ರಕ್ತ ಸಂಚಾರಕ್ಕೆ ತೊಂದರೆ : ಒಳ ಉಡುಪುಗಳನ್ನು ಟೈಟಾಗಿ ಹಾಕೊಂಡ್ರೆ ದೇಹದಲ್ಲಿ ರಕ್ತ ಸಂಚಾರಕ್ಕೆ ತೊಂದರೆ ಆಗುತ್ತೆ.
ಜನನಾಂಗದ ಭಾಗದಲ್ಲಿ ತೊಂದರೆ : ಟೈಟಾದ ಒಳ ಉಡುಪುಗಳನ್ನು ಹಾಕೊಂಡ್ರೆ ಜನನಾಂಗದ ಭಾಗದಲ್ಲಿ ಮೂತ್ರ ಸೋಂಕು, ಯೀಸ್ಟ್ ಮತ್ತು ಬೇರೆ ಸೋಂಕು ರೋಗಗಳು ಬರೋ ಸಾಧ್ಯತೆ ಜಾಸ್ತಿ ಆಗುತ್ತೆ.
ಚರ್ಮದ ಸಮಸ್ಯೆ : ಒಳ ಉಡುಪುಗಳನ್ನು ಟೈಟಾಗಿ ಹಾಕೊಂಡ್ರೆ ಚರ್ಮದಲ್ಲಿ ಉರಿ, ಕೆರೆತ, ಕೆಂಪಾಗೋದು, ತುರಿಕೆ, ಗುಳ್ಳೆಗಳು ಬರೋ ಹಾಗೆ ಆಗುತ್ತೆ.
ಬ್ರಾ ಟೈಟಾಗಿ ಹಾಕೋಬೇಡಿ! ಹೆಂಗಸರು ಟೈಟಾದ ಬ್ರಾ ಹಾಕೊಂಡ್ರೆ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತೆ. ಇದರಿಂದ ಜೀವಕೋಶಗಳಿಗೆ ಕಡಿಮೆ ಆಮ್ಲಜನಕ ಮತ್ತು ಪೋಷಕಾಂಶಗಳು ಸಿಗುತ್ತೆ.