Health Tips: ಪದೇ ಪದೇ ಹೊಟ್ಟೆ ಉಬ್ಬರ ಸಮಸ್ಯೆಯೇ? ಈ ಆಹಾರ ಅವಾಯ್ಡ್ ಮಾಡಿ

Published : Jun 27, 2022, 06:32 PM IST

ಹೊಟ್ಟೆ ಉಬ್ಬರವು ಬಹಳಷ್ಟು ಜನರಿಗೆ ತೊಂದರೆ ನೀಡುತ್ತೆ. ಈ ಸಮಸ್ಯೆಯೂ ಹೆಚ್ಚಾಗಿ ಊಟ ಮಾಡಿದ ನಂತರವೇ ಉಂಟಾಗುತ್ತೆ. ಹೀಗೆ ಆಗಲು ಪ್ರಮುಖ ಕಾರಣ ಎಂದರೆ ಗ್ಯಾಸ್ ಅಥವಾ ಇತರ ಜೀರ್ಣಕಾರಿ ಸಮಸ್ಯೆಗಳು.. ತಜ್ಞರು ಹೇಳುವ ಪ್ರಕಾರ, ಪ್ರತಿದಿನ ಸುಮಾರು 16-30 ಪ್ರತಿಶತದಷ್ಟು ಜನರು ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದಾರೆ. 

PREV
111
Health Tips: ಪದೇ ಪದೇ ಹೊಟ್ಟೆ ಉಬ್ಬರ ಸಮಸ್ಯೆಯೇ? ಈ ಆಹಾರ ಅವಾಯ್ಡ್ ಮಾಡಿ

ಯಾವಾಗಲೂ ಹೊಟ್ಟೆ ಉಬ್ಬರ(Bloating) ಅಥವಾ ಊತವು ಗಂಭೀರ ಮೆಡಿಕಲ್ ಕಂಡೀಷನ್ ನ ಲಕ್ಷಣವಾಗಿರಬಹುದು, ಆದ್ದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ಉಬ್ಬಿದ್ದರೆ, ವೈದ್ಯರನ್ನು ಭೇಟಿ ಮಾಡಿ. ಕೆಲವೊಮ್ಮೆ ನಾವು ತಿನ್ನೋ ಆಹಾರದಿಂದಾಗಿ ಹೊಟ್ಟೆ ಉಬ್ಬರ ಉಂಟಾಗುತ್ತೆ. ಯಾವ ಆಹಾರ ಸೇವಿಸಿದ್ರೆ ಹೊಟ್ಟೆ ಉಬ್ಬರ ಉಂಟಾಗುತ್ತೆ ನೋಡೋಣ…

211

 ಬೀನ್ಸ್ (Beans)
ಹೊಟ್ಟೆ ಉಬ್ಬರಕ್ಕೆ ಕಾರಣವಾಗುವ ವಸ್ತುಗಳಲ್ಲಿ ದ್ವಿದಳ ಧಾನ್ಯ ಸಹ ಸೇರಿದೆ.  ಅನೇಕ ರೀತಿಯ ಫೈಬರ್-ಸಮೃದ್ಧವಾಗಿರುವ ಬೀನ್ಸ್ ಹೆಚ್ಚು ಪ್ರಮಾಣದ ಕಾರ್ಬೋಹೈಡ್ರೇಟ್ ಹೊಂದಿರುತ್ತೆ . ಈ  ಕಾರ್ಬೋಹೈಡ್ರೇಟ್ ಸಕ್ಕರೆ ರೂಪದಲ್ಲಿಯೂ ಕಂಡುಬರುತ್ತೆ, ಇವುಗಳನ್ನು ಆಲಿಗೋಸ್ಯಾಕರೈಡ್ ಎಂದು ಕರೆಯಲಾಗುತ್ತೆ. ಈ ಸಕ್ಕರೆ ಸುಲಭವಾಗಿ ಜೀರ್ಣವಾಗೋದಿಲ್ಲ.ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತೆ.

311

ಊಟಕ್ಕೆ ಮೊದಲು ಪೌಷ್ಟಿಕಾಂಶ ಭರಿತ ಬೀನ್ಸ್ ನೀರಿನಲ್ಲಿ ನೆನೆಸೋದರಿಂದ ಆಲಿಗೋಸ್ಯಾಕರೈಡ್  ಪ್ರಮಾಣ ಕಡಿಮೆ ಮಾಡಬಹುದು ಮತ್ತು ಜೀರ್ಣಿಸಿಕೊಳ್ಳಲು ಸುಲಭವಾಗುತ್ತೆ. ಇನ್ನು ಮುಂದೆ ನೀವು ಬೀನ್ಸ್ ಬಳಕೆ ಮಾಡೋದಾದ್ರೆ ನೀರಿನಲ್ಲಿ ಹಾಕಿ ಬಳಿಕವೇ ಅದನ್ನು ಬಳಸಿ.
 

411

ಬೇಳೆಕಾಳು
ಬೇಳೆಕಾಳು ಸಹ ಒಂದು ರೀತಿಯ ದ್ವಿದಳ ಧಾನ್ಯ ಏಕೆಂದರೆ ದ್ವಿದಳ ಧಾನ್ಯಗಳಿಂದ ಬೇಳೆಕಾಳು ಹೊರತೆಗೆಯಲಾಗುತ್ತೆ. ದಾಲ್ ಸ್ವಲ್ಪ ಸಮಯ ನೆನೆಸಿ, ನಂತರ ಅದನ್ನು ಅಡುಗೆಗೆ ಬಳಸಿ. ಇದು ದಾಲ್ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತೆ. 

511

ತಿಳಿ ಬಣ್ಣದ ಬೇಳೆಕಾಳುಗಳು ಡಾರ್ಕ್ ಬಣ್ಣದ ಬೇಳೆಕಾಳುಗಳಿಗಿಂತ ಕಡಿಮೆ ನಾರಿನಂಶ ಹೊಂದಿರುತ್ತೆ, ಇದು ಜೀರ್ಣಿಸಿಕೊಳ್ಳಲು ಸುಲಭವಾಗುವಂತೆ ಮಾಡುತ್ತೆ. ಆದ್ದರಿಂದ ಹೊಟ್ಟೆ ಉಬ್ಬರ ಹೆಚ್ಚಾಗಿದ್ದರೆ, ಡಾರ್ಕ್ ಬಣ್ಣದ ಬೇಳೆಕಾಳು ತಿನ್ನಿ.
 

611

ಡೈರಿ ಪ್ರಾಡಕ್ಟ್ಸ್ (Dairy products)
ಡೈರಿ ಉತ್ಪನ್ನಗಳಲ್ಲಿ ಇರುವಂತಹ ಮುಖ್ಯ ಕಾರ್ಬೋಹೈಡ್ರೇಟ್ ಅಂದರೆ ಲ್ಯಾಕ್ಟೋಸ್. ಇದನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ 4 ರಲ್ಲಿ 3 ಜನರಿಗೆ ಇರೋದಿಲ್ಲ ಎಂದು ನಿಮಗೆ ತಿಳಿದಿದ್ಯಾ? ಇದರಿಂದ ಹೊಟ್ಟೆ ಉಬ್ಬರ ಸಮಸ್ಯೆ ಉಂಟಾಗುತ್ತೆ.

711

ಲ್ಯಾಕ್ಟೋಸ್ ಅಸಹಿಷ್ಣುತೆ, (lactose intolerance) ಹೊಟ್ಟೆ ಉಬ್ಬರ ಅಥವಾ ಇತರ ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮಗೂ ಹಾಲಿನ ಅಲರ್ಜಿ ಇದ್ದರೆ ಹಾಲಿನ ಚೀಸ್ ಬದಲಿಗೆ, ನೀವು ಟೋಫು ಮತ್ತು ಹಾಲಿನ ಬದಲು ಬಾದಾಮಿ ಹಾಲು ಸೇವಿಸಬಹುದು. 
 

811

ಕಾರ್ಬೊನೇಟೆಡ್ ಡ್ರಿಂಕ್ಸ್(Carbonated drinks) 
ಕಾರ್ಬೊನೇಟೆಡ್ ಡ್ರಿಂಕ್ಸ್ ನಲ್ಲಿ ಗ್ಯಾಸ್ ಹೆಚ್ಚಾಗಿರುತ್ತೆ. ಯಾರಾದರೂ ಕಾರ್ಬೊನೇಟೆಡ್ ಡ್ರಿಂಕ್ಸ್ ಕುಡಿದರೆ, ಅದು ಗ್ಯಾಸ್ ಗುಳ್ಳೆಗಳ ರೂಪದಲ್ಲಿ ನಿಮ್ಮ ಹೊಟ್ಟೆಗೆ ಹೋಗುತ್ತೆ, ಇದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತೆ.

911

ನೀವು ಕಾರ್ಬೊನೇಟೆಡ್ ಡ್ರಿಂಕ್ಸ್  ಬದಲು ನಿಂಬೆ ನೀರು(Lemon water), ಎಳನೀರು ಅಥವಾ ತಾಜಾ ಜ್ಯೂಸ್ ಕುಡಿಯಬಹುದು. ಇದು ನಿಮ್ಮನ್ನು ದಿನ ಪೂರ್ತಿ ಹೈಡ್ರೇಟ್ ಆಗಿರಿಸುತ್ತೆ, ಅಲ್ಲದೇ ದಿನವಿಡೀ ಫ್ರೆಶ್ ಆಗಿರಿಸಲು ಸಹಾಯ ಮಾಡುತ್ತೆ. 
 

1011

ಸೊಪ್ಪು ತರಕಾರಿ 
ಎಲೆಕೋಸು ಫ್ಯಾಮಿಲಿಗೆ ಸೇರುವ ತರಕಾರಿ ತಿನ್ನುವುದು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಈ ತರಕಾರಿಗಳಲ್ಲಿ ಬ್ರೊಕೋಲಿ(Brocoli), ಬ್ರಸೆಲ್ಸ್ ಮೊಳಕೆಗಳು, ಹೂಕೋಸು ಮತ್ತು ಎಲೆಕೋಸು ಸೇರಿವೆ. ಏಕೆಂದರೆ ಅವು ಸ್ವಲ್ಪ ಹೆಚ್ಚಿನ ಸಕ್ಕರೆ ಅಂಶ ಹೊಂದಿರುತ್ತೆ.

1111

ಹಸಿ ತರಕಾರಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತೆ, ಆದ್ದರಿಂದ ಕ್ರೂಸಿಫೆರಸ್ ತರಕಾರಿ ಬೇಯಿಸುವ ಬದಲು ಸಲಾಡ್ (Salad)ಆಗಿ ತಿನ್ನಿ. ಹಸಿ ತರಕಾರಿಗಳ ಸೇವನೆ ಹೆಚ್ಚಿನ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸೋದ್ರಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತೆ. 

click me!

Recommended Stories