ತೆಂಗಿನ ಕಾಯಲ್ಲ, ತೆಂಗಿನ ಹೂವು ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ

First Published | Sep 25, 2022, 12:24 PM IST

ಎಳನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅನ್ನೋದು ನಿಮಗೆ ಗೊತ್ತಿದೆ. ಡೆಂಗ್ಯೂ, ಚಿಕೂನ್ ಗುನ್ಯಾ, ತೂಕ ಇಳಿಕೆ, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಎಳನೀರು ಕುಡಿಯುವುದು ಒಳ್ಳೆಯದು. ಆದರೆ ನೀವು ಎಂದಾದರೂ ತೆಂಗಿನ ಹೂವುಗಳ ಬಗ್ಗೆ ಕೇಳಿದ್ದೀರಾ? ಹೌದು, ತೆಂಗಿನ ಹೂವು ತೆಂಗಿನ ಮರದಿಂದ ಉತ್ಪತ್ತಿಯಾಗುವ ಹಣ್ಣಾಗಿದ್ದು, ಇದು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ. ಖ್ಯಾತ ಆಹಾರ ತಜ್ಞೆ ರುಜುತಾ ದಿವೇಕರ್ ಇತ್ತೀಚೆಗೆ ಒಂದು ಪೋಸ್ಟ್ ಹಂಚಿಕೊಂಡಿದ್ದು, ಇದರ ಪ್ರಯೋಜನಗಳ ಬಗ್ಗೆ ಸಹ ಹೇಳಿದ್ದಾರೆ.

ತೆಂಗಿನಕಾಯಿ ಹೂವಿನ ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ರುಜುತಾ ದಿವೇಕರ್, "ದೇಹವನ್ನು ಹೈಡ್ರೇಟ್ ಆಗಿರಿಸುವುದಕ್ಕಾಗಿ ತೆಂಗಿನಕಾಯಿ, ಎಳನೀರು ಮತ್ತು ಎಳನೀರು ತಿರುಳನ್ನು ಬೇಸಿಗೆಯ ತಿಂಗಳುಗಳಲ್ಲಿ ಸೇವಿಸೋದು ಉತ್ತಮವಾಗಿದೆ. ಆದರೂ, ತೆಂಗಿನ ಹೂವು ಅಷ್ಟು ಜನಪ್ರಿಯವಾಗಿಲ್ಲ. ಇಲ್ಲಿಯವರೆಗೆ ಇದು ಬಹಳ ವಿರಳವಾಗಿ ಕಂಡುಬರುತ್ತದೆ.  ತೆಂಗಿನ ಹೂವು (coconut flower) ತೆಂಗಿನಕಾಯಿಯ ಒಳಗಡೆ ಇರುತ್ತೆ. ಇದನ್ನು ಚಾಕುವಿನಿಂದ ಸುಲಭವಾಗಿ ಕತ್ತರಿಸಬಹುದು. ಇವು ತಿನ್ನಲು ರುಚಿಕರವಾಗಿದೆ, ಜೊತೆಗೆ ಆರೋಗ್ಯಕ್ಕೂ ಸಹ ಉತ್ತಮವಾಗಿದೆ. 

ತೆಂಗಿನ ಹೂವಿನ 7 ಪ್ರಯೋಜನಗಳು ಯಾವುವು ತಿಳಿಯಿರಿ
ತೆಂಗಿನ ಹೂವು ಹೇರಳವಾದ ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಆಂಟಿ ಪ್ಯಾರಸೈಟ್ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು (immunity power) ಬಲಪಡಿಸಲು ಸಹಾಯ ಮಾಡುತ್ತದೆ, ಇದರಿಂದ ನೀವು ಯಾವುದೇ ರೋಗಕ್ಕೆ ತುತ್ತಾಗೋದನ್ನು ತಪ್ಪಿಸಬಹುದು.

Tap to resize

ವಿಟಮಿನ್ ಗಳು ಮತ್ತು ಖನಿಜಗಳು ತೆಂಗಿನ ಹೂವಿನಲ್ಲಿ (coconut flower) ಕಂಡುಬರುತ್ತವೆ, ಇದು ಜೀರ್ಣಕಾರಿ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಗ್ಯಾಸ್, ಮಲಬದ್ಧತೆ, ಆಹಾರ ಸೇವಿಸಿದ ನಂತರ ಹೊಟ್ಟೆಯುಬ್ಬರಿಕೆಯಂತಹ ಸಮಸ್ಯೆಗಳನ್ನು ಹೊಂದಿರುವ ಜನರು ತೆಂಗಿನ ಹೂವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.

ಇನ್ಸುಲಿನ್ ಕೊರತೆ, ಅಕಾಲಿಕ ವೃದ್ಧಾಪ್ಯ ಮತ್ತು ರೋಗಕ್ಕೆ ಕಾರಣವಾಗುವ ಫ್ರೀ ರ್ಯಾಡಿಕಲ್ ಗಳನ್ನು (free radicals) ತೆಗೆದುಹಾಕುವ ಮೂಲಕ ತೆಂಗಿನಕಾಯಿಯು ದೇಹವನ್ನು ಕ್ಯಾನ್ಸರ್ ನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸೋದು ಆರೋಗ್ಯಕ್ಕೆ ಉತ್ತಮವಾಗಿದೆ.

ನೀವು ತೂಕ ಇಳಿಸಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತಿದ್ದರೆ, ತೆಂಗಿನ ಹೂವಿನೊಂದಿಗೆ ಅದರ ರಸವು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ನಾರಿನಂಶವು ತುಂಬಾ ಹೆಚ್ಚಾಗಿರುತ್ತದೆ, ಆದ್ದರಿಂದ ಇದನ್ನು ತಿನ್ನೋದ್ರಿಂದ ತುಂಬಾ ಸಮಯದವರೆಗೆ ನಿಮಗೆ ಹಸಿವಾಗುವುದಿಲ್ಲ. ಇದಲ್ಲದೆ, ಇದರಲ್ಲಿರುವ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆ, ಆದ್ದರಿಂದ ಇದನ್ನು ತಿನ್ನೋದ್ರಿಂದ ತೂಕ ಹೆಚ್ಚಾಗೋದಿಲ್ಲ.

ತೆಂಗಿನ ಹೂವಿನ ಪೋಷಕಾಂಶಗಳು ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಮಧುಮೇಹದ (diabetes) ಸಮಸ್ಯೆ ಇರುವುದಿಲ್ಲ. ನಿಮಗೆ ಮಧುಮೇಹ ಸಮಸ್ಯೆ ಇದ್ದರೆ ಇದನ್ನು ತಿನ್ನಲು ಭಯಪಡಬೇಕಾಗಿಲ್ಲ. ಇದನ್ನು ನೀವು ಆರಾಮವಾಗಿ ತಿನ್ನಬಹುದು.

ಮುಖದ ಮೇಲೆ ಸುಕ್ಕುಗಳು, ಕಲೆಗಳು, ಮೊಡವೆಗಳು ಮತ್ತು ವಯಸ್ಸಾಗುವಿಕೆಗೆ ಕಂಟ್ರೋಲ್ ಮಾಡಲು ತೆಂಗಿನ ಹೂವು ತುಂಬಾ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಚರ್ಮದ ಸಮಸ್ಯೆಗಳನ್ನು ತಪ್ಪಿಸಲು, ನೀವು ಮನೆಯಲ್ಲಿ ತೆಂಗಿನ ಹೂವಿನ ಫೇಸ್ ಪ್ಯಾಕ್ ಮತ್ತು ಕ್ರೀಮ್ ಕೂಡ ತಯಾರಿಸಬಹುದು.

ತೆಂಗಿನ ಹೂವಿನ ಪೋಷಕಾಂಶಗಳು ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸುತ್ತವೆ. ವ್ಯಾಯಾಮ ಮತ್ತು ಜಿಮ್ ನಲ್ಲಿ ಸ್ವಲ್ಪ ವರ್ಕ್ ಔಟ್ ಮಾಡಿದ ತಕ್ಷಣ ದಣಿದಿದ್ದರೆ, ಅಂತಹ ಜನರಿಗೆ ತೆಂಗಿನ ಹೂವಿನ ಸೇವನೆಯು ಶಕ್ತಿಯನ್ನು ನೀಡುತ್ತೆ. ಮತ್ತೇಕೆ ತಡ ತೆಂಗಿನ ಹೂವನ್ನು ತಿಂದು ಉತ್ತಮ ಶಕ್ತಿ ಪಡೆಯಿರಿ.

Latest Videos

click me!