Monsson Fashion: ಮಳೆಗಾಲದಲ್ಲಿ ಈ ಡ್ರೆಸ್ ಧರಿಸೋದು ಬೇಡ!

First Published | Jun 27, 2022, 11:05 AM IST

ಕೆಲವು ಬಟ್ಟೆಗಳನ್ನು ಎವರ್ ಗ್ರೀನ್ ಫ್ಯಾಷನ್ ಟ್ರೆಂಡ್ ನಲ್ಲಿ (evergreen fashion trend) ಸೇರಿಸಲಾಗಿದೆ, ಇದನ್ನು ಎಲ್ಲಾ ಸೀಸನ್ ನಲ್ಲೂ ಸುಲಭವಾಗಿ ಧರಿಸಬಹುದು. ಆದರೆ ಕೆಲವೊಂದು ಬಟ್ಟೆಗಳು ಮಳೆಗಾಲದಲ್ಲಿ, ಅಥವಾ ಬೇಸಿಗೆಯಲ್ಲಿ ಧರಿಸೋದ್ರಿಂದ ಅಲರ್ಜಿಯನ್ನುಂಟು ಮಾಡುತ್ತೆ. ಇಂತಹ ಬಟ್ಟೆಗಳನ್ನು ನೀವು ಸಾಧ್ಯವಾದಷ್ಟು ಅವಾಯ್ಡ್ ಮಾಡಿದ್ರೇನೆ ಒಳ್ಳೆಯದು.

ಸಾಮಾನ್ಯವಾಗಿ, ಹೆಚ್ಚಿನ ಜನರು ಬಿಸಿಲಿನಿಂದ ತಮ್ಮನ್ನು ತಾವು ರಕ್ಷಿಸಲು ಮಾನ್ಸೂನ್ (monsoon) ಯಾವಗಪ್ಪ ಬರುತ್ತೆ ಎಂದು ಎದುರು ನೋಡುತ್ತಿರುತ್ತಾರೆ. ಮಾನ್ಸೂನ್ ಆರಂಭದೊಂದಿಗೆ, ಜನರು ತಮ್ಮ ನೆಚ್ಚಿನ ಫ್ಯಾಷನ್ ಟ್ರೆಂಡ್ಫಾ (Fashion Trend) ಲೋ ಮಾಡೋದು ಮಿಸ್ ಮಾಡೋದಿಲ್ಲ. 

ಸಹಜವಾಗಿ, ಬೇಸಿಗೆಗೆ ಹೋಲಿಸಿದರೆ ಮಳೆಗಾಲದಲ್ಲಿ, ನೀವು ಸೂರ್ಯ (Sun) ಮತ್ತು ಶಾಖದ ಬಗ್ಗೆ ಚಿಂತಿಸದೆ ನಿಮ್ಮ ನೆಚ್ಚಿನ ಡ್ರೆಸ್ ಕ್ಯಾರಿ ಮಾಡುತ್ತೀರಿ. ಆದಾಗ್ಯೂ, ಮಳೆಗಾಲದಲ್ಲಿ ಕೆಲವು ಬಟ್ಟೆ ಬಟ್ಟೆಗಳನ್ನು ಧರಿಸುವ ಮೂಲಕ, ನೀವು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು (skin problem) ಎದುರಿಸಬೇಕಾಗಬಹುದು.

Tap to resize

ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಹೆಚ್ಚು ಬೆವರುವ ಸಾಧ್ಯತೆ ಕೂಡ ಇರುತ್ತೆ. ಕೆಲವೊಂದು ಬಟ್ಟೆಗಳನ್ನು ಧರಿಸೋದ್ರಿಂದ, ಚರ್ಮದ ಮೇಲೆ ದದ್ದುಗಳು (skin irritation), ತುರಿಕೆ ಮತ್ತು ಕಿರಿಕಿರಿಯ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತೆ. ಹಾಗಾದರೆ ಮಾನ್ಸೂನ್ ನಲ್ಲಿ ಯಾವ ರೀತಿಯ ಬಟ್ಟೆ ಧರಿಸಬೇಕು. ಇಲ್ಲಿದೆ ಕೆಲವೊಂದು ಟಿಪ್ಸ್ ಗಳು. ಈ ಟಿಪ್ಸ್ ಮೂಲಕ ನೀವು ಫ್ಯಾಷನ್ ಟ್ರೆಂಡ್ ಟ್ರೈ ಮಾಡಬಹುದು.

ಡೆನಿಮ್ ಧರಿಸೊದನ್ನು ತಪ್ಪಿಸಿ

ಡೆನಿಮ್ ಫ್ಯಾಬ್ರಿಕ್ (denim fabric) ನಿಂದ ಮಾಡಿದ ಉಡುಪುಗಳು ಯಾವಾಗಲೂ ಫ್ಯಾಷನ್ ಟ್ರೆಂಡ್ ನಲ್ಲೆ ಇರುತ್ತೆ, ಇದು ಯಾವತ್ತೂ ಹಳೆಯದಾಗೋದಿಲ್ಲ. ಆದರೆ ಮಳೆಗಾಲದಲ್ಲಿ, ನೀವು ಡೆನಿಮ್ ಧರಿಸೋದನ್ನು ತಪ್ಪಿಸಬೇಕು. ಹಾಗಾದ್ರೆ ಎಂತಹ ಡ್ರೆಸ್ ಧರಿಸಬೇಕು.
 

ಮೃದುವಾದ ಬಟ್ಟೆಯಿಂದ ಮಾಡಿದ ಡೆನಿಮ್ ಮಳೆ ನೀರು ಮತ್ತು ಬೆವರನ್ನು ಹೀರಿಕೊಳ್ಳುತ್ತೆ, ಇದರಿಂದ ಬಟ್ಟೆ ಭಾರವಾಗುತ್ತದೆ, ಇದರಿಂದಾಗಿ ಚರ್ಮದ ಮೇಲೆ ದದ್ದುಗಳು, ತುರಿಕೆ ಮತ್ತು ಕಿರಿಕಿರಿ ಉಂಟಾಗುವ ಅಪಾಯವಿದೆ. ಆದ್ದರಿಂದ, ಮಾನ್ಸೂನ್ ನಲ್ಲಿ ಕಾಟನ್ ಡ್ರೆಸ್ (cotton dress) ಧರಿಸುವುದು ಉತ್ತಮ.

ವೆಲ್ವೆಟ್ ಬೇಡ

 ರಾಯಲ್ ಮತ್ತು ಸ್ಟೈಲಿಶ್ ಲುಕ್ (Stylish Look) ಪಡೆಯಲು, ವೆಲ್ವೆಟ್ ಡ್ರೆಸ್ (velvet dress) ಹೆಚ್ಚಿನ ಜನರ ಮೊದಲ ಆಯ್ಕೆಯಾಗಿದೆ. ಆದರೆ, ವೆಲ್ವೆಟ್ ನ ಫ್ಯಾಬ್ರಿಕ್ ಸಹ ಸಾಕಷ್ಟು ಹೆವಿಯಾಗಿರುತ್ತೆ. ಹಾಗಾಗಿ ವೆಲ್ವೆಟ್ ಬಟ್ಟೆ ಒದ್ದೆಯಾದ ತಕ್ಷಣ ಒಣಗೋದಿಲ್ಲ, ಆದ್ದರಿಂದ ಮಳೆಗಾಲದಲ್ಲಿ ಇದನ್ನು ಅವಾಯ್ಡ್ ಮಾಡಿ. 

ರೇಷ್ಮೆ ಕೂಡ ಬೇಡ

ರೇಷ್ಮೆ ಸೀರೆಗಳು (silk sareees) ಅನೇಕ ಮಹಿಳೆಯರ ಫೆವರಿಟ್ ಆಗಿದೆ. ಮದುವೆ, ಹಬ್ಬಗಳಲ್ಲಿ ಪರ್ಫೆಕ್ಟ್  ಲುಕ್ ಪಡೆಯಲು, ಮಹಿಳೆಯರು ಹೆಚ್ಚಾಗಿ ರೇಷ್ಮೆ ಸೀರೆ ಧರಿಸುತ್ತಾರೆ. ಸಹಜವಾಗಿ, ರೇಷ್ಮೆ ಬಟ್ಟೆಯು ಸಾಕಷ್ಟು ಹಗುರ ಮತ್ತು ಆರಾಮದಾಯಕವಾಗಿರುತ್ತೆ, ಆದರೆ ಮಳೆಗಾಲದಲ್ಲಿ ಬೆವರಿನಿಂದಾಗಿ, ರೇಷ್ಮೆಯ ಮೇಲೆ ಬಿಳಿ ಕಲೆಯಾಗುತ್ತೆ. ಆದ್ದರಿಂದ, ಮಳೆಗಾಲದಲ್ಲಿ, ರೇಷ್ಮೆ ಬಟ್ಟೆಯಿಂದ ಮಾಡಿದ ಡ್ರೆಸ್ ಧರಿಸೋದನ್ನು ತಪ್ಪಿಸಬೇಕು.

ಲೆದರ್ ಕೂಡ ಬೇಡ

 ಲೆದರ್ ನ ಹೆಸರು ಎವರ್ ಗ್ರೀನ್ ಫ್ಯಾಷನ್ ಟ್ರೆಂಡ್ ಗಳ ಲಿಸ್ಟ್ ನಲ್ಲಿ ಬರುತ್ತೆ.  ಚರ್ಮದ ಜಾಕೆಟ್ ಗಳಿಂದ ಹಿಡಿದು ಬ್ಯಾಗ್ ಗಳು ಮತ್ತು ಶೂಗಳವರೆಗೆ ಸಾಕಷ್ಟು ಜನಪ್ರಿಯವಾಗಿವೆ. ಜನರು ಮೆದರ್ ನ್ನು ವಿಭಿನ್ನ ರೀತಿಯಲ್ಲಿ ಬಳಸುತ್ತಾರೆ. ಆದಾಗ್ಯೂ, ಮಳೆಗಾಲದಲ್ಲಿ ಒದ್ದೆಯಾಗುವುದರಿಂದ, ಚರ್ಮವು ಬೇಗನೆ ಹಾಳಾಗುತ್ತದೆ, ಆದ್ದರಿಂದ ಮಳೆಯಲ್ಲಿ ಚರ್ಮದಿಂದ ಮಾಡಿದ ವಸ್ತುಗಳು ಮತ್ತು ಉಡುಪನ್ನು ಮರೆಯಬೇಡಿ.

Latest Videos

click me!