ಟೇಸ್ಟಿ ಟೇಸ್ಟಿ ಒಗ್ಗರಣೆ ಚಹ ಕುಡಿದು ನೋಡಿದ್ರಾ? ಮಾಡೋದು ಸಿಂಪಲ್​- ಹೀಗೆ ಮಾಡಿ ನೋಡಿ

Published : Feb 05, 2026, 05:43 PM IST

ಕೋಟ್ಯಂತರ ಚಹಾ ಪ್ರಿಯರ ದಿನಚರಿಯಲ್ಲಿ ಚಹಾ ಒಂದು ಅವಿಭಾಜ್ಯ ಅಂಗ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ 'ಒಗ್ಗರಣೆ ಟೀ' ಎಂಬ ಹೊಸ ಚಹಾ ಮಾಡುವ ವಿಧಾನವೊಂದು ಟ್ರೆಂಡಿಂಗ್‌ನಲ್ಲಿದೆ. ಮೊದಲು ಟೀ ಪುಡಿ ಮತ್ತು ಸಕ್ಕರೆಯನ್ನು ಬಿಸಿ ಮಾಡುವುದು ಇದರ ವಿಶೇಷತೆ. ಫುಲ್​ ಡಿಟೇಲ್ಸ್​ ಇಲ್ಲಿದೆ ನೋಡಿ.

PREV
16
ಚಹಾ ಪ್ರಿಯರು

ಚಹಾ ಪ್ರಿಯರು ಕೋಟ್ಯಂತರ ಮಂದಿ ಇದ್ದಾರೆ. ಬೆಳಿಗ್ಗೆ ಒಂದು ಲೋಟ ಬಿಸಿಬಿಸಿ ಚಹಾದೊಂದಿಗೆ ದಿನವನ್ನು ಆರಂಭಿಸುವ ಅಸಂಖ್ಯ ಮಂದಿ ಇದ್ದಾರೆ. ಬೆಳಿಗ್ಗೆ ಒಂದು ಲೋಟ ಚಹ ಬಾಯಿಯೊಳಗೆ ಹೋಗಿಲ್ಲ ಎಂದರೆ, ಇಡೀ ದಿನವೂ ಅದೇನೋ ಕಸಿವಿಸಿ ಆಗುವುದು ಇದೆ. ಕೆಲವರಿಗೆ ಚಹ ಕುಡಿಯದೇ ಹೋದರೆ ತಲೆನೋವು ಕೂಡ ಬರುತ್ತದೆ. ಅಷ್ಟರಮಟ್ಟಿಗೆ ಚಹಾ ಅಥವಾ ಕಾಫಿಗೆ ಎಡಿಕ್ಟ್​ ಆಗಿರುವವರು ಅಧಿಕ ಮಂದಿ. ಚಹಾದಲ್ಲಿ ಅದನ್ನು ಬೆರೆಸಿರುತ್ತಾರೆ, ಇದನ್ನು ಮಿಕ್ಸ್​ ಮಾಡಿರುತ್ತಾರೆ, ಕಲರ್ ಬರಲು ಕೆಮಿಕಲ್ಸ್​ ಹಾಕ್ತಾರೆ.... ಹೀಗೆ ಸಹಸ್ರಾರು ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ನೋಡಿದ್ರೂ ಚಹಾ ಇಲ್ಲದೇ ಇರೋದಕ್ಕಂತೂ ಸಾಧ್ಯವೇ ಇಲ್ಲ ಎಂದು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದವರೇ ಹಲವರು.

26
ಬಗೆಬಗೆ ಟೀ

ಇದೇ ಕಾರಣಕ್ಕೆ ಬಗೆಬಗೆಯ ಚಹಾ ಮಾಡಲಾಗುತ್ತದೆ. ನೂರಾರು ಬಗೆಯ ಚಹಕ್ಕಾಗಿಯೇ ವಿಶೇಷ ಅಂಗಡಿಗಳೂ ಇರುತ್ತವೆ. ಅಲ್ಲಿ ಬ್ಲ್ಯಾಕ್​ ಟೀ, ವೈಟ್​ ಟೀ, ಗ್ರೀನ್​ ಟೀ, ಅಸ್ಸಾಂ ಟೀ, ಶುಂಠಿ ಟೀ, ಮಸಾಲಾ ಟೀ, ಹರ್ಬಲ್​ ಟೀ, ತಂದೂರಿ ಟಿ, ಕಶ್ಮೀರಿ ಟೀ... ಅಬ್ಬಬ್ಬಾ ಹೇಳುತ್ತಾ ಹೋದರೆ ಪುಟಗಟ್ಟಲೆ ಆಗಬಹುದು. ಅಷ್ಟೊಂದು ವೆರೈಟಿಗಳಿವೆ.

36
ಸಾದಾ ಸೀದಾ ಟೀ

ಅದೇನೇ ಇದ್ದರೂ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸಾದಾ ಸೀದಾ ಟೀ ಮಾಡುವುದು ರೂಢಿ. ಹೆಚ್ಚೆಂದರೆ ಶುಂಠಿ ಟೀ ಇಲ್ಲದಿದ್ದರೆ ಗ್ರೀನ್​ ಟೀ ಮಾಡುವುದು ಸರ್ವೇ ಸಾಮಾನ್ಯ.

46
ಟೀ ಮಾಡುವುದೂ ಕಲೆ

ಟೀ ಏನೇ ಮಾಡಿದರೂ ಅದಕ್ಕೆ ಒಂದು ಟ್ರಿಕ್ಸ್​ ಇದ್ದೇ ಇರುತ್ತದೆ. ಟೀ ಪೌಡರ್​ಗಳನ್ನು ಆಧರಿಸಿ ಚಹ ತಯಾರು ಮಾಡಬೇಕು. ಕೆಲವೊಂದು ಟೀ ಪೌಡರ್​ಗಳನ್ನು ನೀರು ಕುದಿಯುವಾಗ ಹಾಕಿದರೆ, ಕೆಲವೊಂದಕ್ಕೆ ಹಾಲು ಕುದಿಯುವಾಗಿ ಪೌಡರ್​ ಸೇರಿಸಬೇಕಾಗುತ್ತದೆ. ಎಲ್ಲವನ್ನೂ ಒಂದೇ ರೀತಿಯಲ್ಲಿ ಅಳೆಯಲು ಆಗುವುದಿಲ್ಲ.

56
ಒಗ್ಗರಣೆ ಟೀ ಟ್ರೆಂಡಿಂಗ್​ನಲ್ಲಿ

ಇವೆಲ್ಲಕ್ಕಿಂತಲೂ ಭಿನ್ನವಾಗಿ ಇದೀಗ ಒಗ್ಗರಣೆ ಟೀ ಒಂದು ಟ್ರೆಂಡಿಂಗ್​ನಲ್ಲಿದೆ. diyahubballivlogs ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ.

66
ಮೊದಲಿಗೆ ನೀರು-ಹಾಲಲ್ಲ

ಸಾಮಾನ್ಯವಾಗಿ ಮೊದಲಿಗೆ ನೀರು ಅಥವಾ ಹಾಲು ಹಾಕುತ್ತೇವೆ. ಆದರೆ ಈ ಟ್ರೆಂಡಿಂಗ್​ ಟೀನಲ್ಲಿ ಮೊದಲು ತಲಾ ಎರಡು ಚಮಚ ಟೀ ಪೌಡರ್​ ಮತ್ತು ಸಕ್ಕರೆಯನ್ನು ಹಾಕಿಕೊಂಡು ಅದನ್ನು ಮಿಕ್ಸ್​ ಮಾಡಿ ಕೈಯಾಡಿಸಿದ್ದಾರೆ. ಬಳಿಕ ಅದಕ್ಕೆ ಒಂದು ಕಪ್​ ನೀರು ಹಾಕಲಾಗಿದೆ. ಅದು ಕುದಿಯುವಾಗ ತುಂಡು ಶುಂಠಿ ಮತ್ತು 1 ಏಲಕ್ಕಿ ಸೇರಿಸಲಾಗಿದೆ. ಮತ್ತೊಮ್ಮೆ ಅದನ್ನು ಕಲಕಿ ಅದು ಚೆನ್ನಾಗಿ ಕುದ್ದ ನಂತರ ಹಾಲನ್ನು ಹಾಕಲಾಗಿದೆ. ಇದನ್ನು ನೋಡಿದವರು ಇದನ್ನು ಒಗ್ಗರಣೆ ಟೀ ಎಂದು ಹೇಳಿದ್ದಾರೆ. ಇದು ಟೇಸ್ಟಿಯಾಗಿದೆ ಎಂದು ಕೆಲವರು ಕಮೆಂಟ್​ ಕೂಡ ಮಾಡಿದ್ದಾರೆ. ನೀವೂ ಬೇಕಿದ್ದರೆ ಟ್ರೈ ಮಾಡಿ ನೋಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories