ಲಕ್ಷಣಗಳನ್ನು ಬೇಗ ಗುರುತಿಸುವುದು ಮುಖ್ಯ. ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಗುಣಮುಖರಾಗುವ ಸಾಧ್ಯತೆ ಹೆಚ್ಚು. ಲಿವರ್ ಸಮಸ್ಯೆಯ ಕೆಲವು ಪ್ರಮುಖ ಲಕ್ಷಣಗಳು ಇಲ್ಲಿವೆ.
59
ಚರ್ಮದ ತುರಿಕೆ
ಚರ್ಮದ ತುರಿಕೆ ಲಿವರ್ ಸಮಸ್ಯೆಯ ಲಕ್ಷಣ. ಲಿವರ್ ಪಿತ್ತರಸ ಸರಿಯಾಗಿ ಸಂಸ್ಕರಿಸದಿದ್ದಾಗ ರಕ್ತದಲ್ಲಿ ಪಿತ್ತರಸ ಸಂಗ್ರಹವಾಗಿ ತುರಿಕೆ ಉಂಟಾಗುತ್ತದೆ. ರಾತ್ರಿ ಹೊತ್ತು ಕೈ ಕಾಲುಗಳಲ್ಲಿ ತುರಿಕೆ ಹೆಚ್ಚಿರುತ್ತದೆ.
69
ಚರ್ಮ ಮತ್ತು ಕಣ್ಣುಗಳಲ್ಲಿ ಹಳದಿ ಬಣ್ಣ
ಚರ್ಮ ಮತ್ತು ಕಣ್ಣುಗಳಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳುವುದು ಲಿವರ್ ಸಮಸ್ಯೆಯ ಸೂಚನೆ. ರಕ್ತದಲ್ಲಿ ಬಿಲಿರುಬಿನ್ ಎಂಬ ವರ್ಣದ್ರವ್ಯ ಸಂಗ್ರಹವಾಗುವುದರಿಂದ ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದನ್ನು ಕಾಮಾಲೆ ಎನ್ನುತ್ತಾರೆ. ಇದು ಸಾಮಾನ್ಯವಾಗಿ ಲಿವರ್ ಸಮಸ್ಯೆಗೆ ಸಂಬಂಧಿಸಿದೆ.
79
ಮರೆವು
ಸಾಮಾನ್ಯವಾಗಿ ಲಿವರ್ ಫಿಲ್ಟರ್ ಮಾಡುವ ವಿಷಗಳು ರಕ್ತದಲ್ಲಿ ಸಂಗ್ರಹವಾಗಿ ಮೆದುಳಿಗೆ ತೊಂದರೆ ಉಂಟುಮಾಡಿ ಗೊಂದಲ, ಮರೆವು, ಏಕಾಗ್ರತೆಯ ಕೊರತೆಗೆ ಕಾರಣವಾಗಬಹುದು. ಇದನ್ನು ಫ್ಯಾಟಿ ಲಿವರ್ ಬ್ರೈನ್ ಫಾಗ್ ಎನ್ನುತ್ತಾರೆ. ಫ್ಯಾಟಿ ಲಿವರ್ ಮೆದುಳಿಗೆ ಆಮ್ಲಜನಕ ಪೂರೈಕೆ ಕಡಿಮೆ ಮಾಡಿ ಮೆದುಳಿನ ಅಂಗಾಂಶಗಳಲ್ಲಿ ಉರಿಯೂತ ಉಂಟುಮಾಡಬಹುದು.
89
ಹೊಟ್ಟೆ ನೋವು
ಹೊಟ್ಟೆಯ ಮೇಲ್ಭಾಗದ ಬಲಭಾಗದಲ್ಲಿ ಲಿವರ್ ಇದೆ. ಈ ಭಾಗದಲ್ಲಿ ನೋವು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬೇಡಿ ಎನ್ನುತ್ತಾರೆ ವೈದ್ಯರು.
99
ವಾಕರಿಕೆ, ಹಸಿವಿಲ್ಲದಿರುವುದು
ಹೊಟ್ಟೆ ಅಸ್ವಸ್ಥತೆ ಮತ್ತು ಹಸಿವು ಕಡಿಮೆಯಾಗುವುದು ಕೂಡ ಲಿವರ್ ಸಮಸ್ಯೆಯ ಲಕ್ಷಣ.