ಜೋಳದ ರೊಟ್ಟಿ ತಿನ್ನಿ, ಬಟ್ಟೆ ಒಗೆಯಿರಿ; ಸಿಕ್ಸ್ ಪ್ಯಾಕ್ಸ್ ಸಿಕ್ರೇಟ್ ರಿವೀಲ್ ಮಾಡಿದ ತೆಲಂಗಾಣ ಸಿಎಂ

Published : Jun 18, 2025, 12:35 PM IST

ಯುವಜನರು ಜಿಮ್‌ ಮತ್ತು ಪೂರಕಗಳಿಗೆ ಹಣ ಖರ್ಚು ಮಾಡುವ ಬದಲು ಸಾಂಪ್ರದಾಯಿಕ ಆಹಾರ ಮತ್ತು ದೈನಂದಿನ ಕೆಲಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಲಹೆ ನೀಡಿದ್ದಾರೆ. 

PREV
18

ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ, ಯುವಜನರು ಜಿಮ್‌ಗಳಿಗೆ ಖರ್ಚು ಮಾಡುವ ಬದಲು ಅಥವಾ ಸ್ಟೀರಾಯ್ಡ್‌ಗಳು ಹಾಗೂ ಸಪ್ಲಿಮೆಂಟ್ ಅವಲಂಬಿಸುವ ಬದಲು ಸಾಂಪ್ರದಾಯಿಕ ಆಹಾರಗಳನ್ನು ಆರಿಸಿಕೊಂಡು ಆರೋಗ್ಯಕರವಾಗಿರಿ ಎಂದು ಸೂಚಿಸಿದ್ದಾರೆ. ಜೊತೆಗೆ ಸರಳವಾದ ದೈನಂದಿನ ಕೆಲಸಗಳನ್ನು ಮಾಡುವಂತೆ ಒತ್ತಾಯಿಸಿದ್ದಾರೆ.

28

ಜೋಳದ ರೊಟ್ಟಿಯಂತಹ ಸ್ಥಳೀಯ ಜೋಳದ ಆಧಾರಿತ ಆಹಾರಗಳನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವಂತೆ ಯುವಕರಿಗೆ ಸಲಹೆ ನೀಡಿರುವ ರೆಡ್ಡಿ, ಸಾಂಪ್ರದಾಯಿಕ ಭಾರತೀಯ ಆಹಾರ ಪದ್ಧತಿ ನಿರ್ಲಕ್ಷಿಸಿ ಯುವಜನರು ಸಮಯ ಮತ್ತು ಹಣವನ್ನು ವ್ಯರ್ಥ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

38

ರೇವಂತ್ ಅವರ ಸಂದೇಶ ಸ್ಪಷ್ಟವಾಗಿತ್ತು; ಫಿಟ್ನೆಸ್ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆ ಎರಡೂ ಮನೆಯಿಂದಲೇ ಪ್ರಾರಂಭವಾಗಬೇಕು.

48

ಸಿಕ್ಸ್ ಪ್ಯಾಕ್ ಆಬ್ಸ್ ಪಡೆಯಲು ಪೂರಕ ಅಥವಾ ಸ್ಟೀರಾಯ್ಡ್‌ಗಳ ಅಗತ್ಯವಿಲ್ಲ. ಸರಿಯಾಗಿ ತಿನ್ನಿರಿ, ನಿಮ್ಮ ಸ್ವಂತ ಕೆಲಸ ಮಾಡಿಕೊಳ್ಳಿ. ಆಗ ನೀವು ಫಿಟ್ ಆಗಿರುತ್ತೀರಿ ಎಂದು ರೇವಂತ್ ಹೇಳಿದರು.

58

ಬಟ್ಟೆ ಒಗೆಯುವಂತಹ ದೈನಂದಿನ ಕೆಲಸಗಳು ಸ್ಟ್ರಾಂಗ್ ಬಾಡಿ ಬಿಲ್ಡ್ ಮಾಡಲು ಸಹಾಯ ಮಾಡುತ್ತವೆ ಎಂದು ಹೇಳಿದ ರೇವಂತ್, ಈ ದೈಹಿಕ ಕೆಲಸಗಳು ಜಿಮ್‌ಗೆ ಹೋಗದೆಯೇ ಫಿಟ್‌ ಆಗಿರಲು ಸಹಕಾರಿ ಎಂದರು.

68

ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಮತ್ತು ಕೃಷಿ ಪದ್ಧತಿಯಲ್ಲಿನ ಬದಲಾವಣೆಗಳ ಪ್ರಭಾವವನ್ನು ಎತ್ತಿ ತೋರಿಸಿದ ರೇವಂತ್ ರೆಡ್ಡಿ, ತೆಲಂಗಾಣದ ಆಹಾರ ವೈವಿಧ್ಯತೆ ಕುಗ್ಗುತ್ತಿದೆ ಮತ್ತು ಹಳೆಯ ರೆಸಿಪಿಗಳು ಮರೆತುಹೋಗುತ್ತಿವೆ ಎಂದರು. ಹಾಗೆಯೇ ಅಚಂಪೇಟ್‌ನಲ್ಲಿ ಸಾಮಾನ್ಯವಾಗಿ ತಯಾರಿಸಲಾಗುವ ತೊಗರಿ ಬೇಳೆಯೊಂದಿಗೆ ಬೇಯಿಸಿದ ದೋಸಕಾಯದ ಸಾಂಪ್ರದಾಯಿಕ ಖಾದ್ಯವನ್ನು ನೆನಪಿಸಿಕೊಂಡು ಇದು "ಕೋಳಿ ಅಥವಾ ಕುರಿಮರಿಗಿಂತ ರುಚಿಕರವಾಗಿರುತ್ತದೆ ಎಂದು ಹೊಗಳಿದರು.

78

ಪ್ರಸ್ತುತ ಪೀಳಿಗೆ ಫಿಟ್ನೆಸ್ ಕಾಪಾಡಿಕೊಳ್ಳಲು ವಿದೇಶಿ ಆಹಾರ ಪದಾರ್ಥಗಳು ಮತ್ತು ರುಚಿಯಿಲ್ಲದ ತರಕಾರಿಗಳನ್ನು ಬಳಸುತ್ತಿದೆ. ಆದರೆ ಹಾಗಾಗಬಾರದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

88

ಫಿಟ್ ಆಗಿರಲು ಮತ್ತು ಸಿಕ್ಸ್ ಪ್ಯಾಕ್ ಆಬ್ಸ್ ಪಡೆಯಲು, ಆರೋಗ್ಯಕರ ಆಹಾರವನ್ನು ಸೇವಿಸುವುದು ಮತ್ತು ತಮ್ಮ ಮನೆಕೆಲಸಗಳನ್ನು ತಾವೇ ಮಾಡಿಕೊಳ್ಳುವುದು. ಜೊತೆಗೆ ನಮ್ಮ ತೆಲಂಗಾಣ ಪೂರ್ವಜರು ನಮಗೆ ಕೊಟ್ಟ ಜೋಳದ ರೊಟ್ಟಿಯನ್ನು ಸಂತೋಷದಿಂದ ತಿನ್ನಿರಿ. ನೀವು ಶೀಘ್ರದಲ್ಲೇ ಫಿಟ್ ಆಗಲು ಪ್ರಾರಂಭಿಸುತ್ತೀರಿ. ಇದು ನಮ್ಮ ಪೂರ್ವಜರಿಂದ ನಮಗೆ ಸಿಕ್ಕಿರುವ ಸಾಂಪ್ರದಾಯಿಕ ಆಹಾರ ಮತ್ತು ನಾವು ಈ ಸರಪಳಿಯನ್ನು ಮುಂದುವರಿಸಬೇಕು ಎಂದು ರೇವಂತ್ ಹೇಳಿದರು.

Read more Photos on
click me!

Recommended Stories