ತೂಕ ಇಳಿಸುವುದು ಇತ್ತೀಚೆಗೆ ದೊಡ್ಡ ಸವಾಲಾಗಿದೆ. ಎಷ್ಟೇ ಕಟ್ಟುನಿಟ್ಟಿನ ಡಯಟ್ ಮಾಡಿದರೂ, ಗಂಟೆಗಟ್ಟಲೆ ಜಿಮ್‌ನಲ್ಲಿ ಬೆವರು ಹರಿಸಿದರೂ ಕೆಲವರಿಗೆ ತೂಕ ಮಾತ್ರ ಕಡಿಮೆಯಾಗುವುದಿಲ್ಲ. ಇದಕ್ಕೆ ನಾವು ಮಾಡುವ ಕೆಲವು ಸಣ್ಣ ತಪ್ಪುಗಳೇ ಕಾರಣ. ಆ ತಪ್ಪುಗಳು ಯಾವುವು ಅಂತ ಇಲ್ಲಿ ನೋಡೋಣ.
ತೂಕ ಇಳಿಸುವುದು ಕೇವಲ ಡಯಟ್ ಮತ್ತು ವ್ಯಾಯಾಮವನ್ನು ಮಾತ್ರ ಅವಲಂಬಿಸಿಲ್ಲ. ಇದು ನಮ್ಮ ಒಟ್ಟಾರೆ ಜೀವನಶೈಲಿಗೆ ಸಂಬಂಧಿಸಿದೆ. ಹಾಗಾಗಿ ತೂಕ ಇಳಿಸುವಾಗ ಈ ತಪ್ಪುಗಳನ್ನು ಮಾಡಬೇಡಿ.
25
ನಾವು ತಡರಾತ್ರಿ ಊಟ ಮಾಡಿದಾಗ, ಅದನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಸಾಕಷ್ಟು ಸಮಯ ಸಿಗುವುದಿಲ್ಲ. ಇದರಿಂದ ನಾವು ತಿಂದ ಕ್ಯಾಲೋರಿಗಳು ಕೊಬ್ಬಾಗಿ ಬದಲಾಗುತ್ತವೆ. ಮಲಗುವ ಮುನ್ನ ಊಟ ಮಾಡುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಕೂಡ ಶುರುವಾಗುತ್ತವೆ.
35
ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ನೀರು ತುಂಬಾ ಅವಶ್ಯಕ. ನಾವು ಕಡಿಮೆ ನೀರು ಕುಡಿದರೆ ಮೆಟಬಾಲಿಸಂ ಪ್ರಕ್ರಿಯೆ ನಿಧಾನವಾಗುತ್ತದೆ. ಇದರಿಂದ ಪದೇ ಪದೇ ಹಸಿವಾಗುತ್ತದೆ ಮತ್ತು ನಾವು ಹೆಚ್ಚು ಊಟ ಮಾಡುತ್ತೇವೆ.
ನಾವು ಕುಡಿಯುವ ಕಾಫಿ, ಟೀ ಮತ್ತು ಪ್ಯಾಕೆಟ್ ಜ್ಯೂಸ್‌ಗಳ ಮೂಲಕ ನಮಗೆ ಗೊತ್ತಿಲ್ಲದಂತೆಯೇ ಸಾಕಷ್ಟು ಕ್ಯಾಲೋರಿಗಳು ದೇಹ ಸೇರುತ್ತವೆ. ಹೆಚ್ಚು ಸಕ್ಕರೆ ಇರುವ ಪಾನೀಯಗಳು ತೂಕ ಹೆಚ್ಚಾಗಲು ಮುಖ್ಯ ಕಾರಣ. ಇವು ಹೊಟ್ಟೆ ತುಂಬಿದ ಅನುಭವ ನೀಡುವುದಿಲ್ಲ, ಬದಲಾಗಿ ಕೊಬ್ಬನ್ನು ಹೆಚ್ಚಿಸುತ್ತವೆ.
55
ಸ್ನಾಯುಗಳ ಬೆಳವಣಿಗೆಗೆ ಮತ್ತು ಕೊಬ್ಬನ್ನು ಕರಗಿಸಲು ಪ್ರೋಟೀನ್ ತುಂಬಾ ಮುಖ್ಯ. ನಮ್ಮ ಊಟದಲ್ಲಿ ಪ್ರೋಟೀನ್ ಕಡಿಮೆಯಾದರೆ, ಹಸಿವು ಹೆಚ್ಚಾಗಿ ಹೆಚ್ಚು ತಿನ್ನಬೇಕೆನಿಸುತ್ತದೆ. ತೂಕ ಇಳಿಸುವ ಡಯಟ್‌ನಲ್ಲಿ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.