ಎಷ್ಟೇ ಕಟ್ಟುನಿಟ್ಟಾಗಿ ಡಯಟ್ ಮಾಡಿದ್ರೂ ದೇಹದ ತೂಕ ಮಾತ್ರ ಕಮ್ಮಿ ಆಗ್ತಿಲ್ಲ ಅಂತ ಬೇಜಾರು ಮಾಡ್ಕೊಳ್ತಿದ್ದೀರಾ? ತೂಕ ಇಳಿಯದೇ ಇರೋದಕ್ಕೆ ನಾವು ಮಾಡೋ ಸಣ್ಣಪುಟ್ಟ ತಪ್ಪುಗಳೇ ಕಾರಣ ಆಗಿರುತ್ತೆ. ಆ ತಪ್ಪುಗಳು ಯಾವುವು ಅಂತ ಇಲ್ಲಿ ತಿಳಿಯಿರಿ.
ಪಥ್ಯ, ವ್ಯಾಯಾಮ ಎಲ್ಲವೂ ಸರಿಯಾಗಿದ್ರೂ ತೂಕ ಕಡಿಮೆ ಆಗ್ತಿಲ್ಲ ಏಕೆ?
ಎಷ್ಟೇ ಕಟ್ಟುನಿಟ್ಟಾಗಿ ಡಯಟ್ ಮಾಡಿದ್ರೂ ದೇಹದ ತೂಕ ಮಾತ್ರ ಕಮ್ಮಿ ಆಗ್ತಿಲ್ಲ ಅಂತ ಬೇಜಾರು ಮಾಡ್ಕೊಳ್ತಿದ್ದೀರಾ? ತೂಕ ಇಳಿಯದೇ ಇರೋದಕ್ಕೆ ನಾವು ಮಾಡೋ ಸಣ್ಣಪುಟ್ಟ ತಪ್ಪುಗಳೇ ಕಾರಣ ಆಗಿರುತ್ತೆ. ಆ ತಪ್ಪುಗಳು ಯಾವುವು ಅಂತ ಇಲ್ಲಿ ತಿಳಿಯಿರಿ.
28
ಕೆಲವು ಮಾತ್ರೆಗಳ ಅಡ್ಡಪರಿಣಾಮದಿಂದಲೂ ದೇಹದ ತೂಕ ಹೆಚ್ಚಾಗಬಹುದು
ಕೆಲವು ಮಾತ್ರೆಗಳನ್ನು ನುಂಗೋದ್ರಿಂದ ದೇಹದ ತೂಕ ಹೆಚ್ಚಾಗಬಹುದು. ಖಿನ್ನತೆಗೆ ನೀಡುವ ಮಾತ್ರೆಗಳು (antidepressants), ಮಾನಸಿಕ ಕಾಯಿಲೆಗೆ ನೀಡುವ ಮಾತ್ರೆಗಳು (antipsychotics), ಕಾರ್ಟಿಕೊಸ್ಟೆರಾಯ್ಡ್‌ಗಳು, ಬಿಪಿ ಮತ್ತು ಶುಗರ್ ಕಂಟ್ರೋಲ್ ಮಾಡಲು ಬಳಸುವ ಕೆಲವು ಮಾತ್ರೆಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ.
38
ಊಟಕ್ಕೂ ಮುನ್ನ ನೀರು ಕುಡಿದರೆ ನೀವು ತಿನ್ನುವ ಊಟದ ಪ್ರಮಾಣ ಕಮ್ಮಿ ಆಗುತ್ತೆ
ನೀರು ಕುಡಿಯೋದ್ರಿಂದ ಮೆಟಬಾಲಿಸಂ ಹೆಚ್ಚಾಗಿ ತೂಕ ಬೇಗ ಕಮ್ಮಿ ಆಗುತ್ತೆ. ಊಟಕ್ಕೂ ಮುನ್ನ ನೀರು ಕುಡಿದರೆ ಹಸಿವು ಕಮ್ಮಿ ಆಗುತ್ತೆ. ಊಟ ಮಾಡುವ 30 ನಿಮಿಷದ ಮೊದಲು ಸುಮಾರು 2 ಕಪ್ (500 ಮಿ.ಲೀ) ನೀರು ಕುಡಿದರೆ, ನೀವು ತಿನ್ನುವ ಊಟದ ಪ್ರಮಾಣ ತಾನಾಗಿಯೇ ಕಮ್ಮಿ ಆಗುತ್ತೆ.
ತರಕಾರಿ ಮತ್ತು ಫೈಬರ್ ಅಂಶ ಕಮ್ಮಿ ತಿಂದ್ರೆ ತೂಕ ಇಳಿಸೋದು ಕಷ್ಟ
ನೀವು ಎಷ್ಟು ಕ್ಯಾಲೋರಿ ತಿಂತೀರಾ ಅನ್ನೋದು ಮಾತ್ರವಲ್ಲ, ಎಂಥಾ ಊಟ ಮಾಡ್ತೀರಾ ಅನ್ನೋದು ಕೂಡ ಮುಖ್ಯ. ನೀವು ತಿನ್ನೋ ಊಟ ನಿಮ್ಮ ಹಸಿವನ್ನು ಕಂಟ್ರೋಲ್ ಮಾಡಬೇಕು. ಊಟದಲ್ಲಿ ತರಕಾರಿ ಅಥವಾ ಫೈಬರ್ ಅಂಶ ಕಮ್ಮಿ ಇದ್ರೆ ತೂಕ ಇಳಿಸೋದು ಸುಲಭವಲ್ಲ.
58
ಒಂದೇ ಕಡೆ ತುಂಬಾ ಹೊತ್ತು ಕೂರೋದ್ರಿಂದ ಕ್ಯಾಲೋರಿ ಕರಗೋದು ಕಮ್ಮಿ ಆಗುತ್ತೆ
ಬರೀ ವ್ಯಾಯಾಮ ಮಾಡಿದ್ರೆ ಸಾಲದು, ದಿನವಿಡೀ ನೀವು ಎಷ್ಟು ಆಕ್ಟಿವ್ ಆಗಿರ್ತೀರಾ ಅನ್ನೋದು ಕೂಡ ಮುಖ್ಯ. ನಡೆಯೋದು, ನಿಲ್ಲೋದು ಸೇರಿದಂತೆ ದಿನನಿತ್ಯದ ಕೆಲಸಗಳು ದೇಹದ ಶಕ್ತಿಯನ್ನು ಕರಗಿಸುತ್ತವೆ. ಒಂದೇ ಕಡೆ ತುಂಬಾ ಹೊತ್ತು ಕೂರೋದ್ರಿಂದ ದಿನಕ್ಕೆ ಕರಗಬೇಕಾದ ಕ್ಯಾಲೋರಿ ಪ್ರಮಾಣ ಕಮ್ಮಿ ಆಗುತ್ತೆ.
68
ಹೈಪೋಥೈರಾಯ್ಡಿಸಮ್ ಮತ್ತು ಪಿಸಿಓಎಸ್ ಸಮಸ್ಯೆಗಳಿಂದ ತೂಕ ಹೆಚ್ಚಾಗಬಹುದು
ಹೈಪೋಥೈರಾಯ್ಡಿಸಮ್ (Hypothyroidism) ಮತ್ತು ಪಿಸಿಓಎಸ್ (PCOS) ನಂತಹ ಆರೋಗ್ಯ ಸಮಸ್ಯೆಗಳು ನಿಮ್ಮ ದೇಹದ ತೂಕವನ್ನು ಹೆಚ್ಚಿಸಬಹುದು. ಈ ಸಮಸ್ಯೆ ಇದ್ದಾಗ ತೂಕವನ್ನು ಕಂಟ್ರೋಲ್ ಮಾಡೋದು ತುಂಬಾನೇ ಕಷ್ಟ ಆಗುತ್ತೆ.
78
ವಿಪರೀತ ಒತ್ತಡ ನಿಮ್ಮ ಊಟದ ಅಭ್ಯಾಸ ಹಾಗೂ ತೂಕದ ಮೇಲೆ ಪರಿಣಾಮ ಬೀರಬಹುದು
ವಿಪರೀತ ಒತ್ತಡ ನಿಮ್ಮ ಊಟದ ಅಭ್ಯಾಸ ಹಾಗೂ ದೇಹದ ತೂಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಒತ್ತಡದಿಂದಾಗಿ ಹಾರ್ಮೋನ್ ಬದಲಾವಣೆ ಆಗಿ ಹಸಿವು ಹೆಚ್ಚಾಗುತ್ತೆ. ಟೆನ್ಷನ್ ಇದ್ದಾಗ ಕೆಲವರು ಜಾಸ್ತಿ ಊಟ ಮಾಡ್ತಾರೆ ಅಥವಾ ಹೆಚ್ಚು ಕ್ಯಾಲೋರಿ ಇರೋ ಜಂಕ್ ಫುಡ್ ತಿಂತಾರೆ.
88
ಎಷ್ಟೇ ಡಯಟ್ ಮಾಡಿದ್ರೂ ತೂಕ ಇಳೀತಿಲ್ವಾ? ಈ 8 ಕಾರಣ ನೋಡಿ
ಎಷ್ಟೇ ಕಟ್ಟುನಿಟ್ಟಾಗಿ ಡಯಟ್ ಮಾಡಿದ್ರೂ ದೇಹದ ತೂಕ ಮಾತ್ರ ಕಮ್ಮಿ ಆಗ್ತಿಲ್ಲ ಅಂತ ಹಲವರು ಬೇಜಾರು ಮಾಡ್ಕೊಳ್ತಾರೆ. ಆದ್ರೆ ಇದಕ್ಕೆ ಅಸಲಿ ಕಾರಣ ಏನು ಅಂತ ಯಾರಿಗೂ ಗೊತ್ತಿರಲ್ಲ. ನಾವು ದಿನನಿತ್ಯ ಮಾಡೋ ಸಣ್ಣಪುಟ್ಟ ತಪ್ಪುಗಳೇ ತೂಕ ಇಳಿಯದೇ ಇರೋದಕ್ಕೆ ಮುಖ್ಯ ಕಾರಣ ಆಗಿರುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.