Fennel water benefits: ಇದನ್ನು ಆರೋಗ್ಯಕರ ಬೆಳಗಿನ ಪಾನೀಯವಾಗಿ ಬಳಸಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪು ನೀರು ಕುಡಿಯುವುದರಿಂದ ಏನು ಪ್ರಯೋಜನ?, ಅದರ ಮಾಂತ್ರಿಕ ಪ್ರಯೋಜನಗಳೇನೆಂದು ತಿಳಿದುಕೊಳ್ಳೋಣ.
ಸೋಂಪು ಬಾಯಿಗೆ ಎಷ್ಟು ರುಚಿಕರವೋ ದೇಹಕ್ಕೂ ಅಷ್ಟೇ ಒಳ್ಳೇದು. ಅನೇಕ ಜನರು ಊಟದ ನಂತರ ಇದನ್ನು ತಿಂತಾರೆ. ಆದರೆ ಸೋಂಪು ನೀರು ಕುಡಿಯುವುದರಿಂದ ಎರಡು ಪಟ್ಟು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ. ಇದನ್ನು ಆರೋಗ್ಯಕರ ಬೆಳಗಿನ ಪಾನೀಯವಾಗಿ ಬಳಸಬಹುದು. ಹಾಗಾದರೆ ಬನ್ನಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪು ನೀರು ಕುಡಿಯುವುದರಿಂದ ಏನು ಪ್ರಯೋಜನ ಎಂದು ತಿಳಿದುಕೊಳ್ಳೋಣ.
26
ಹೈಡ್ರೇಶನ್‌ಗೆ ಸಹಕಾರಿ
ಸೋಂಪು ನೀರು ತುಂಬಾ ರುಚಿಕರವಾಗಿರುತ್ತದೆ. ಅಷ್ಟೇ ಅಲ್ಲ, ಇದು ಡಿಹೈಡ್ರೇಶನ್ ಆಗದಂತೆ ನೋಡಿಕೊಳ್ಳುತ್ತದೆ. ಚಳಿಗಾಲದಲ್ಲಿ ಬಾಯಾರಿಕೆ ಹೆಚ್ಚಾಗಿ ಕಡಿಮೆಯಾಗುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಸೋಂಪು ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ದೇಹವು ಹೈಡ್ರೇಟೆಡ್ ಆಗಿರುತ್ತದೆ.
36
ಜೀರ್ಣಕ್ರಿಯೆ
ಇತ್ತೀಚಿನ ದಿನಗಳಲ್ಲಿ ಹೊಟ್ಟೆಯ ಸಮಸ್ಯೆಗಳು ತುಂಬಾ ಸಾಮಾನ್ಯವಾಗಿದೆ. ಸೋಂಪಿನಲ್ಲಿ ಕಂಡುಬರುವ ಅನೆಥೋಲ್ ಜೀರ್ಣಕಾರಿ ರಸ ಮತ್ತು ಕಿಣ್ವಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಸೋಂಪು ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಉಬ್ಬುವಿಕೆ ಕಡಿಮೆ ಮಾಡಬಹುದು ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಸೋಂಪು ಫೈಟೊಈಸ್ಟ್ರೊಜೆನ್‌ಗಳಲ್ಲಿ ಸಮೃದ್ಧವಾಗಿದೆ. ಇವು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತೆ. ಹಾರ್ಮೋನುಗಳ ಸಮತೋಲನವು ಮುಟ್ಟಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುತ್ತದೆ. ಮನಸ್ಥಿತಿಯ ಬದಲಾವಣೆಗಳನ್ನು ಸ್ಥಿರಗೊಳಿಸುತ್ತದೆ.
56
ತೂಕ ಇಳಿಕೆ
ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಫೆನ್ನೆಲ್ ನೀರು ಅಂದರೆ ಸೋಂಪು ನೀರು ಪ್ರಯೋಜನಕಾರಿಯಾಗಿದೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ನಿಯಮಿತವಾಗಿ ಸೋಂಪು ನೀರನ್ನು ಕುಡಿಯುವುದರಿಂದ ಹಸಿವನ್ನು ನಿಯಂತ್ರಿಸಬಹುದು ಮತ್ತು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಬಹುದು.
66
ಚರ್ಮ ಮತ್ತು ಕೂದಲಿಗೆ
ಸೋಂಪು ನೀರು ಚರ್ಮ ಮತ್ತು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ಈ ನೀರಿನಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಿಂದ ಟಾಕ್ಸಿನ್ ತೆಗೆದುಹಾಕುತ್ತೆ. ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಕೂದಲಿಗೆ ಬಲವನ್ನೂ ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.