಾಡುತ್ತಾರೆ. ಇನ್ನು ಕೆಲವರು ಬೆಚ್ಚಗಿನ ಸ್ವೆಟರ್‌, ಸಾಕ್ಸ್, ಗ್ಲೌಸ್ ಧರಿಸುವುದು ಮಾಡುತ್ತಾರೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಹೀಗೆಲ್ಲಾ ಮಾಡುವುದು ಸರಿ. ಆದರೆ ಸ್ವೆಟ್ಟರ್ ಹಾಕಿ ಮಲಗಿದ್ರೆ ಆರೋಗ್ಯಕ್ಕೇನು ತೊಂದ್ರೆ ಇಲ್ವಾ ?

ಮನೆಯಿಂದ ಹೊರ ಹೋಗುವಾಗ ಸ್ವೆಟ್ಟರ್, ಸಾಕ್ಸ್‌, ಕ್ಯಾಪ್‌, ಗ್ಲೌಸ್ ಧರಿಸುವುದು ಸರಿ. ಆದರೆ ಅನೇಕರು ರಾತ್ರಿ ಮಲಗುವಾಗಲೂ ಸ್ವೆಟರ್, ಸಾಕ್ಸ್ ಮತ್ತು ಕ್ಯಾಪ್‌ಗಳನ್ನು ಧರಿಸುತ್ತಾರೆ. ಆದರೆ ನೀವು ರಾತ್ರಿಯಲ್ಲಿ ಸ್ವೆಟರ್ ಧರಿಸಿ ಮಲಗುತ್ತಿದ್ದರೆ ಇಂದಿನಿಂದಲೇ ಈ ಅಭ್ಯಾಸವನ್ನು ಬದಲಾಯಿಸಿ, ಏಕೆಂದರೆ ರಾತ್ರಿ ಸ್ವೆಟರ್ ಧರಿಸಿ ಮಲಗುವುದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಸ್ವೆಟರ್ ಧರಿಸಿ ಮಲಗುವುದರಿಂದ ಆಗುವ ಅನಾನುಕೂಲಗಳೇನು ತಿಳಿಯೋಣ.

ರಕ್ತದೊತ್ತಡವನ್ನು ಹೆಚ್ಚಿಸುತ್ತದೆ
ರಾತ್ರಿ ಸ್ವೆಟರ್ ಧರಿಸಿ ಮಲಗಿದರೆ ಅದು ರಕ್ತ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೆಲವೊಮ್ಮೆ ಉಸಿರಾಟದ ಸಮಸ್ಯೆ ಕಾರಣವಾಗುತ್ತದೆ. ಬೆವರುವಿಕೆಯಲ್ಲಿ ತೊಂದರೆ ಕಾಣಿಸಿಕೊಳ್ಳುವ ಕಾರಣ ರಕ್ತದೊತ್ತಡವು ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ ಅಥವಾ ಹೆಚ್ಚಾಗುತ್ತದೆ. ಹೀಗಾಗಿ ರಾತ್ರಿಯಲ್ಲಿ ಸಾಮಾನ್ಯ ಅಥವಾ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ ಮಲಗಬೇಕು.

ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ
ರಾತ್ರಿಯಲ್ಲಿ ಉಣ್ಣೆ ಅಥವಾ ಸ್ವೆಟರ್‌ಗಳನ್ನು ಧರಿಸುವುದರಿಂದ ದೇಹ ಹೆಚ್ಚಿನ ಶಾಖವನ್ನು ಹಿಡಿದಿಟ್ಟುಕೊಳ್ಳಬಹುದು, ಇದು ದೇಹದಲ್ಲಿ ದದ್ದುಗಳಿಗೆ ಕಾರಣವಾಗಬಹುದು. ಅಲ್ಲದೆ, ರಾತ್ರಿಯಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಸಹ ನಿರ್ಜಲೀಕರಣಕ್ಕೆ ಕಾರಣವಾಗಬಹುದು.

ಆಮ್ಲಜನಕದ ಕೊರತೆ ಉಂಟಾಗಬಹುದು
ಕೆಲವೊಬ್ಬರಿಗೆ ಎಲ್ಲರಿಗಿಂತಲೂ ಹೆಚ್ಚು ಚಳಿಯ ಅನುಭವವಾಗುತ್ತದೆ. ಇಂಥವರು ತಮ್ಮ ಇಡೀ ಮುಖವನ್ನು ಸ್ವೆಟರ್ ಕ್ಯಾಪ್ ಮತ್ತು ಹೊದಿಕೆಯಿಂದ ಮುಚ್ಚಿಕೊಂಡು ಮಲಗುತ್ತಾರೆ. ಆದರೆ ಈ ರೀತಿ ಮಲಗುವುದರಿಂದ ಆಮ್ಲಜನಕದ ಪೂರೈಕೆ ಕಡಿಮೆಯಾಗಬಹುದು. ಇದರಿಂದ ಉಸಿರಾಟದ ತೊಂದರೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು.

ಚರ್ಮದ ಸೋಂಕು ಕಾಣಿಸಿಕೊಳ್ಳಬಹುದು
ಬಿಗಿಯಾದ ಸ್ವೆಟರ್‌ ಧರಿಸಿ ಮಲಗುವುದರಿಂದ ತ್ವಚೆಯ ಸಮಸ್ಯೆಯೂ ಉಂಟಾಗುತ್ತದೆ. ಉದಾಹರಣೆಗೆ, ತುರಿಕೆ ಅಥವಾ ಎಸ್ಜಿಮಾ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗೆಯೇ ದಪ್ಪ ಸ್ವೆಟರ್‌ಗಳು ಮತ್ತು ಜಾಕೆಟ್‌ಗಳನ್ನು ಧರಿಸುವುದು ಚರ್ಮದ ಸೋಂಕಿನ ಅಪಾಯಕ್ಕೆ ಕಾರಣವಾಗಬಹುದು, ಏಕೆಂದರೆ ಸಾಮಾನ್ಯವಾಗಿ ನಾವು ಸ್ವೆಟರ್‌ಗಳು ಮತ್ತು ಜಾಕೆಟ್‌ಗಳನ್ನು ಸಾಮಾನ್ಯ ಬಟ್ಟೆಗಳಿಗಿಂತ ಕಡಿಮೆ ತೊಳೆಯುತ್ತೇವೆ. ಇದರಿಂದಾಗಿ ಅವುಗಳಲ್ಲಿ ಧೂಳು ಅಥವಾ ಬ್ಯಾಕ್ಟಿರೀಯಾ ಇರಬಹುದು.

ಸ್ವೆಟರ್, ಜಾಕೆಟ್‌ನ ಗುಣಮಟ್ಟ ಹಾಳಾಗುತ್ತದೆ
ರಾತ್ರಿಯಲ್ಲಿ ಸ್ವೆಟರ್ ಅಥವಾ ಜಾಕೆಟ್ ಧರಿಸಿದರೆ, ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಸ್ವೆಟರ್‌ನಲ್ಲಿ ಬೆವರು, ಜೊಲ್ಲುರಸ ಮೊದಲಾದವು ಬಿದ್ದು ಹಾಳಾಗುವುದು. ಇದೇ ಸ್ವೆಟ್ಟರ್ ಪದೇ ಪದೇ ಧರಿಸುವುದರಿಂದ ಆರೋಗ್ಯ ಹದಗೆಡಬಹುದು.

click me!