Tulsi Seeds and Health: ತುಳಸಿ ಎಲೆ ಅಲ್ಲ, ಬೀಜ ಸೇವನೆಯಿಂದ ಅರೋಗ್ಯ ಸಮಸ್ಯೆ ದೂರ

First Published | Dec 5, 2021, 11:14 AM IST

ತುಳಸಿ ಬೀಜಗಳು ಅದರ ಎಲೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ, ಹೊಟ್ಟೆಯ ಸಮಸ್ಯೆಗಳಿಂದ ಹಿಡಿದು,  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ ತುಳಸಿ ಬೀಜಗಳು ಸಹಾಯಕವಾಗಿವೆ. ಈ 5 ದೊಡ್ಡ ಪ್ರಯೋಜನಗಳನ್ನು ದೈನಂದಿನ ಸೇವನೆಯಿಂದ ಪಡೆಯಬಹುದು. 
 

ತುಳಸಿ(Tulasi) ಎಲೆಗಳ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆ, ಆದರೆ ತುಳಸಿ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಲಾಭವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ತೂಕ ಇಳಿಕೆಯಿಂದ ಹಿಡಿದು ರೋಗ ನಿರೋಧಕ ಶಕ್ತಿ ಮತ್ತು ಯಾವುದೇ ರೀತಿಯ ಸೋಂಕು ನಿವಾರಣೆಗೆ ತುಳಸಿ ಬೀಜದ ಸೇವನೆ ಪರಿಣಾಮಕಾರಿ. ತುಳಸಿಯಲ್ಲಿರುವ ಔಷಧೀಯ ಗುಣಗಳು ಅನೇಕ ರೋಗಗಳನ್ನು ದೂರವಿಡುತ್ತವೆ.


ಚಿಯಾ ಬೀಜಗಳನ್ನು ಹೋಲುವ ಕಪ್ಪು ಮತ್ತು ಕಣ್ಣೀರಿನ ಆಕಾರದ ಈ ತುಳಸಿ ಬೀಜ(Seed)ಗಳು ಪ್ರೋಟೀನ್ ಗಳು, ಕಾರ್ಬ್ಸ್ ಮತ್ತು ಅಗತ್ಯ ಕೊಬ್ಬುಗಳಿಂದ ಸಮೃದ್ಧವಾಗಿವೆ ಮತ್ತು ಸಾಕಷ್ಟು ನಾರಿನಂಶದಿಂದ ತುಂಬಿವೆ. ತುಳಸಿ ಬೀಜಗಳು ಕಬ್ಬಿಣ, ವಿಟಮಿನ್ ಕೆ ಮತ್ತು ಪ್ರೋಟೀನ್ ನಿಂದ ತುಂಬಿರುತ್ತವೆ.

Tap to resize

ರೋಗನಿರೋಧಕತೆಗಾಗಿ(Immunity)
ತುಳಸಿ ಬೀಜಗಳಲ್ಲಿ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಜೊತೆಗೆ ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ, ಇದು ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಈ ಬೀಜಗಳಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಫ್ಲೇವನಾಯ್ಡ್ ಗಳು ಮತ್ತು ಫಿನೋಲಿಕ್ ಗಳಿವೆ. ಶೀತದ ಸಮಸ್ಯೆಯಲ್ಲಿ ತುಳಸಿ ಬೀಜದ ಕಷಾಯ ಅಥವಾ ಟೀ ಕುಡಿಯುವುದರಿಂದ ಸಹಾಯವಾಗುತ್ತದೆ.

ಹೊಟ್ಟೆ(Stomach)ಯ ಸಮಸ್ಯೆಗಳು
ತುಳಸಿ ಬೀಜಗಳ ಸೇವನೆಯು ವಿಘಟನೆಯನ್ನು ಸರಿಯಾಗಿರಿಸುತ್ತದೆ. ಇದರಿಂದ ಮಲಬದ್ಧತೆ, ಅಸಿಡಿಟಿ ಅಥವಾ ಅಜೀರ್ಣತೆ ನಿವಾರಣೆಯಾಗುತ್ತದೆ. ಇದರ ಬೀಜಗಳನ್ನು ಸ್ವಲ್ಪ ಕಾಲ ನೀರಿನಲ್ಲಿ ಹಾಕಿ ನಂತರ ಈ ನೀರನ್ನು ಸೇವಿಸಿ. ಇದು ಸಹಾಯ ಮಾಡುತ್ತದೆ.


ಉರಿಯೂತವನ್ನು ಕಡಿಮೆ ಮಾಡಲು 
ದೇಹ(Body)ದಲ್ಲಿ ಯಾವುದೇ ಊತವಿದ್ದರೆ ತುಳಸಿ ಬೀಜಗಳನ್ನು ಸೇವಿಸುವುದರಿಂದ ನಿಮಗೆ ಲಾಭವಾಗುತ್ತದೆ. ತುಳಸಿ ಬೀಜಗಳಲ್ಲಿ ಉರಿಯೂತ ನಿವಾರಕ ಗುಣಗಳಿವೆ, ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ.

ತೂಕ ಇಳಿಸುವಲ್ಲಿ(Weight loss) ಪರಿಣಾಮಕಾರಿ 
ತುಳಸಿ ಬೀಜಗಳ ಸೇವನೆಯೂ ತೂಕ ಇಳಿಕೆಯಲ್ಲಿ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತುಳಸಿ ಬೀಜಗಳಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆಯಿರುತ್ತವೆ ಮತ್ತು ಇದರಲ್ಲಿ ಫೈಬರ್ ಸಮೃದ್ಧವಾಗಿದೆ.

ನಿಯಮಿತವಾಗಿ ತುಳಸಿ ಬೀಜಗಳನ್ನು ತಿನ್ನುವುದರಿಂದ ನಿಮಗೆ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ತುಳಸಿ ಬೀಜಗಳಿಂದ  ಗ್ರೀನ್ ಟೀ(Green tea) ತಯಾರಿಸಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಲಾಭವಾಗುತ್ತದೆ. 

ಒತ್ತಡPressure)ವು ಹೋಗುತ್ತದೆ
ತುಳಸಿ ಬೀಜಗಳನ್ನು ಸೇವಿಸುವುದರಿಂದ ಒತ್ತಡ ನಿವಾರಿಸುವಲ್ಲಿಯೂ ನಿಮಗೆ ಲಾಭವಾಗಲಿದೆ. ಇದರಿಂದ ಒತ್ತಡ ನಿವಾರಣೆಯಾಗುತ್ತದೆ.ಮನಸ್ಸು ಶಾಂತವಾಗುತ್ತದೆ. ಆದುದರಿಂದ ಇದನ್ನು ಮಿಸ್ ಮಾಡದೆ ಪ್ರತಿದಿನ ಸೇವಿಸಿ. . 

Latest Videos

click me!