COVID-19 Vaccine: ಯುವಕರ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? AIIMS ವರದಿ ಬಹಿರಂಗ

Published : Dec 15, 2025, 09:54 AM IST

ಸಾಂಪ್ರದಾಯಿಕ ಶವ ಪರೀಕ್ಷೆ ಮತ್ತು ವಿವರವಾದ ಹಿಸ್ಟೋ ಪಾಥೋಲಾಜಿಕಲ್ ಪರೀಕ್ಷೆಗಳನ್ನು ಬಳಸಿಕೊಂಡು 18 ರಿಂದ 45 ವರ್ಷ ವಯಸ್ಸಿನ ಜನರ ಹಠಾತ್ ಸಾವಿನ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.

PREV
14
ಹೃದಯಾಘಾತ

14ರಿಂದ 45 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಇತ್ತೀಚೆಗೆ ಹೆಚ್ಚಿರುವ ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ನಂಟಿಲ್ಲ ಎಂದು ದೆಹಲಿ ಏಮ್ಸ್ ಆಸ್ಪತ್ರೆ ಅಧ್ಯಯನ ವರದಿ ಹೇಳಿದೆ. ಕಳೆದ ಎರಡ್ಮೂರು ವರ್ಷಗಳಿಂದ ಚಿಕ್ಕ ವಯಸ್ಸಿನವರಲ್ಲಿಯೇ ಹೃದಯಾಘಾತದ ಹೆಚ್ಚಾಗುತ್ತಿರೋದು ಆತಂಕಕ್ಕೆ ಕಾರಣವಾಗಿತ್ತು.

24
ಹಲವು ಪರೀಕ್ಷೆಗಳು

'ಸಂಶೋಧಕರು ಮೌಖಿಕ ಶವಪರೀಕ್ಷೆ, ಮರಣೋತ್ತರ ಪರೀಕ್ಷೆ, ಸಾಂಪ್ರದಾಯಿಕ ಶವ ಪರೀಕ್ಷೆ ಮತ್ತು ವಿವರವಾದ ಹಿಸ್ಟೋ ಪಾಥೋಲಾಜಿಕಲ್ ಪರೀಕ್ಷೆಗಳನ್ನು ಬಳಸಿಕೊಂಡು 18 ರಿಂದ 45 ವರ್ಷ ವಯಸ್ಸಿನ ಜನರ ಹಠಾತ್ ಸಾವಿನ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.

34
ಕೋವಿಡ್ ಲಸಿಕೆ

ಈ ಹಿಂದೆ ಕೋವಿಡ್ ಲಸಿಕೆಗೂ, ಇವರ ಹೃದಯಾ ಘಾತಕ್ಕೂನಂಟಿಲ್ಲ, ಉಸಿರಾಟ ಅಥವಾ ಇತರ ಹೃದಯ ಸಂಬಂಧಿ ಸಮಸ್ಯೆಗಳಿಂದ ಇವರು ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ' ಎಂದು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್‌ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.

44
ಕೊರೊನಾ ಮಹಾಮಾರಿ

2020ರಲ್ಲಿ ಇಡೀ ಜಗತ್ತನ್ನು ಕೊರೊನಾ ಮಹಾಮಾರಿ ಆವರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಭಾರತ ಸರ್ಕಾರ ದೇಶದ ಜನತೆ ಉಚಿತ ಕೋವಿಡ್ ಲಸಿಕೆಯನ್ನು ನೀಡಿತ್ತು. ಈ ಲಸಿಕೆ ಬಳಿಕ ಹಲವು ಚರ್ಚೆಗಳು ನಡೆದಿದ್ದವು. ಇದೀಗ ಏಮ್ಸ್ ವರದಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದೆ.

Read more Photos on
click me!

Recommended Stories