ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಹಾಗೆ ರಾಹುಲ್ ಗಾಂಧಿ ಫುಡ್ ಹ್ಯಾಬಿಟ್ ಇದ್ಯಾ?

First Published | Jan 11, 2023, 11:36 AM IST

ಈ ದಿನಗಳಲ್ಲಿ ರಾಹುಲ್ ಗಾಂಧಿ ತಮ್ಮ 'ಭಾರತ್ ಜೋಡೋ ಯಾತ್ರೆ'ಯಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಅಷ್ಟೇ ಯಾಕೆ, ಅವರು ಈ ನಡುಗುವ ಚಳಿಯಲ್ಲಿ ಕೂಡ ಕೇವಲ ಟಿ-ಶರ್ಟ್ ಧರಿಸಿ ಓಡಾಡುತ್ತಿದ್ದಾರೆ. ಇದೆಲ್ಲಾ ನೋಡಿದ್ರೆ ರಾಹುಲ್ ತುಂಬಾ ಫಿಟ್ ಆಗಿರೋ ತರ ಕಾಣುತ್ತಿದ್ದಾರೆ. ಹಾಗಿದ್ರೆ ರಾಹುಲ್ ಗಾಂಧಿ ಫಿಟ್ ನೆಸ್ ರಹಸ್ಯ ಏನು ಅನ್ನೋದನ್ನು ತಿಳಿಯೋಣ ಬನ್ನಿ. 

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (congress leader Rahul Gandhi) ಅವರ 3500 ಕಿ.ಮೀ ಉದ್ದದ 'ಭಾರತ್ ಜೋಡೋ ಯಾತ್ರೆ' ಈ ದಿನಗಳಲ್ಲಿ ಚರ್ಚೆಯ ವಿಷಯವಾಗಿದೆ. ಅವರ ಜನಪ್ರಿಯತೆಗೆ ಕಾರಣವೆಂದರೆ ಕೇವಲ ನಡೆಯುವುದು ಮಾತ್ರವಲ್ಲ, ಹೆಪ್ಪುಗಟ್ಟುವ ಚಳಿಯಲ್ಲಿ ಒಂದೇ ಒಂದು ಟಿ-ಶರ್ಟ್ ಧರಿಸುವುದು. ಹೌದು, 52 ರ ಈ ವಯಸ್ಸಿನಲ್ಲೂ ರಾಹುಲ್ ಗಾಂಧಿ ಇಷ್ಟೊಂದು ಫಿಟ್ ನೆಸ್ ಕಾಯ್ದುಕೊಂಡಿರೋದು ಹೇಗೆ ಅನ್ನೋದು ಅಚ್ಚರಿಯಾಗುತ್ತಿದೆ. 

ಸಾಮಾಜಿಕ ಮಾಧ್ಯಮದಿಂದ ಹಿಡಿದು ಎಲ್ಲಾ ಟಿವಿ ಚಾನೆಲ್ ಗಳವರೆಗೆ, ಜನರು ಈ ನಡುಗುವ ಚಳಿಯಲ್ಲಿ ದಪ್ಪ ಜಾಕೆಟ್ ಮತ್ತು ಸ್ವೆಟರ್ ಗಳನ್ನು ಧರಿಸುತ್ತಿರುವಾಗ, ರಾಹುಲ್ ಗಾಂಧಿಗೆ ಏಕೆ ಚಳಿಯಾಗ್ತಿಲ್ವಾ? ಎಂಬುದು ಒಂದೇ ಪ್ರಶ್ನೆ. ಎರಡನೆಯದಾಗಿ, ಪುಷ್-ಅಪ್ ಚಾಲೆಂಜ್ ಮಾಡುವುದು, ಟ್ಯಾಂಕ್ ಮೇಲೆ ಹತ್ತುವುದು ಮತ್ತು ಮಕ್ಕಳನ್ನು ತನ್ನ ಭುಜಗಳ ಮೇಲೆ ಕುಳಿತುಕೊಳ್ಳುವಂತೆ ಮಾಡುವುದು ಹೀಗೆ ಏನೇನೋ ಮಾಡ್ತಿದ್ದಾರೆ. ಈ ಫಿಟ್ ನೆಸ್ ನ ರಹಸ್ಯ (fitness secret) ಏನು ತಿಳಿಯಿರಿ. 

Latest Videos


52 ವರ್ಷದ ರಾಹುಲ್ ಗಾಂಧಿ ಚುರುಕಾಗಿ ನಡೆಯುತ್ತಾರೆ ಮತ್ತು ಯಾತ್ರೆಯಲ್ಲಿ ಅವರೊಂದಿಗೆ ಇರುವವರು ಸಹ ಅವರನ್ನು ಸರಿಗಟ್ಟಲು ಕಷ್ಟಪಡುತ್ತಿದ್ದಾರೆ ಎಂದು ಹಲವಾರು ಜನರು ಸಹ ಹೇಳಿದ್ದಾರೆ. ಹಾಗಿದ್ರೆ ಬನ್ನಿ ಅವರ ಅದ್ಭುತ ಫಿಟ್ ನೆಸ್ ನ ರಹಸ್ಯವೇನು ಎಂದು ತಿಳಿಯೋಣ.

ಧ್ಯಾನ ಮಾಡ್ತಾರೆ (meditation)

ರಾಹುಲ್ ಗಾಂಧಿಗೆ ಧ್ಯಾನವೆಂದರೆ ಅಚ್ಚುಮೆಚ್ಚು ಎಂದು ಹೇಳಲಾಗುತ್ತದೆ. ಟೈಮ್ಸ್ ನೌ ವರದಿಯ ಪ್ರಕಾರ, ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಧ್ಯಾನ ಆಧ್ಯಾತ್ಮಿಕತೆ ಜ್ಞಾನೋದಯ ಮಾಡಿಸುತ್ತೆ ಮತ್ತು ಮನಸ್ಸಿಗೆ ಶಾಂತಿ ನೀಡುತ್ತೆ ಎಂದು ರಾಹುಲ್ ಪರಿಗಣಿಸುತ್ತಾರೆ ಎಂದು ಹೇಳಿದ್ದರು.

12 ಕಿ.ಮೀ ಓಡ್ತಾರೆ ರಾಹುಲ್ (12 km running)

ರಾಹುಲ್ ಗಾಂಧಿ ಪ್ರತಿದಿನ 12 ಕಿ.ಮೀ ಓಡುವುದು ಸೇರಿ ಯಾವುದೇ ಪರಿಸ್ಥಿತಿಯಲ್ಲೂ ತಮ್ಮ ತಾಲೀಮು ವೇಳಾಪಟ್ಟಿಯನ್ನು ಅನುಸರಿಸುತ್ತಾರೆ. ಅದನ್ನು ಮಿಸ್ ಮಾಡೋದೆ ಇಲ್ಲ. ತನ್ನ ಕಾರ್ಯನಿರತ ವೇಳಾಪಟ್ಟಿಯ ನಂತರ, ಸಮಯ ಸಿಕ್ಕ ಕೂಡಲೇ ರನ್ನಿಂಗ್ ಮಾಡಲು ತೊಡಗುತ್ತಾರಂತೆ ರಾಹುಲ್ ಗಾಂಧಿ.

ಡ್ರೈ ಫ್ರುಟ್ಸ್ ಮತ್ತು ನಟ್ಸ್ ಸೇವಿಸುತ್ತಾರೆ (dry fruits and nuts)

ಇತ್ತೀಚೆಗೆ, ಪತ್ರಕರ್ತರೊಬ್ಬರು ರಾಹುಲ್ ಅವರು ಹರಿಯಾಣಕ್ಕೆ ಭೇಟಿ ನೀಡಿದಾಗ ಅವರ ಫೋಟೋವನ್ನು ಟ್ವೀಟ್ ಮಾಡಿದ್ದರು. ಇದರಲ್ಲಿ, ಅವರು ಹುರಿದ ಮಖಾನಾಗಳು, ಮಿಶ್ರ ಬೀಜಗಳು (ಕುಂಬಳಕಾಯಿ ಬೀಜಗಳು, ಗೋಡಂಬಿ, ಬಾದಾಮಿ) ಮತ್ತು ಡ್ರೈ ಫ್ರುಟ್ಸ್  (ಒಣದ್ರಾಕ್ಷಿ ಮತ್ತು ಕಡಲೆಕಾಯಿ) ತಿನ್ನುವುದನ್ನು ಕಾಣಬಹುದು.

ರಾಹುಲ್ ಫಿಟ್ ಆಗಿರಲು ಒಣ ಹಣ್ಣುಗಳು ಮತ್ತು ಬೀಜಗಳನ್ನು ತಿನ್ನುತ್ತಾರೆ. ಇದರ ಪ್ರಯೋಜನಗಳೇನು?
ಡ್ರೈ ಫ್ರುಟ್ಸ್ ಮತ್ತು ನಟ್ಸ್ (dry fruits and nuts) ಪ್ರೋಟೀನ್, ಆರೋಗ್ಯಕರ ಕೊಬ್ಬು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುವ ಸೂಪರ್ ಫುಡ್ ಗಳೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಸೇವಿಸುವುದರಿಂದ ತೂಕ ನಿಯಂತ್ರಿಸಲು, ಕ್ಯಾಲೋರಿ ಬರ್ನ್ ಮಾಡಲು ಮತ್ತು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿಯೇ ಅನೇಕ ಜನರು ಇವುಗಳನ್ನು ತಮ್ಮ ಆಹಾರದಲ್ಲಿ ಸೇರಿಸುತ್ತಾರೆ.

ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ

ಫ್ರುಟ್ಸ್ ಮತ್ತು ನಟ್ಸ್ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ. ಇದರಲ್ಲಿ ಪಾಲಿಫೆನಾಲ್ಸ್ ಸೇರಿವೆ, ಇದು ಮುಕ್ತ ರಾಡಿಕಲ್ ಕೋಶಗಳನ್ನು ತಟಸ್ಥಗೊಳಿಸುವ ಮೂಲಕ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ವಾಲ್ನಟ್ಸ್ ಮತ್ತು ಬಾದಾಮಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ಜೀವಕೋಶಗಳಲ್ಲಿನ ಆರೋಗ್ಯಕರ ಕೊಬ್ಬನ್ನು ರಕ್ಷಿಸಲು ಕೆಲಸ ಮಾಡುತ್ತವೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತೆ

ಮೇಯೋ ಕ್ಲಿನಿಕ್ ವರದಿಯ ಪ್ರಕಾರ, ಒಣ ಹಣ್ಣುಗಳು ಮತ್ತು ಕುಂಬಳಕಾಯಿ ಮತ್ತು ಎಳ್ಳು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತವೆ. ರಕ್ತದಲ್ಲಿ ಕಂಡುಬರುವ ಈ ಎರಡು ಕೊಳಕು ವಸ್ತುಗಳು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಬೊಜ್ಜು ಮತ್ತು ಮಧುಮೇಹ ಹೊಂದಿರುವ ಜನರಲ್ಲಿ ಟ್ರೈಗ್ಲಿಸರೈಡ್ ಗಳ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಪಿಸ್ತಾ ಹೊಂದಿದೆ ಎಂದು ನಂಬಲಾಗಿದೆ.

click me!