ಸ್ನಾನ ಮಾಡೋದಕ್ಕೂ ಮುನ್ನ ನೀರು ಕುಡಿದ್ರೆ, ಬಿಪಿ ಕಂಟ್ರೋಲ್ ನಲ್ಲಿ ಇರುತ್ತಾ?
ಸ್ನಾನ ಮಾಡುವ ಮೊದಲು ನೀರು ಕುಡಿಯೋದ್ರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು ಎನ್ನುವ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ಇದು ಎಷ್ಟು ನಿಜಾ? ಎಷ್ಟು ಸುಳ್ಳು? ಅನ್ನೋದನ್ನು ನೋಡೋಣ.
ಸ್ನಾನ ಮಾಡುವ ಮೊದಲು ನೀರು ಕುಡಿಯೋದ್ರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು ಎನ್ನುವ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ಇದು ಎಷ್ಟು ನಿಜಾ? ಎಷ್ಟು ಸುಳ್ಳು? ಅನ್ನೋದನ್ನು ನೋಡೋಣ.
ಸ್ನಾನ ಮಾಡಿದ ನಂತರ ಚರ್ಮದ ಆರೈಕೆ ಮಾಡೋದು ತುಂಬಾನೆ ಒಳ್ಳೆಯದು ಇದು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಯೂಟ್ಯೂಬ್ ವಿಡಿಯೋ (youtube video) ಸೋಶಿಯಲ್ ಮೀಡೀಯಾದಲ್ಲಿ ಸದ್ದು ಮಾಡುತ್ತಿದ್ದು, ಸ್ನಾನ ಮಾಡುವ ಮೊದಲು ನೀರು ಕುಡಿಯೋದರಿಂದ ಬಿಪಿ ಕಂಟ್ರೋಲ್ ನಲ್ಲಿರುತ್ತೆ ಎಂದು ಈ ವಿಡೀಯೋದಲ್ಲಿ ತಿಳಿಸಲಾಗಿದೆ. ಈ ವಿಡಿಯೋ ಅದೆಷ್ಟು ನಿಜಾ ಅನ್ನೋದನ್ನು ನೋಡೋಣ.
ಅರ್ಧ ಗಂಟೆಯ ಮೊದಲು ನೀರು ಕುಡಿಯಿರಿ
ಸ್ನಾನ ಮಾಡುವ ಅರ್ಧ ಗಂಟೆ ಮೊದಲು ನೀರು ಕುಡಿಯುವಂತೆ (drinking water before bath) ಯೂಟ್ಯೂಬ್ ವಿಡಿಯೋ ಶಿಫಾರಸು ಮಾಡುತ್ತದೆ. ಸ್ನಾನ ಮಾಡುವ ಮೊದಲು ನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ನೀರು ಕುಡಿಯುವ ಈ ಅಭ್ಯಾಸವು ಬಿಪಿಗೆ ಮಾತ್ರವಲ್ಲದೆ ಹೃದಯಕ್ಕೂ ಪ್ರಯೋಜನಕಾರಿಯಾಗಿದೆ ಎಂದು ವಿಡಿಯೋದಲ್ಲಿ ತಿಳಿಸಿದೆ.
ನಿರ್ಜಲೀಕರಣವನ್ನು ತಡೆಯುತ್ತದೆ
ವೈದ್ಯರ ಬಳಿ ಈ ಬಗ್ಗೆ ಚರ್ಚಿಸಿದಾಗ ಸ್ನಾನಕ್ಕೂ ಮುನ್ನ ನೀರು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತೆ (control BP) ಅನ್ನೋದು ಸುಳ್ಳೆಂದು ವೈದ್ಯರು ಹೇಳುತ್ತಾರೆ. ಆದರೆ ಈ ಸಮಯದಲ್ಲಿ ನೀರು ಕುಡಿಯೋದರಿಂದ ಖಂಡಿತವಾಗಿಯೂ ಇತರ ಕೆಲವು ಪ್ರಯೋಜನಗಳಿವೆ, ಉದಾಹರಣೆಗೆ ನಿರ್ಜಲೀಕರಣ ಸಂಭವಿಸುವುದಿಲ್ಲ ಮತ್ತು ರಕ್ತದ ಪ್ರಮಾಣವೂ ಸುಧಾರಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಅಲ್ಪಾವಧಿಯ ಲಾಭ
ನೀವು ಹೆಚ್ಚು ನೀರು ಕುಡಿದರೆ, ಸ್ವಲ್ಪ ಸಮಯದವರೆಗೆ ರಕ್ತದ ಪ್ರಮಾಣ ಹೆಚ್ಚಾಗುತ್ತದೆ ಎನ್ನುತ್ತಾರೆ ವೈದ್ಯರು. ಇದು ರಕ್ತದೊತ್ತಡದಲ್ಲಿ (blood pressure) ತಾತ್ಕಾಲಿಕ ಇಳಿಕೆಗೆ ಕಾರಣವಾಗುತ್ತದೆ, ಅದು ಕೂಡ ಅಲ್ಪಾವಧಿಗೆ ಮಾತ್ರ. ಕೇವಲ ನೀರು ಕುಡಿದ ಮಾತ್ರಕ್ಕೆ ಬಿಪಿ ಕಡಿಮೆಯಾಗುವುದಿಲ್ಲ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಈ ಅಭ್ಯಾಸವನ್ನು ತಮ್ಮ ಸಮಸ್ಯೆಗೆ ಪರಿಹಾರವೆಂದು ಪರಿಗಣಿಸಬಾರದು.
ಸುಧಾರಿಸಲು ಏನು ಮಾಡಬೇಕು?
ರಕ್ತದೊತ್ತಡ ಕಡಿಮೆಯಾಗಲು, ನೀವು ವೈದ್ಯಕೀಯ ಚಿಕಿತ್ಸೆಯ (medical treatment) ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಕುಡಿಯುವ ನೀರು ದೇಹವು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತೆ, ಇದು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಕೇವಲ ರಕ್ತದೊತ್ತಡವನ್ನು ನಿಯಂತ್ರಿಸಲು ಇರುವ ಚಿಕಿತ್ಸಾ ಆಯ್ಕೆಯಲ್ಲ.