ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಕಾಡುವ ವಿಪರೀತ ಬೆನ್ನುನೋವಿನ ಸಮಸ್ಯೆಯನ್ನು ಹಲವರು ಎದುರಿಸುತ್ತಾರೆ. ಸಮಸ್ಯೆಗೆ ಕಾರಣ ಏನು ಎಂದು ತಿಳಿದುಕೊಂಡರೆ ಈ ನೋವಿನಿಂದ ನೀವು ಹೊರಗೆ ಬರಲು ಸಾಧ್ಯವಾಗುತ್ತದೆ. ಈ ಸಮಸ್ಯೆಗೆ ಕಾರಣಗಳು ಏನು ಎಂಬುದನ್ನು ನೋಡೋಣ ಬನ್ನಿ.
ಕೆಲವರು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ವಿಪರೀತ ಬೆನ್ನುನೋವಿನಿಂದ ಒದ್ದಾಡುತ್ತಾರೆ. ಈ ಬೆನ್ನುನೋವು ಇಡೀ ದಿನದ ಮೂಡ್, ಎನರ್ಜಿ ಹಾಗೂ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೋವಿನಿಂದ ದಿನ ಶುರುವಾದರೆ ಸಣ್ಣಪುಟ್ಟ ಕೆಲಸಗಳೂ ಕಷ್ಟ ಅನಿಸುತ್ತವೆ. ಬೆಳಗ್ಗಿನ ಈ ಬೆನ್ನುನೋವಿಗೆ ಕೆಲವು ಮುಖ್ಯ ಕಾರಣಗಳಿವೆ.
25
ಮಲಗಲು ಬಳಸುವ ಹಾಸಿಗೆ
ಹಳೆಯ ಅಥವಾ ತುಂಬಾ ಗಟ್ಟಿಯಾದ ಹಾಸಿಗೆಯಿಂದ ಬೆನ್ನುಮೂಳೆಯ ಆಕಾರಕ್ಕೆ ತೊಂದರೆಯಾಗುತ್ತದೆ. ಇದರಿಂದ ನಿದ್ದೆಗೂ ಭಂಗ ಬರುತ್ತದೆ. ತುಂಬಾ ಗಟ್ಟಿಯಾದ ಅಥವಾ ತುಂಬಾ ಮೆತ್ತಗಿರುವ ಹಾಸಿಗೆ ಬೆನ್ನುನೋವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ.
35
ಮಲಗುವ ಭಂಗಿ
ಮಲಗುವ ಭಂಗಿ ಕೂಡ ಮತ್ತೊಂದು ಕಾರಣ. ಬೆನ್ನುಮೂಳೆಯ ಆರೋಗ್ಯ ಕಾಪಾಡುವಲ್ಲಿ ನೀವು ಮಲಗುವ ರೀತಿ ಬಹಳ ಮುಖ್ಯ. ಸರಿಯಾದ ಸಪೋರ್ಟ್ ತೆಗೆದುಕೊಂಡು ಪಕ್ಕಕ್ಕೆ ತಿರುಗಿ ಅಥವಾ ಬೆನ್ನಿನ ಮೇಲೆ ಮಲಗುವುದು ಬೆನ್ನುಮೂಳೆಯನ್ನು ಸರಿಯಾದ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ.
ಸಾಕಷ್ಟು ನಿದ್ದೆ ಮಾಡದೇ ಇದ್ದರೆ ನೋವು ತಡೆದುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ಮೊದಲು ಅಷ್ಟಾಗಿ ಕಾಡದಿದ್ದ ಬೆನ್ನಿನ ಸಮಸ್ಯೆಗಳು ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹಗಲಿನಲ್ಲಿ ಕೂರುವಾಗ ಅಥವಾ ನಿಲ್ಲುವಾಗ ನೀವು ಗೂನು ಬೆನ್ನು ಮಾಡಿಕೊಂಡು ಕೂರುವ ಅಭ್ಯಾಸ ಹೊಂದಿದ್ದರೆ, ಬೆಳಗ್ಗೆ ಎದ್ದಾಗ ಬೆನ್ನುನೋವು ಬರುತ್ತದೆ. ಇದು ಬೆನ್ನಿನ ಸ್ನಾಯುಗಳು ಮತ್ತು ಬೆನ್ನುಮೂಳೆಯ ಮೇಲೆ ಹೆಚ್ಚು ಒತ್ತಡ ಹಾಕುತ್ತದೆ.
55
ಸ್ನಾಯು ಸೆಳೆತ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆ
ಸ್ನಾಯುಗಳ ಸೆಳೆತ ಅಥವಾ ಗಾಯಗಳು ಕೂಡ ಬೆನ್ನುನೋವಿಗೆ ಕಾರಣ. ಈ ಹಿಂದೆ ಆಗಿದ್ದ ಗಾಯಗಳು ಅಥವಾ ಸ್ನಾಯುಗಳ ಮೇಲಿನ ಒತ್ತಡ ನೋವನ್ನು ತರಿಸಬಹುದು. ಆರ್ಥ್ರೈಟಿಸ್, ಹರ್ನಿಯೇಟೆಡ್ ಡಿಸ್ಕ್ ಅಥವಾ ಬೆನ್ನುಮೂಳೆಗೆ ಸಂಬಂಧಿಸಿದ ಇತರ ಸಮಸ್ಯೆಗಳಿದ್ದರೆ, ರಾತ್ರಿ ನಿದ್ದೆ ಮಾಡಿದ ಬಳಿಕ ಬೆಳಗ್ಗೆ ಎದ್ದಾಗ ವಿಪರೀತ ಬೆನ್ನುನೋವು ಕಾಣಿಸಿಕೊಳ್ಳುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.