ಈ ಆಹಾರಗಳನ್ನ ಬಿಸಿ ಇರೋವಾಗ್ಲೇ ತಿನ್ನಿ, ತಣ್ಣಗಾದ್ರೆ ಆರೋಗ್ಯಕ್ಕೆ ಅಪಾಯ!

ಇಂದು ನಾವು ನಿಮಗೆ ಕೆಲವು ಆಹಾರ ಪದಾರ್ಥಗಳನ್ನು ತಣ್ಣಗಾದ ನಂತರ ಯಾಕೆ ಸೇವಿಸಬಾರದು ಎಂಬುದರ ಕುರಿತು ಹೇಳುತ್ತೇವೆ.  ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ಈ ಆಹಾರಗಳನ್ನು ಆದಷ್ಟು ಅವಾಯ್ಡ್ ಮಾಡಿ. 
 

Do not eat these food in cold state which cause effect on health pav

ನಾವು ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ, ಅದಕ್ಕಾಗಿಯೇ ಸರಿಯಾದ ಆಹಾರಗಳನ್ನು (healthy food) ತಿನ್ನುವುದು ಮುಖ್ಯವಾಗಿದೆ. ಸರಿಯಾದ ಆಹಾರ ತಿಂದ್ರೆ ಮಾತ್ರ ಆರೋಗ್ಯದಿಂದಿರಬಹುದು.
 

Do not eat these food in cold state which cause effect on health pav

ಇಂದು ನಾವು ನಿಮಗೆ ಕೆಲವು ಆಹಾರಗಳ ಬಗ್ಗೆ ಹೇಳುತ್ತೇವೆ, ಅವುಗಳನ್ನು ತಣ್ಣಗಾದ ನಂತರ ತಿನ್ನೋದನ್ನು ತಪ್ಪಿಸಬೇಕು.ಇಲ್ಲವಾದರೆ ನಿಮಗೆ ಆರೋಗ್ಯ ಸಮಸ್ಯೆಗಳು (health issues) ಉಂಟಾಗೋದಕ್ಕೆ ಶುರುವಾಗುತ್ತೆ. ಬಿಸಿಯಾಗಿರುವಾಗಲೇ ತಿನ್ನಬೇಕಾದಂತಹ ಆಹಾರಗಳು ಯಾವುವು ನೋಡೋಣ. 


ನಾವು ಪ್ರತಿದಿನ ತಿನ್ನುವಂತಹ ಆಹಾರ ಅಂದ್ರೆ ಅದು ಅನ್ನ. ದಕ್ಷಿಣ ಭಾರತದ ಜನರಿಗೆ ಒಂದೂ ಹೊತ್ತಾದರೂ ಅನ್ನ (rice) ಬೇಕೇ ಬೇಕು. ಅನ್ನವನ್ನು ಯಾವಾಗಲೂ ಬಿಸಿ ಮಾಡಿದ ನಂತರವೇ ತಿನ್ನಬೇಕು; ತಣ್ಣನೆಯ ಅನ್ನ ಬ್ಯಾಕ್ಟೀರಿಯಾಗಳಿಗೆ ಆಕರ್ಷಿಸುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತೆ.
 

ಇನ್ನು ಮೊಟ್ಟೆಯ ಆಹಾರಗಳನ್ನು ತಯಾರಿಸಿ, ಅದನ್ನು ಆಮೇಲೆ ತಿನ್ನುತ್ತೀವಿ ಅಂತ ಎತ್ತಿಡಬೇಡಿ. ಮೊಟ್ಟೆಗಳನ್ನು ತಣ್ಣಗಾದ ಬಳಿಕ ತಿನ್ನೋದರಿಂದ ಅವು ಜೀರ್ಣಿಸಿಕೊಳ್ಳಲು (digestion problem) ಕಷ್ಟವಾಗುತ್ತದೆ, ಆದ್ದರಿಂದ ಅವುಗಳನ್ನು ಬಿಸಿಯಾಗಿ ತಿನ್ನಬೇಕು.

ತಣ್ಣನೆಯ ಆಲೂಗಡ್ಡೆಯಲ್ಲಿ ಪಿಷ್ಟವು ರೂಪುಗೊಳ್ಳಲು ಪ್ರಾರಂಭಿಸುತ್ತದೆ, ಇದು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಆಲೂಗಡ್ಡೆಯನ್ನು ಸಹ ಬಿಸಿಯಾಗಿರೋವಾಗಲೇ ತಿನ್ನಿ. ತಣಿಯಲು ಬಿಡಬೇಡಿ. 
 

ಅದು ತರಕಾರಿ ಸೂಪ್ ಆಗಿರಲಿ ಅಥವಾ ನಾನ್ ವೆಜ್ ಸೂಪ್ (healthy soup) ಆಗಿರಲ್ಲಿ, ಸೂಪ್ ಅನ್ನು ಯಾವಾಗಲೂ ಬಿಸಿಯಾಗಿ ಸೇವಿಸಬೇಕು, ತಣ್ಣನೆಯ ಸೂಪ್ ಆರೋಗ್ಯಕ್ಕೆ ಅಷ್ಟೊಂದು ಪ್ರಯೋಜನಕಾರಿಯಲ್ಲ. ಬಿಸಿ ಬಿಸಿ ಸೂಪ್ ಆರೋಗ್ಯಕ್ಕೂ ಉತ್ತಮ. 

ಪಾಸ್ತಾ ಆರೋಗ್ಯಕ್ಕೆ ಒಳ್ಳೆಯದಲ್ಲ, ಅದರ ಜೊತೆಗೆ ನೀವು ಪಾಸ್ತಾ ತಿನ್ನೋದಾದರೆ ಬಿಸಿಯಾಗಿರುವಾಗಲೇ ತಿನ್ನಬೇಕು. ಪಾಸ್ತಾವನ್ನು ತಣ್ಣಗಾದ ನಂತರ ಸೇವಿಸೋದರಿಂದ, ಅದರ ರುಚಿ ಮತ್ತು ಮಸಾಲೆಗಳು ಕಡಿಮೆಯಾಗುತ್ತವೆ, ಇದನ್ನು ಬಿಸಿಯಾಗಿಯೇ ತಿನ್ನಬೇಕು.
 

 ಇನ್ನು ಕೊನೆಯದಾಗಿ ಚಿಕನ್ ಮತ್ತು ಮಟನ್ (Chicken and mutton) ಕೂಡ ಬಿಸಿಯಾಗಿರೋವಾಗಲೇ ತಿನ್ನಬೇಕು. ಇಲ್ಲವಾದರೆ ಅವುಗಳಲ್ಲಿ ಬ್ಯಾಕ್ಟೀರಿಯಾ ಬೆಳೆದುಕೊಳ್ಳಲು ಶುರುವಾಗುತ್ತದೆ. ಆದ್ದರಿಂದ ಅವುಗಳನ್ನು ಬಿಸಿ ಮಾಡಿದ ನಂತರವಷ್ಟೇ ಯಾವಾಗಲೂ ತಿನ್ನಿರಿ.

Latest Videos

vuukle one pixel image
click me!