ಥೈರಾಯ್ಡ್ ಕೋಶಗಳ ಅನಿಯಂತ್ರಿತ ಬೆಳವಣಿಗೆಯೇ ಥೈರಾಯ್ಡ್ ಕ್ಯಾನ್ಸರ್. ಆರಂಭದಲ್ಲಿ, ಥೈರಾಯ್ಡ್ ಕ್ಯಾನ್ಸರ್ ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ಇರಬಹುದು ಹೀಗಿದ್ದರು ಈ ಕಾಯಿಲೆಯನ್ನು ಗುರುತಿಸುವುದು ಹೇಗೆ?
ಥೈರಾಯ್ಡ್ ಕ್ಯಾನ್ಸರ್‌ನ ಕೆಲವು ಆರಂಭಿಕ ಲಕ್ಷಣಗಳ ಬಗ್ಗೆ ಇಲ್ಲಿ ತಿಳಿಯೋಣ.
28
ಕುತ್ತಿಗೆಯ ಮುಂಭಾಗದಲ್ಲಿ ನೋವು, ಊತ ಅಥವಾ ಗಡ್ಡೆ
ಕುತ್ತಿಗೆಯ ಮುಂಭಾಗದಲ್ಲಿ ನೋವು, ಊತ, ಗಡ್ಡೆಗಳು ಮತ್ತು ಕುತ್ತಿಗೆಯ ಕೆಳಭಾಗದಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳುವುದು ಥೈರಾಯ್ಡ್ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಾಗಿವೆ.
38
ಧ್ವನಿಯಲ್ಲಿ ಬದಲಾವಣೆಗಳು
ಧ್ವನಿಯಲ್ಲಿ ಬದಲಾವಣೆ, ಅದರಲ್ಲೂ ವಾರಗಳು ಕಳೆದರೂ ಸರಿಹೋಗದ ಒರಟು ಧ್ವನಿ ಇದರ ಆರಂಭಿಕ ಲಕ್ಷಣವಾಗಿರಬಹುದು. ಥೈರಾಯ್ಡ್ ಗಡ್ಡೆಯು ಧ್ವನಿಪೆಟ್ಟಿಗೆಯನ್ನು ನಿಯಂತ್ರಿಸುವ ನರಗಳ ಮೇಲೆ ಪರಿಣಾಮ ಬೀರಿದಾಗ ಹೀಗಾಗುತ್ತದೆ. ಧ್ವನಿಯಲ್ಲಿನ ನಿರಂತರ ಬದಲಾವಣೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ.
ಮೇಲೆ ತಿಳಿಸಿದ ಯಾವುದೇ ಲಕ್ಷಣಗಳು ಕಂಡುಬಂದರೆ, ದಯವಿಟ್ಟು ಸ್ವಯಂ-ರೋಗನಿರ್ಣಯಕ್ಕೆ ಪ್ರಯತ್ನಿಸಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಅವರ ಪರೀಕ್ಷೆಯ ನಂತರವೇ ರೋಗವನ್ನು ಖಚಿತಪಡಿಸಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.