Raisin Water Benefits: ಒಣ ದ್ರಾಕ್ಷಿ ನೀರು ಯಾವಾಗ ಕುಡಿದರೊಳಿತು?

First Published Dec 4, 2021, 5:20 PM IST

ಒಣದ್ರಾಕ್ಷಿಯು ಡ್ರೈಫೂಟ್ ಆಗುವುದರಿಂದ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಒಣದ್ರಾಕ್ಷಿ ನೀರಿನ ಪ್ರಯೋಜನಗಳು ಹಲವು, ಹೌದು, ಒಣದ್ರಾಕ್ಷಿ ಸೇವನೆಯ ಪ್ರಯೋಜನಗಳ ಬಗ್ಗೆ ಇಲ್ಲಿಯವರೆಗೆ ಕೇಳಿರಬಹುದು, ಆದರೆ ಅದರ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ತರಬಹುದು. 
 

ಆಯುರ್ವೇದ ತಜ್ಞರು ಏನು ಹೇಳುತ್ತಾರೆ?
ಪ್ರಸಿದ್ಧ ಆಯುರ್ವೇದ ತಜ್ಞ ಹಾಗೂ ಲೇಖಕ ಡಾ.ಅಬ್ರಾರ್ ಮುಲ್ತಾನಿ ಅವರ ಪ್ರಕಾರ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೀರನ್ನು ಸೇವಿಸಿದರೆ ಮಲಬದ್ಧತೆ ಉಂಟಾಗುವದಿಲ್ಲ. ರೋಗ ನಿರೋಧಕ ಶಕ್ತಿ (Immunity Power) ಹೆಚ್ಚುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. 

ದ್ರಾಕ್ಷಿ (Raisin) ಖರೀದಿಸುವಾಗ ಎಚ್ಚರವಿರಲಿ: 
ಹೆಚ್ಚು ಬ್ರೈಟ್ ಆಗಿರುವ ಒಣದ್ರಾಕ್ಷಿಗಳನ್ನು ಬಳಸಬೇಡಿ, ಏಕೆಂದರೆ ಅವು ನೈಸರ್ಗಿಕವಲ್ಲ, ಅವು ರಾಸಾಯನಿಕಗಳನ್ನು ಹೊಂದಿರಬಹುದು.
ಒಣದ್ರಾಕ್ಷಿ ನೀರನ್ನು ತಯಾರಿಸಲು, ಗಾಢ ಬಣ್ಣದಲ್ಲಿರುವ ಒಣದ್ರಾಕ್ಷಿಗಳನ್ನು ಖರೀದಿಸಿ. ಅವು ತುಂಬಾ ಗಟ್ಟಿಯಾಗಿರೋಲ್ಲ.

ಈ ರೀತಿ ಒಣದ್ರಾಕ್ಷಿ ನೀರನ್ನು ತಯಾರಿಸಿ
ಪ್ರತಿದಿನ ಒಂದು ಮಡಕೆಯಲ್ಲಿ 15-20 ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಡಿ.
ಬೆಳಿಗ್ಗೆ ಎದ್ದು ನೀರನ್ನು ಸೋಸಿ ಒಂದು ಲೋಟದಲ್ಲಿ ಇರಿಸಿ
ಈಗ ಈ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ

ಒಣದ್ರಾಕ್ಷಿ ನೀರನ್ನು ಕುಡಿಯುವ ಅದ್ಭುತ ಪ್ರಯೋಜನಗಳು
ದೇಹದಲ್ಲಿ ಕಬ್ಬಿಣ (Iron)ದ ಕೊರತೆಯನ್ನು ನೀಗಿಸಲು ಒಣದ್ರಾಕ್ಷಿಯನ್ನು ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. 
ಒಣದ್ರಾಕ್ಷಿ ನೀರು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. 

ಒಣದ್ರಾಕ್ಷಿ ನೀರು ಚರ್ಮದ ಮೇಲಿನ ಸುಕ್ಕು (Wrinkles)ಗಳನ್ನು ತೆಗೆದುಹಾಕಲು ತುಂಬಾ ಸಹಾಯಕ. ಜೊತೆಗೆ ಚರ್ಮ ತಾಜಾತನದಿಂದ ಕೂಡಿರುತ್ತದೆ. ಆದುದರಿಂದ ಮಿಸ್ ಮಾಡದೆ ಒಣದ್ರಾಕ್ಷಿ ಸೇವನೆಯನ್ನು ನಿತ್ಯವೂ ಬಿಡದೆ ಮುಂದುವರೆಸಿ. 

ಒಣದ್ರಾಕ್ಷಿ ನೀರು ಕುಡಿಯುವುದರಿಂದ ಹೊಟ್ಟೆ ಸಂಪೂರ್ಣವಾಗಿ ಸ್ವಚ್ಛಗೊಳ್ಳುತ್ತದೆ. ಇದು ಯಕೃತ್ತನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ದೇಹದಲ್ಲಿನ ರೋಗಗಳನ್ನು ತಡೆಯುತ್ತದೆ. ಹೊಟ್ಟೆ (Stomach) ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಪ್ರತಿದಿನ ಒಣದ್ರಾಕ್ಷಿ ನೀರು ಸೇವಿಸಿ. 

ಯಾರಿಗಾದರೂ ಗ್ಯಾಸ್ ಮತ್ತು ಮಲಬದ್ಧತೆ (Constipation) ಇದ್ದರೆ, ಅಂತಹವರು ಬೆಳಿಗ್ಗೆ ಒಣದ್ರಾಕ್ಷಿ ನೀರನ್ನು ಕುಡಿಯುವುದು ಸಹ ಪ್ರಯೋಜನಕಾರಿ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಹೊಟ್ಟೆ ಹಗುರಾಗುತ್ತದೆ. 

ಪದೇ ಪದೇ ಅರೋಗ್ಯ (Health) ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಒಣದ್ರಾಕ್ಷಿ ನೀರು ಸೇವಿಸಬೇಕು.ರೋಗ ನಿರೋಧಕ ಶಕ್ತಿಯನ್ನು ಒಣದ್ರಾಕ್ಷಿ ನೀರು ಹೆಚ್ಚಿಸುತ್ತದೆ. ಆದುದರಿಂದ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಇದನ್ನು ಕುಡಿಯುವುದು ಉತ್ತಮ. ರೋಗಗಳ ವಿರುದ್ಧ ಹೊರಡುವ ಶಕ್ತಿ ದೊರೆಯುತ್ತದೆ. 

ಒಣದ್ರಾಕ್ಷಿಯಲ್ಲಿ ವಿಟಮಿನ್ ಸಿ ಮತ್ತು ಬಿ ಎರಡೂ ಇದೆ, ಜೊತೆಗೆ ಆಂಟಿಆಕ್ಸಿಡೆಂಟ್ (Anti oxident) ಗುಣಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇಂತಹ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಕಾಪಾಡಿಕೊಳ್ಳಲು ಒಣದ್ರಾಕ್ಷಿ ನೀರನ್ನು ಸೇವಿಸುವುದು ಪ್ರಯೋಜನಕಾರಿ.

click me!