ಮನೆಯಲ್ಲಿ ಅಡುಗೆ ಮಾಡುವಾಗ ಗ್ಯಾಸ್(Cooking gas) ಹೇಗೆ ಉಳಿಸಬಹುದು ಎಂದು ನೀವು ಯೋಚ್ನೆ ಮಾಡುತ್ತಿದ್ದರೆ, ಇಲ್ಲಿದೆ ನಿಮಗಾಗಿ ಸಖತ್ ಟಿಪ್ಸ್. ಈ ಪರಿಹಾರಗಳು ಕುಕಿಂಗ್ ಗ್ಯಾಸ್ ಉಳಿಸುವುದು ಮಾತ್ರವಲ್ಲದೆ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಫಟಾಫಟ್ ಆಗಿ ಆಹಾರ ತಯಾರಿಸಬಹುದು.
ಕುಕಿಂಗ್ ಗ್ಯಾಸ್ ಈ ರೀತಿ ಉಳಿಸಬಹುದು
ನಾವು ಯಾವಾಗಲೂ ಅಡುಗೆ ಮಾಡಿದ ನಂತರ ಬೆಳಿಗ್ಗೆ ಮತ್ತು ಸಂಜೆ ಗ್ಯಾಸ್ ಸ್ಟವ್ ಸ್ವಚ್ಛಗೊಳಿಸುತ್ತೇವೆ, ಆದರೆ ನೀವು ಎಂದಾದರೂ ಗ್ಯಾಸ್ ಬರ್ನರ್(Gas burner) ಬಗ್ಗೆ ಗಮನ ಹರಿಸಿದ್ದೀರಾ? ಇಲ್ಲ ಅಂದ್ರೆ ನೀವು ತಪ್ಪು ಮಾಡ್ತಿದ್ದೀರಿ ಎಂದು ಅರ್ಥ.
ಗ್ಯಾಸ್ ಬರ್ನರ್ ಸ್ವಚ್ಛಗೊಳಿಸೋದು ಸಹ ಅಷ್ಟೇ ಮುಖ್ಯ. ಇದಕ್ಕಾಗಿ, ನೀವು ಪಿನ್ ಅಥವಾ ಬ್ರಷ್ ಸಹಾಯದಿಂದ ಬರ್ನರ್ ನ ರಂಧ್ರವನ್ನು ಸ್ವಚ್ಛಗೊಳಿಸಬಹುದು. ಇದು ಗ್ಯಾಸ್ ವ್ಯರ್ಥವಾಗಲು ಕಾರಣವಾಗೋದಿಲ್ಲ ಮತ್ತು ಗ್ಯಾಸ್ ದೀರ್ಘಕಾಲದವರೆಗೆ ಉಳಿಯುತ್ತೆ.
ಅಡುಗೆ ಮಾಡುವಾಗ, ಸ್ಟೀಮ್ ಬಳಸಿ ಸಾಧ್ಯವಾದಷ್ಟು ಬೇಯಿಸಿ. ಅಂದರೆ, ಕುಕ್ಕರ್(Cooker) ಅನ್ನು ಸಾಧ್ಯವಾದಷ್ಟು ಬಳಸಿ. ಇಲ್ಲದಿದ್ದರೆ, ನೀವು ಕಡೈ ಬಳಸುತ್ತಿದ್ದರೆ, ಅದಕ್ಕೆ ನೀರನ್ನು ಸೇರಿಸಿ ನೋಡಿಕೊಂಡು ಬೇಯಿಸಿ. ಇದು ಕಡಿಮೆ ಗ್ಯಾಸ್ ಮತ್ತು ಕಡಿಮೆ ಆಯಿಲ್ ತೆಗೆದುಕೊಳ್ಳುತ್ತೆ.
ಅಡುಗೆ ಮಾಡುವ ಮೊದಲು, ಆ ಮೆನುವಿನ ಎಲ್ಲಾ ಸಾಮಾನು ಮುಂಚಿತವಾಗಿ ಒಂದೇ ಸ್ಥಳದಲ್ಲಿ ಸಂಗ್ರಹಿಸಿಡಿ, ಇದರಿಂದ ನೀವು ಸ್ಟವ್(Stove) ಆನ್ ಮಾಡಿದ ನಂತರ ಸಾಮಾನು ಹುಡುಕಬೇಕಾಗಿಲ್ಲ. ಇದು ನಿಮ್ಮ ಸಮಯ ಮತ್ತು ಗ್ಯಾಸ್ ಎರಡನ್ನು ಉಳಿಸುತ್ತೆ.
ನೀವು ಅಡುಗೆ ಮಾಡುತ್ತಿರುವ ಪಾತ್ರೆಯ(Vessel) ತಳವನ್ನು ನೋಡಿಕೊಳ್ಳಿ, ಬೇಗನೆ ಆಹಾರ ಬೇಯುವಂತಹ ಪಾತ್ರೆಗಳನ್ನು ಖರೀದಿಸಿ. ಇದರಿಂದ ಆಹಾರವು ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ. ಕೆಲವೊಂದು ಪಾತ್ರೆಗಳಲ್ಲಿ ಮಾಡಿದ ಅಡುಗೆಯು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತೆ .
ನೀವು ಯಾವುದಾದರೂ ಅಡುಗೆ ತಯಾರಿಸುತ್ತಿದ್ದರೆ, ಅದಕ್ಕೆ ಹೆಚ್ಚು ಟೊಮೆಟೊ ಪ್ಯೂರಿ ಅಥವಾ ಸಾಕಷ್ಟು ಟೊಮೆಟೊ(Tomato) ಸೇರಿಸುವ ಅಗತ್ಯವಿದ್ರೆ, ನೀವು ಟೊಮೆಟೊವನ್ನು ಮುಂಚಿತವಾಗಿ ಮೈಕ್ರೋವೇವ್ ನಲ್ಲಿ ಸಾಫ್ಟ್ ಮಾಡೀ, ಇದರಿಂದ ಅದು ಬೇಯಿಸಲು ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ ಮತ್ತು ಗ್ಯಾಸ್ ಉಳಿಯುತ್ತೆ.