ಕೆಂಪು, ಹಳದಿ, ಹಸಿರು ಕ್ಯಾಪ್ಸಿಕಂ ನೋಡಲು ಎಷ್ಟು ಸುಂದರವಾಗಿ ಕಾಣುತ್ತದೆಯೋ ಅಷ್ಟೇ ಆರೋಗ್ಯಕರವೂ ಆಗಿರುತ್ತೆ, ಇದು ರುಚಿಯಲ್ಲಿ ಅದ್ಭುತವಾಗಿದೆ. ಇದನ್ನು ಸಲಾಡ್ ಗಳು, ಸೂಪ್ ಮತ್ತು ಚೈನೀಸ್ ಡಿಶ್ ಗಳಲ್ಲಿ ಸಹ ಬಳಸಲಾಗುತ್ತದೆ. ಕ್ಯಾಪ್ಸಿಕಂ (capsicum) ಬಹುತೇಕ ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ. ಇದು ಎಲ್ಲರಿಗೂ ಇಷ್ಟವಾಗುವಂತಹ ಒಂದು ತರಕಾರಿಯಾಗಿದೆ.
ಕ್ಯಾಪ್ಸಿಕಂ ಬಳಸಿ ಏನಾದರೊಂದು ಅಡುಗೆ ತಯಾರಿಸಿದಾಗಲೆಲ್ಲಾ, ಅದರ ಬೀಜಗಳನ್ನು ತೆಗೆದು ಎಸೆಯುತ್ತೀರಿ ಅಲ್ವಾ?. ಆದರೆ ನೀವು ತ್ಯಾಜ್ಯವಾಗಿ ಎಸೆಯುವ ಬೀಜಗಳು, ಅಂದರೆ ಕ್ಯಾಪ್ಸಿಕಂನ ಈ ಬೀಜಗಳು ನಿಮ್ಮ ಆರೋಗ್ಯಕ್ಕೆ ರಾಮಬಾಣವಾಗಬಹುದು ಎಂದು ತಿಳಿದರೆ ಆಶ್ಚರ್ಯವಾಗಬಹುದು. ಬನ್ನಿ ಕ್ಯಾಪ್ಸಿಕಂ ಬೀಜಗಳ (capsicum seeds) ಪ್ರಯೋಜನಗಳ ಬಗ್ಗೆ ತಿಳಿಯೋಣ….
ಕ್ಯಾಪ್ಸಿಕಂ ಬೀಜಗಳು ಕ್ಯಾಲೋರಿಗಳು, ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಅಲ್ಲದೆ, ಅದರ ಮೇಲಿನ ಪದರಕ್ಕಿಂತ ಅದರ ಬೀಜಗಳಲ್ಲಿ ಹೆಚ್ಚಿನ ವಿಟಮಿನ್ ಸಿ ಕಂಡುಬರುತ್ತದೆ, ಇದು ನಮ್ಮ ಚರ್ಮ ಮತ್ತು ಕೂದಲಿಗೆ ತುಂಬಾ ಉತ್ತಮವಾಗಿದೆ, ಆದ್ದರಿಂದ ನೀವು ಕ್ಯಾಪ್ಸಿಕಂ ಬಳಸಿ ಯಾವುದೇ ಅಡುಗೆ ತಯಾರಿಸುವಾಗ ಅದರ ಬೀಜಗಳನ್ನು ಎಸೆಯುವ ಬದಲು ಅದನ್ನು ಬಳಸಿ.
ಕ್ಯಾಪ್ಸಿಕಂ ಬೀಜಗಳಲ್ಲಿ ನಾರಿನಂಶವು ಹೇರಳವಾಗಿ ಕಂಡುಬರುತ್ತದೆ. ಇದನ್ನು ಸೇವಿಸುವುದರಿಂದ ಹೊಟ್ಟೆ ನೋವು, ಮಲಬದ್ಧತೆ ಸಮಸ್ಯೆಗಳು ನಿವಾರಣೆಯಾಗುತ್ತೆ. ಅಲ್ಲದೇ ನಿಮ್ಮ ಜೀರ್ಣಾಂಗ ವ್ಯವಸ್ಥೆಯು (digestion system) ಸಹ ಉತ್ತಮವಾಗಿರುತ್ತೆ, ಅದಕ್ಕಾಗಿಯೇ ನೀವು ಅದರ ಬೀಜಗಳನ್ನು ಕ್ಯಾಪ್ಸಿಕಂನೊಂದಿಗೆ ಸೇವಿಸಬೇಕು.
ಕ್ಯಾಪ್ಸಿಕಂ ಬೀಜಗಳು ಬಹಳ ಕಡಿಮೆ ಪ್ರಮಾಣದ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಸಕ್ಕರೆ ಅಂಶವನ್ನು ಹೊಂದಿರುವುದಿಲ್ಲ. ಹಾಗಾಗಿ, ಮಧುಮೇಹ ರೋಗಿಗಳು ಕ್ಯಾಪ್ಸಿಕಂ ಬೀಜಗಳನ್ನು ಸೇವಿಸೋದು ತುಂಬಾನೆ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಕ್ಯಾಪ್ಸಿಕಂನ ಮಧ್ಯದಲ್ಲಿ ಸೈಟೋಕೆಮಿಕಲ್ ಮತ್ತು ಫ್ಲೇವಯ್ಡ್ಗಳು ಕಂಡುಬರುತ್ತೆ, ಇದು ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂದರೆ, ಇದನ್ನು ಸೇವಿಸೋದ್ರಿಂದ, ನೀವು ಹೃದಯದ ಸಮಸ್ಯೆಗಳನ್ನು ದೂರ ಮಾಡಬಹುದು. ಅಲ್ಲದೆ, ನಿಮ್ಮ ರಕ್ತದೊತ್ತಡವು ಸಹ ಸಮತೋಲನದಲ್ಲಿರುತ್ತೆ.
ಕ್ಯಾಪ್ಸಿಕಂನೊಂದಿಗೆ ಅದರ ಬೀಜಗಳನ್ನು ಸೇವಿಸಿದರೆ, ವೇಗವಾಗಿ ತೂಕ ಕಳೆದುಕೊಳ್ಳಲು (weight loss) ಸಹಾಯ ಮಾಡುತ್ತದೆ, ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲರಿ ಇರುತ್ತೆ ಮತ್ತು ಸಾಕಷ್ಟು ನೀರನ್ನು ಹೊಂದಿರುತ್ತದೆ, ಇದು ನಿಮ್ಮನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ.