ಬಿಸಿ ಬಿಸಿ ಟೀ, ಕಾಫಿ ಅಥವಾ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ?
ಅತಿಯಾದ ಬಿಸಿ ಪಾನೀಯಗಳನ್ನು ಕುಡಿಯುವುದರಿಂದ ಅನ್ನನಾಳಕ್ಕೆ ಹಾನಿಯಾಗುತ್ತದೆ. ಇದು ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಯುಕೆಯಲ್ಲಿ ಸುಮಾರು 10 ಲಕ್ಷ ಜನರ ಮೇಲೆ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಬಿಸಿ ಬಿಸಿ ಟೀ, ಕಾಫಿ ಕುಡಿಯುವ ಜನರಿಗೆ ಅನ್ನನಾಳದ ಕ್ಯಾನ್ಸರ್ (Esophageal cancer) ಬರುವ ಸಾಧ್ಯತೆ ಹೆಚ್ಚು ಎಂದು ಈ ವರದಿ ತಿಳಿಸಿದೆ.
27
ಅತಿಯಾದ ಬಿಸಿ ಪಾನೀಯ ಕುಡಿಯುವವರಿಗೆ 'ಅನ್ನನಾಳದ ಕ್ಯಾನ್ಸರ್' ಅಪಾಯ ಹೆಚ್ಚು
ಸಾಧಾರಣ ಬಿಸಿ ಇರುವ ಟೀ ಅಥವಾ ಕಾಫಿ ಕುಡಿಯುವವರಿಗಿಂತ, ಅತಿಯಾದ ಬಿಸಿ ಪಾನೀಯ ಕುಡಿಯುವವರಿಗೆ ಅನ್ನನಾಳದ ಕ್ಯಾನ್ಸರ್ ಬರುವ ಅಪಾಯ ಮೂರು ಪಟ್ಟು ಹೆಚ್ಚು ಎಂದು ಈ ಅಧ್ಯಯನ ಕಂಡುಹಿಡಿದಿದೆ. ಅತಿಯಾದ ಬಿಸಿ ದ್ರವವು ಹೊಟ್ಟೆಯನ್ನು ಸೇರುವಾಗ ಅನ್ನನಾಳದ ಒಳಪದರದ ಜೀವಕೋಶಗಳಿಗೆ ಹಾನಿ ಮಾಡುತ್ತದೆ.
37
ಬಿಸಿ ಪಾನೀಯ ಮತ್ತು ಅನ್ನನಾಳದ ಕ್ಯಾನ್ಸರ್ ನಡುವೆ ನೇರ ಸಂಬಂಧವಿದೆ
ಪಾನೀಯಗಳು ಕುಡಿಯುವ ಹದಕ್ಕೆ ಬರುವವರೆಗೆ ಕಾಯುವುದು ಒಳ್ಳೆಯದು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ. ದಕ್ಷಿಣ ಅಮೆರಿಕಾದಲ್ಲಿ ಜನರು 'ಮೇಟ್' (mate) ಎಂಬ ಅತಿಯಾದ ಬಿಸಿ ಗಿಡಮೂಲಿಕೆ ಪಾನೀಯವನ್ನು ಹೆಚ್ಚು ಕುಡಿಯುತ್ತಾರೆ. ಅಲ್ಲಿ ನಡೆಸಿದ ಸಂಶೋಧನೆಗಳಲ್ಲೂ ಬಿಸಿ ಪಾನೀಯ ಮತ್ತು ಅನ್ನನಾಳದ ಕ್ಯಾನ್ಸರ್ ನಡುವಿನ ಸಂಬಂಧ ಸಾಬೀತಾಗಿದೆ ಎಂದು ಸಂಶೋಧಕಿ ಡಾ. ಕೆರೆನ್ ಪಾಪಿಯರ್ ತಿಳಿಸಿದ್ದಾರೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. 'ಇಂಟರ್ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್' ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದೆ. 65 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಇರುವ ಪಾನೀಯಗಳನ್ನು ಸಂಶೋಧಕರು "ಅತಿಯಾದ ಬಿಸಿ" ಎಂದು ಕರೆದಿದ್ದಾರೆ. ದಿನಕ್ಕೆ ಆರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಇಂತಹ ಬಿಸಿ ಪಾನೀಯ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.
57
ಮದ್ಯಪಾನ ಮತ್ತು ಧೂಮಪಾನದಿಂದ ಅನ್ನನಾಳದ ಕ್ಯಾನ್ಸರ್ ಅಪಾಯ ಹೆಚ್ಚು
ಅನ್ನನಾಳಕ್ಕೆ ಕಿರಿಕಿರಿ ಉಂಟುಮಾಡುವ ಅಭ್ಯಾಸಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಆಹಾರ ನುಂಗಲು ಕಷ್ಟವಾಗುವುದು, ಮದ್ಯಪಾನ, ಧೂಮಪಾನ, ಬೊಜ್ಜು, ಗ್ಯಾಸ್ಟ್ರೋ ಈಸೋಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD) ಮತ್ತು ಅತಿಯಾದ ಬಿಸಿ ಪಾನೀಯಗಳನ್ನು ಕುಡಿಯುವ ಅಭ್ಯಾಸಗಳು ಈ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿವೆ.
67
ಧೂಮಪಾನ ಮತ್ತು ಮದ್ಯಪಾನ ಬಿಡುವುದರಿಂದ ಕ್ಯಾನ್ಸರ್ ಅಪಾಯ ಕಡಿಮೆ
ಧೂಮಪಾನ ಮತ್ತು ಮದ್ಯಪಾನವನ್ನು ಕಡಿಮೆ ಮಾಡುವುದರಿಂದ ಸ್ಕ್ವಾಮಸ್ ಸೆಲ್ ಅನ್ನನಾಳದ ಕ್ಯಾನ್ಸರ್ ಬರುವ ಅಪಾಯವನ್ನು ತಡೆಯಬಹುದು. ಎದೆಯುರಿ, ಅಜೀರ್ಣ, ಗಂಟಲು ಅಥವಾ ಎದೆ ನೋವು ಮತ್ತು ಹಠಾತ್ ತೂಕ ಕಡಿಮೆಯಾಗುವುದು ಅನ್ನನಾಳದ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಾಗಿವೆ.
77
ಸ್ಕ್ವಾಮಸ್ ಸೆಲ್ ಅನ್ನನಾಳದ ಕ್ಯಾನ್ಸರ್ (Squamous cell oesophageal cancer) ಅಪರೂಪ
ಸ್ಕ್ವಾಮಸ್ ಸೆಲ್ ಅನ್ನನಾಳದ ಕ್ಯಾನ್ಸರ್ (Squamous cell oesophageal cancer) ತುಂಬಾ ಅಪರೂಪದ ಕಾಯಿಲೆಯಾಗಿದೆ. ಪ್ರತಿ ವರ್ಷ ಕೆಲವೇ ಸಾವಿರ ಜನರಿಗೆ ಮಾತ್ರ ಇದು ಬರುತ್ತದೆ. ಧೂಮಪಾನದಂತಹ ಇತರ ಅಭ್ಯಾಸಗಳು ಕೂಡ ಅನ್ನನಾಳದ ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.