Garlic Health Benefits: ಬೆಳ್ಳುಳ್ಳಿ ಗಿಡ ಬೆಳೆಸಿ ಈ 5 ಅದ್ಭುತ ಪ್ರಯೋಜನ ಪಡೆಯಿರಿ !!

First Published | Dec 4, 2021, 8:53 PM IST

ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಬೆಳ್ಳುಳ್ಳಿ ಅನೇಕ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಇದರ ಎಲೆಗಳು ಅನೇಕ ವಿಧಗಳಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ. ತಾಜಾ ಬೆಳ್ಳುಳ್ಳಿ ಎಲೆಗಳನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ನೀವು ಮನೆಯಲ್ಲಿ ಬೆಳ್ಳುಳ್ಳಿಯನ್ನು ಸುಲಭವಾಗಿ ನೆಡಬಹುದು ಮತ್ತು ಅದರ ಎಲೆಗಳನ್ನು ಬಳಸಬಹುದು. 

ಬೆಳ್ಳುಳ್ಳಿGarlic) ಸಸ್ಯವನ್ನು ನೆಡುವುದು ಹೇಗೆ?
-ಅಡುಗೆ ಮನೆಯ ತೋಟದಲ್ಲಿ ಬೆಳ್ಳುಳ್ಳಿ ಗಿಡವನ್ನು ಸುಲಭವಾಗಿ ನೆಡಬಹುದು. 
-  ಮೊದಲು ಬೆಳ್ಳುಳ್ಳಿಯನ್ನು ಬೇರ್ಪಡಿಸಿ.
-ಮಡಕೆಗೆ ಮಣ್ಣನ್ನು ಸೇರಿಸಿ ಮತ್ತು ಕೆಲವು ಗಂಟೆಗಳ ಕಾಲ ಬಿಡಿ.
-ಈಗ ಮಡಕೆಯ ಮಣ್ಣಿಗೆ ಬೆಳ್ಳುಳ್ಳಿಗಳನ್ನು 3 ರಿಂದ 4 ಇಂಚು ಆಳದಲ್ಲಿ ಸೇರಿಸಿ ಮತ್ತು ಮೇಲಿನಿಂದ ಮಣ್ಣನ್ನು ಒತ್ತಿ.


-ಬೀಜಗಳನ್ನು ಹಾಕಿದ  ನಂತರ ಮೇಲಿನಿಂದ ಗೊಬ್ಬರವನ್ನು ಸೇರಿಸಿ.
-ಸಾವಯವ ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರವನ್ನು ಮಾತ್ರ ಬಳಸಿ.
-ಪ್ರತಿದಿನ ಗಿಡಕ್ಕೆ  ಸೂರ್ಯನ(Sun) ಬೆಳಕನ್ನು ತೋರಿಸಿ, ನೀರು ಹಾಕಲು ಮರೆಯಬೇಡಿ.

Tap to resize


-ಬೀಜ ಮೊಳಕೆಯೊಡೆದ ಮೇಲೆ ನಿಯಮಿತವಾಗಿ ಗೊಬ್ಬರ ಮತ್ತು ನೀರು ಸೇರಿಸಿ.
-ಬೆಳ್ಳುಳ್ಳಿ ಗಿಡವನ್ನು 2 ರಿಂದ 3 ತಿಂಗಳೊಳಗೆ ಕತ್ತರಿಸಿ. 
- ಇಲ್ಲವಾದರೆ ಗಿಡ ಬೇಗನೆ ಹಾಳಾಗುವ ಸಾಧ್ಯತೆ ಇದೆ. ಆದುದರಿಂದ ಈ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯ.

ಈ ಪ್ರಯೋಜನಗಳು ಎಲೆಗಳಿಂದ ಬರುತ್ತವೆ
ಹೃದಯ(Heart)ದ ಆರೋಗ್ಯಕ್ಕಾಗಿ 
ಬೆಳ್ಳುಳ್ಳಿಯ ಹಸಿರು ಎಲೆಗಳಲ್ಲಿನ ಸಕ್ರಿಯ ಅಂಶವು ಎಲಿಸಿನ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲೂ ನಿಮಗೆ ಲಾಭವಾಗಲಿದೆ. 

ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದ್ರೋಗಗಳು ಮತ್ತು ಪಾರ್ಶ್ವವಾಯು(Paralysis)ಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿ ಎಲೆಯ ಚಹಾವನ್ನು ಸಹ ನೀವು ಕುಡಿಯಬಹುದು ಅಥವಾ ಅದನ್ನು ಆಹಾರಕ್ಕೆ ಸೇರಿಸಿ ಸೇವಿಸಬಹುದು. 


ರಕ್ತBlood) ಪರಿಚಲನೆ 
ಬೆಳ್ಳುಳ್ಳಿ ಎಲೆಗಳಲ್ಲಿರುವ ವಿಟಮಿನ್ ಸಿ ದೇಹದಲ್ಲಿ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಕೆಂಪು ರಕ್ತ ಕಣಗಳ ಪ್ರಮಾಣ ಹೆಚ್ಚುತ್ತದೆ ಹಾಗೂ ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗುತ್ತದೆ. ಇದರಿಂದ ದೇಹ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ.


ವಿಸರ್ಜಿಸಲು 
ಬೆಳ್ಳುಳ್ಳಿ ಎಲೆಗಳಲ್ಲಿ ಇರುವ ಉರಿಯೂತ ನಿವಾರಕ ಗುಣ ಹೊಟ್ಟೆ(Stomach)ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಿಂದ ವಿಘಟನೆಯು ಉತ್ತಮವಾಗುತ್ತದೆ ಮತ್ತು ಹೊಟ್ಟೆಯುಬ್ಬರದ ಸಮಸ್ಯೆಗಳು ಉಂಟಾಗುವುದಿಲ್ಲ. 

ಬೆಳ್ಳುಳ್ಳಿ ಎಲೆಗಳಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿಬಯೋಟಿಕ್(Antibiotic) ಗುಣಗಳು ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತವೆ. 

ದೇಹವನ್ನು ನಿರ್ವಿಷಗೊಳಿಸುತ್ತದೆ
ಬೆಳ್ಳುಳ್ಳಿ ಎಲೆ(Garlic leaves)ಗಳ ಸೇವನೆ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಬೆಳ್ಳುಳ್ಳಿ ಎಲೆಗಳನ್ನು ಕುದಿಸಿ ಅದರ ನೀರನ್ನು ಸೇವಿಸಿ. ಬೆಳ್ಳುಳ್ಳಿ ಎಲೆಗಳನ್ನು ಅಗಿಯುವುದು ಸಹ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.

Latest Videos

click me!