Early Warning Signs of Kidney Cancer ಕಿಡ್ನಿ ಕ್ಯಾನ್ಸರ್ ಸಾಮಾನ್ಯವಾಗಿ ಕಿಡ್ನಿಯೊಳಗೆ ಒಂದು ಗಡ್ಡೆಯಾಗಿ ಶುರುವಾಗುತ್ತದೆ. ಇದು ಬೆಳೆದಂತೆ, ರಕ್ತವನ್ನು ಫಿಲ್ಟರ್ ಮಾಡುವ ಕಿಡ್ನಿಗಳ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ದೇಹದ ಈ ಬದಲಾವಣೆಗಳನ್ನು ಕಡೆಗಣಿಸಬೇಡಿ; ಕಿಡ್ನಿ ಕ್ಯಾನ್ಸರ್ ಇರಬಹುದು
ಕಿಡ್ನಿ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು ಯಾವುವು ಎಂಬುದನ್ನು ಇಲ್ಲಿ ಒಂದೊಂದಾಗಿ ತಿಳಿಯೋಣ.
27
ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು
ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಮೂತ್ರವು ಗುಲಾಬಿ ಅಥವಾ ಕೆಂಪು ಬಣ್ಣದಲ್ಲಿರುವುದು ಕಿಡ್ನಿ ಕ್ಯಾನ್ಸರ್‌ನ ಪ್ರಮುಖ ಸಂಕೇತವಾಗಿರಬಹುದು.
37
ಕಿಡ್ನಿಯಲ್ಲಿ ಗಡ್ಡೆ
ಕಿಡ್ನಿಯಲ್ಲಿ ಗಡ್ಡೆ ಅಥವಾ ವೃಷಣದಲ್ಲಿ ಊತ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ. ಇದು ಕೂಡ ಒಂದು ಲಕ್ಷಣವಾಗಿರಬಹುದು.
47
ಬೆನ್ನು ನೋವು
ಬೆನ್ನುಮೂಳೆಯ ಎರಡೂ ಬದಿಗಳಲ್ಲಿ ನಿರಂತರವಾಗಿ ಕಾಡುವ ಬೆನ್ನು ನೋವು ಕೂಡ ಕಿಡ್ನಿ ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದಾಗಿರಬಹುದು.
57
ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆಯಾಗುವುದು
ಹಸಿವಾಗದಿರುವುದು, ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುವುದು, ನಿರಂತರ ಆಯಾಸ ಮತ್ತು ಜ್ವರ ಕೂಡ ಕಿಡ್ನಿ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು.
67
ರಕ್ತಹೀನತೆ
ಕಿಡ್ನಿ ಕ್ಯಾನ್ಸರ್‌ನಿಂದಾಗಿ ಕೆಲವರಲ್ಲಿ ರಕ್ತದೊತ್ತಡ ಹೆಚ್ಚಾಗಬಹುದು. ಜೊತೆಗೆ, ರಕ್ತಹೀನತೆ ಮತ್ತು ಮೂಳೆ ನೋವು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.
77
ಗಮನಿಸಿ:
ಮೇಲೆ ತಿಳಿಸಿದ ಯಾವುದೇ ಲಕ್ಷಣಗಳು ಕಂಡುಬಂದರೆ, ನೀವೇ ಸ್ವಯಂ-ರೋಗನಿರ್ಣಯ ಮಾಡಿಕೊಳ್ಳಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಬಹಳ ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.