ವಾರಕ್ಕೆ 2 ರಿಂದ 3 ಬಾರಿ ಮಾತ್ರ ಶೌಚಕ್ಕೆ ಹೋಗ್ತೀರಾ? ಹೋದ್ರೂ ಕ್ಲಿಯರ್ ಆಗ್ತಿಲ್ಲವಾ?

Published : Oct 03, 2026, 07:15 PM IST

ಮಲಬದ್ಧತೆ ಬಹುತೇಕರು ಎದುರಿಸುವ ಸಾಮಾನ್ಯ ಜೀರ್ಣಕ್ರಿಯೆ ಸಮಸ್ಯೆ. ಆದರೆ ಇದು ವಾರಗಳು ಅಥವಾ ತಿಂಗಳುಗಟ್ಟಲೆ ಕಾಡಿದರೆ ನಿರ್ಲಕ್ಷ್ಯ ಮಾಡಬೇಡಿ. ದೀರ್ಘಕಾಲದ ಮಲಬದ್ಧತೆ ಕರುಳಿನ ಆರೋಗ್ಯ, ಒಟ್ಟಾರೆ ಆರೋಗ್ಯ ಹಾಗೂ ಜೀವನಮಟ್ಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

PREV
15
ಮಲಬದ್ಧತೆ

ಮಲಬದ್ಧತೆಯಲ್ಲಿ ಹಲವು ವಿಧಗಳಿವೆ. ಇದರಲ್ಲಿ 'ಫಂಕ್ಷನಲ್ ಕಾನ್ಸ್ಟಿಪೇಶನ್' (ಕಾರ್ಯಾತ್ಮಕ ಮಲಬದ್ಧತೆ) ತುಂಬಾ ಸಾಮಾನ್ಯ. ಅಂದರೆ ಮಲವಿಸರ್ಜನೆ ಮಾಡಲು ವ್ಯಕ್ತಿ ತುಂಬಾ ಕಷ್ಟಪಡುತ್ತಾನೆ. ಇದು ನೋವಿನಿಂದ ಕೂಡಿರುತ್ತದೆ. ಮಕ್ಕಳು ಹಾಗೂ ವಯಸ್ಕರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಪ್ರಪಂಚದಾದ್ಯಂತ ಶೇ. 29.6ರಷ್ಟು ಮಕ್ಕಳು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ಹೇಳುತ್ತವೆ.

25
ದೀರ್ಘಕಾಲದ ಮಲಬದ್ಧತೆ

ವಾರದಲ್ಲಿ ಮೂರು ಬಾರಿಗಿಂತ ಕಡಿಮೆ ಮಲವಿಸರ್ಜನೆ ಆಗುವುದು, ಮಲ ಗಟ್ಟಿಯಾಗುವುದು ಅಥವಾ ಮಲವಿಸರ್ಜನೆಗೆ ಕಷ್ಟಪಡುವ ಸಮಸ್ಯೆಯನ್ನು ವೈದ್ಯರು ಮಲಬದ್ಧತೆ ಎಂದು ಕರೆಯುತ್ತಾರೆ. ಈ ಲಕ್ಷಣಗಳು ವಾರಗಟ್ಟಲೆ ಮುಂದುವರಿದರೆ ಅದನ್ನು ದೀರ್ಘಕಾಲದ ಮಲಬದ್ಧತೆ ಎನ್ನಬಹುದು. ಇದರಿಂದ ಹೊಟ್ಟೆ ಉಬ್ಬರ ಮತ್ತು ಕಿರಿಕಿರಿ ಶುರುವಾಗುತ್ತದೆ. ಕ್ರಮೇಣ ಜೀರ್ಣಾಂಗ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆಗಳನ್ನು ಇದು ತಂದೊಡ್ಡುತ್ತದೆ.

35
ಮೂಲವ್ಯಾಧಿ ಅಪಾಯ ಸಾಧ್ಯತೆ

ಮಲ ತುಂಬಾ ಗಟ್ಟಿಯಾಗಿ, ಒಣಗಿದಾಗ ಅದು ಗುದನಾಳದಲ್ಲಿ ಸಿಲುಕಿಕೊಳ್ಳುತ್ತದೆ. ಇದು ಪೈಲ್ಸ್ (ಮೂಲವ್ಯಾಧಿ) ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಜೊತೆಗೆ ತೀವ್ರ ಹೊಟ್ಟೆನೋವು, ವಾಕರಿಕೆ ಮತ್ತು ಮಲ ಸೋರಿಕೆಯಂತಹ ಸಮಸ್ಯೆಗಳೂ ಎದುರಾಗುತ್ತವೆ. ಪ್ರತಿದಿನ 30 ಗ್ರಾಂ ನಾರಿನಂಶ (ಫೈಬರ್) ಇರುವ ಆಹಾರ ಸೇವಿಸುವುದು ಮತ್ತು ಸಾಕಷ್ಟು ನೀರು ಕುಡಿಯುವುದರಿಂದ ಮಲಬದ್ಧತೆಯನ್ನು ತಡೆಯಬಹುದು.

ಮಲಬದ್ಧತೆ ನಮ್ಮ ಮೂಡ್, ಹಸಿವು ಮತ್ತು ದಿನಚರಿಯ ಮೇಲೂ ಪ್ರಭಾವ ಬೀರುತ್ತದೆ. ಈ ಸಮಸ್ಯೆಯಿರುವವರು ಸದಾ ಸುಸ್ತು, ಕಿರಿಕಿರಿ ಅಥವಾ ಮಲವಿಸರ್ಜನೆ ಬಗ್ಗೆ ಆತಂಕ ಅನುಭವಿಸುತ್ತಾರೆ.

45
ನಿಧಾನಗತಿಯ ಜೀರ್ಣಕ್ರಿಯೆಗೆ ಕಾರಣ ಏನು?

ನಾರಿನಂಶ ಕಡಿಮೆ ಇರುವ ಆಹಾರ ಸೇವನೆಯಿಂದ ಮಲಬದ್ಧತೆ ಶುರುವಾಗುತ್ತದೆ. ಸಂಸ್ಕರಿಸಿದ ಆಹಾರಗಳನ್ನು ಹೆಚ್ಚು ತಿನ್ನುವುದು, ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ಕಡಿಮೆ ತಿನ್ನುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಸಾಕಷ್ಟು ನೀರು ಕುಡಿಯದೇ ಇರುವುದರಿಂದ ಮಲ ಗಟ್ಟಿಯಾಗಿ, ಹೊರಹಾಕಲು ಕಷ್ಟವಾಗುತ್ತದೆ.

55
ಅತಿಯಾದ ಔಷಧಿ ಸೇವನೆ

ಪೇನ್‌ಕಿಲ್ಲರ್ಸ್ (ನೋವು ನಿವಾರಕಗಳು), ಖಿನ್ನತೆ ನಿವಾರಕ ಮಾತ್ರೆಗಳು ಮತ್ತು ಐರನ್ ಸಪ್ಲಿಮೆಂಟ್‌ಗಳಂತಹ ಕೆಲವು ಔಷಧಿಗಳು ಮಲಬದ್ಧತೆಗೆ ಕಾರಣವಾಗುತ್ತವೆ ಎಂದು ಅಧ್ಯಯನಗಳು ತಿಳಿಸಿವೆ. ಹಾರ್ಮೋನ್ ಬದಲಾವಣೆ, ಒತ್ತಡ, ಹೈಪೋಥೈರಾಯ್ಡಿಸಮ್ ಅಥವಾ ಮಧುಮೇಹ ಕೂಡ ಈ ಸಮಸ್ಯೆಗೆ ಕಾರಣವಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories