ಸುಡೋ ಬಿಸಿಲಲ್ಲಿ ಕೋಲ್ಡ್ ನೀರು ಕುಡಿದ್ರೆ ಹಾರ್ಟ್ ಅಟ್ಯಾಕ್!

Published : May 07, 2025, 04:54 PM ISTUpdated : May 07, 2025, 04:57 PM IST

ನೀವು ನೀರಿಗೆ ಐಸ್ ಕ್ಯೂಬ್‌ಗಳನ್ನು ಹಾಕಿ ಸೇರಿಸುತ್ತೀರಾ?  ಹಾಗಿದ್ರೆ ನೀವಿದನ್ನು ಓದಲೇಬೇಕು ಯಾಕಂದ್ರೆ ಈ ಸುಡೋ ಬಿಸಿಲಲ್ಲಿ ತುಂಬಾ ತಂಪಾದ ನೀರು ಕುಡಿಯೋದ್ರಿಂದ ಅಪಾಯ ಉಂಟಾಗುತ್ತೆ.   

PREV
18
ಸುಡೋ ಬಿಸಿಲಲ್ಲಿ ಕೋಲ್ಡ್ ನೀರು ಕುಡಿದ್ರೆ ಹಾರ್ಟ್ ಅಟ್ಯಾಕ್!

ಬೇಸಿಗೆ ಕಾಲ ಮುಂದುವರಿಯುತ್ತಿದ್ದು, ತಾಪಮಾನ ನಿರಂತರವಾಗಿ (tempreture increased) ಹೆಚ್ಚುತ್ತಿದೆ. ಕೆಲವು ಸ್ಥಳಗಳಲ್ಲಿ ತಾಪಮಾನ 40 ಡಿಗ್ರಿ ದಾಟುತ್ತಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಶಾಖ ಮತ್ತು ಬಿಸಿ ಗಾಳಿಯಿಂದಾಗಿ, ದೇಹದಲ್ಲಿನ ನೀರು ಒಣಗಲು ಪ್ರಾರಂಭವಾಗುತ್ತಿದೆ, ಇದರಿಂದಾಗಿ ಬಾಯಾರಿಕೆ ಕೂಡ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ತುಂಬಾನೆ ಕೋಲ್ಡ್ ಆಗಿರುವ ನೀರು ಕುಡಿಯೋದು ಸರೀನಾ? 
 

28

ಬೇಸಿಗೆಯಲ್ಲಿ ಹೆಚ್ಚಿನ ಜನರು ನೀರಿಗೆ ಐಸ್ ಸೇರಿಸಿ (ice water) ಕುಡಿಯುವುದು ಸಾಮಾನ್ಯ. ಇದು ನಿಮಗೆ ಪರಿಹಾರ ನೀಡುತ್ತದೆ. ಆದರೆ ಐಸ್ ಜೊತೆ ನೀರು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ. ಈ ಅಭ್ಯಾಸ ಕ್ರಮೇಣ ನಿಮ್ಮ ಆರೋಗ್ಯವನ್ನು ಕೆಡಿಸಬಹುದು.
 

38

ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ಎರಡೂ ಕೂಡ ಅತಿಯಾಗಿ ತಣ್ಣೀರು ಅಥವಾ ಐಸ್ ನೀರನ್ನು ಕುಡಿಯುವುದರಿಂದ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುತ್ತೆ. ಈ ಬಗ್ಗೆ ಇಶಾ ಫೌಂಡೇಶನ್ ಸಂಸ್ಥಾಪಕ ಮತ್ತು ಆಧ್ಯಾತ್ಮಿಕ ಗುರು ಸದ್ಗುರುಗಳು (Spiritual Guru Sadguru) ಏನು ಹೇಳುತ್ತಾರೆ ನೋಡೋಣ. 
 

48

ನೀರು ನಾಲ್ಕು ಡಿಗ್ರಿಗಿಂತ ಹೆಚ್ಚು ತಣ್ಣಗಾಗಬಾರದು
ಅಮೆರಿಕಾದಲ್ಲಿ ಬಹುತೇಕ ಎಲ್ಲರೂ ಒಂದು ಲೋಟಕ್ಕೆ ಮೂರರಿಂದ ನಾಲ್ಕು ಐಸ್ ಕ್ಯೂಬ್‌ಗಳನ್ನು ಸೇರಿಸುವ ಮೂಲಕ ತಣ್ಣೀರು ಕುಡಿಯುತ್ತಾರೆ. ಯೋಗಿ ಸಂಸ್ಕೃತಿಯಲ್ಲಿ, ನೀವು ಯೋಗಿಯಾಗಿದ್ದು, ನಿಮ್ಮ ವ್ಯವಸ್ಥೆಯನ್ನು ಪರಿವರ್ತಿಸಲು ಮತ್ತು ನಿಮ್ಮ ದೇಹವನ್ನು ಹೊಸ ಮಟ್ಟದ ಸಾಧ್ಯತೆಗೆ ಕೊಂಡೊಯ್ಯಲು ಬಯಸಿದರೆ, ನೀವು ನಾಲ್ಕು ಡಿಗ್ರಿಗಳಿಗಿಂತ ಹೆಚ್ಚು ತಾಪಮಾನದ ನೀರನ್ನು ಮಾತ್ರ ಕುಡಿಯಬೇಕು ಎಂದಿದ್ದಾರೆ. 

58

ನೀವು ಯಾವ ರೀತಿಯ ನೀರನ್ನು ಕುಡಿಯಬೇಕು
ನಿಮ್ಮ ದೇಹದ ಸಾಮಾನ್ಯ ಉಷ್ಣತೆ (normal body tempreture) ಸುಮಾರು 30 ಡಿಗ್ರಿ ಸೆಲ್ಸಿಯಸ್. ಇದರರ್ಥ 26 ರಿಂದ 34 ಡಿಗ್ರಿ ಸೆಲ್ಸಿಯಸ್ ನಡುವೆ ನೀರು ಕುಡಿಯುವುದು ಉತ್ತಮ. ಸದ್ಗುರುಗಳ ಪ್ರಕಾರ, ನೀವು 40 ಡಿಗ್ರಿಗಳವರೆಗೆ ಬಿಸಿಯಾದ ನೀರನ್ನು ಕುಡಿಯಬಹುದು.

68

ವಿದ್ಯಾರ್ಥಿಗಳು ಯಾವ ರೀತಿಯ ನೀರನ್ನು ಕುಡಿಯಬೇಕು
ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಉತ್ತಮ ಜ್ಞಾನವನ್ನು ಬಯಸಿದರೆ, 8 ಡಿಗ್ರಿಗಳ ನಡುವಿನ ತಾಪಮಾನದ ನೀರನ್ನು ಕುಡಿಯಬೇಕು. ನೀವು ಮನೆಯಲ್ಲಿಯೇ ಇದ್ದರೆ, 12 ಡಿಗ್ರಿಗಳವರೆಗೆ ತಾಪಮಾನದ ನೀರನ್ನು ಕುಡಿಯಬಹುದು.

78
tempreture

ದೇಹದ ಉಷ್ಣತೆಯಲ್ಲಿ ಅಸಮತೋಲನ
ನಮ್ಮ ದೇಹವು ಒಂದು ನಿರ್ದಿಷ್ಟ ತಾಪಮಾನದಲ್ಲಿ ಕೆಲಸ ಮಾಡುತ್ತದೆ (ಬಾಹ್ಯವಾಗಿ ಸುಮಾರು 37°C ಅಥವಾ ಆಂತರಿಕವಾಗಿ 30°C). ನಾವು ತುಂಬಾ ತಣ್ಣನೆಯ ನೀರನ್ನು ಕುಡಿಯುವಾಗ, ಆ ನೀರನ್ನು ದೇಹದ ಉಷ್ಣತೆಗೆ ತರಲು ದೇಹವು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದು ಶಕ್ತಿಯನ್ನು ವ್ಯರ್ಥ ಮಾಡುತ್ತದೆ.
 

88

ತಣ್ಣೀರು ಕುಡಿಯುವುದರಿಂದಾಗುವ ಅನಾನುಕೂಲಗಳು ಯಾವುವು?
ಐಸ್ ನೀರು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು (digestion system) ನಿಧಾನಗೊಳಿಸುತ್ತದೆ. 
ಐಸ್ ನೀರು ಇದ್ದಕ್ಕಿದ್ದಂತೆ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. 
ಹೆಚ್ಚು ತಣ್ಣೀರು ಗಂಟಲಿನ ಕೋಶಗಳನ್ನು ಆಘಾತಗೊಳಿಸುತ್ತದೆ. 
ಅತಿಯಾಗಿ ಐಸ್ ಆಗಿರುವ ನೀರು ಕುಡಿಯುವುದರಿಂದ ರಕ್ತನಾಳಗಳು ಕುಗ್ಗುತ್ತವೆ, ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾ ಹೃದಯಾಘಾತ (Heart Attack) ಸಂಭವಿಸಬಹುದು.
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ತಣ್ಣೀರು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆ ನಿಧಾನವಾಗಬಹುದು. 
ತುಂಬಾ ತಣ್ಣೀರು ಕುಡಿಯುವುದು ಅಥವಾ ಐಸ್ ಅಗಿಯುವುದು ಹಲ್ಲುಗಳ ನರಗಳನ್ನು ಸೂಕ್ಷ್ಮಗೊಳಿಸುತ್ತದೆ.

Read more Photos on
click me!

Recommended Stories