Kids and Their Bones: ಕೊರೋನಾದಿಂದ ಮಕ್ಕಳನ್ನು ಕಾಡುತ್ತಿದೆ ಮೂಳೆ ಸಮಸ್ಯೆ.. ಪರಿಹಾರ ಏನು?

First Published | Jan 13, 2022, 3:18 PM IST

ಕೊರೊನಾ ಅನೇಕ ರೀತಿಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಮನೆಯಲ್ಲಿಯೇ ಇರುವ ಕಾರಣ ಮತ್ತು ದೈಹಿಕವಾಗಿ ಕಡಿಮೆ ಸಕ್ರಿಯರಾಗಿರುವ ಕಾರಣ ಮಕ್ಕಳ ಮೂಳೆಗಳು ಹದಗೆಡುತ್ತಿವೆ. ಚಿಕ್ಕ ವಯಸ್ಸಿನಲ್ಲೇ ಮೂಳೆಯು ಬೆಳವಣಿಗೆ ಕೊರತೆ ಹಾಗೂ ಬಲ ಕುಂಠಿತ ಎದುರಿಸುತ್ತಿದೆ. ಇದರಿಂದ ಮಕ್ಕಳು ದೊಡ್ಡವರಾದ ಮೇಲೆ ಬಹಳಷ್ಟು ಆರೋಗ್ಯ ಸಮಸ್ಯೆ ಎದುರಿಸಬೇಕಾದ ಅಪಾಯವಿದೆ. 

ಕೊರೊನಾ(Corona) ಸಾಂಕ್ರಾಮಿಕ ರೋಗವು ಅಪ್ಪಳಿಸುವ ಮೊದಲೇ, ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ ಮಕ್ಕಳು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಕೊರೊನಾ ಬಂದಾಗಿನಿಂದ, ಮಕ್ಕಳನ್ನು ಮನೆಯಲ್ಲಿ ಲಾಕ್ ಮಾಡಲಾಗಿದೆ ಮತ್ತು ಟಿವಿ ಮುಂದೆ ಗಂಟೆಗಳ ಕಾಲ ಗ್ಯಾಜೆಟ್ ಗಳನ್ನು ಓಡಿಸಲಾಗುತ್ತಿದೆ. 

ಮನೆಯಲ್ಲಿಯೇ ಕುಳಿತುಕೊಳ್ಳುವುದರಿಂದ ಮಕ್ಕಳಲ್ಲಿ(Children) ದೈಹಿಕ ನಿಷ್ಕ್ರಿಯತೆಯ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ಮಕ್ಕಳ ಮಾನಸಿಕ ಬೆಳವಣಿಗೆ ಮತ್ತು ಸಾಮಾಜಿಕ ಕೌಶಲ್ಯಗಳ ಮೇಲೆ ಪರಿಣಾಮ ಬೀರುತ್ತಿದೆ.

Tap to resize

ಭಾರತದ ಅಂತರರಾಷ್ಟ್ರೀಯ ಪೇನ್ ಸೆಂಟರ್ ನ ನಿರ್ದೇಶಕರಾದ ಡಾ. ಹರ್ಷಿತ ಸುರಂಜೆ ಮತ್ತು ಆರ್ಥೋಸ್ಕೋಪಿ ನಿರ್ದೇಶಕ ಡಾ. ಸುನಿಲ್ ಶೆರಾವತ್ ಅವರ ಬಳಿ ಹದಿಹರೆಯದ ಮಕ್ಕಳು ಪಾದಗಳು ಮತ್ತು ಮಣಿಕಟ್ಟುಗಳಲ್ಲಿ ನೋವಿನ ದೂರುಗಳನ್ನು ಹೇಳುವುದು ಹೆಚ್ಚಾಗಿದೆಯಂತೆ.

ಸಾಂಕ್ರಾಮಿಕ ರೋಗವು ಮಕ್ಕಳನ್ನು ಮೂಲೆಯಲ್ಲಿ ಕೂರಿಸಿ ಮೂಳೆ(Bone)ಗಳಿಗೆ ಹಾನಿಯನ್ನುಂಟು ಮಾಡುತ್ತಿದೆ. ಇದು ಕೀಲು ನೋವು ಮತ್ತು ಮುರಿತಗಳ ಅಪಾಯವನ್ನು ಹೆಚ್ಚಿಸುತ್ತದೆ. ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನ ಪೂರಕಗಳು ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದು ವೈದ್ಯರು ಹೇಳುತ್ತಾರೆ.

ಮೂಳೆಯ ದ್ರವ್ಯರಾಶಿಯು 20ನೇ ವಯಸ್ಸಿಗೆ 90 ಪ್ರತಿಶತ ಪೂರ್ಣವಾಗಿರುತ್ತದೆ ಮತ್ತು ಸುಮಾರು 30 ವರ್ಷಗಳ ಹೊತ್ತಿಗೆ ಅದರ ಉತ್ತುಂಗವನ್ನು ತಲುಪುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಬಾಲ್ಯದಲ್ಲಿ ಮಕ್ಕಳ ಮೂಳೆಗಳು ಬಲಗೊಂಡರೆ ದೀರ್ಘಾವಧಿಯಲ್ಲಿ ಅವರ ಮೂಳೆಗಳು ಬೇಗನೆ ದುರ್ಬಲವಾಗುವುದಿಲ್ಲ.. 

ದೈಹಿಕ ಚಟುವಟಿಕೆ, ವಿಶೇಷವಾಗಿ ಹೊರಗೆ ಆಡುವುದು, ಈ ಸಮಯದಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್(Protein) ಸಮೃದ್ಧವಾದ ಆಹಾರವನ್ನು ತೆಗೆದುಕೊಳ್ಳುವುದು ಮಸ್ಕುಲೋಸ್ಕೆಲಿಟಲ್ ಬೆಳವಣಿಗೆಯನ್ನು ಸುಧಾರಿಸುತ್ತದೆ. ಮಕ್ಕಳ ಅರೋಗ್ಯ ಸುಧಾರಿಸುತ್ತದೆ. 

ಮಣಿಕಟ್ಟಿನ ನೋವಿಗೆ ಕಾರಣಗಳು
ಲಾಕ್ ಡೌನ್ (Lockdown)ಮತ್ತು ಮನೆಯಿಂದ ಕೆಲಸ ಇದಕ್ಕೆ ಕಾರಣಗಳಾಗಿವೆ. ಈ ಸಮಯದಲ್ಲಿ ಕೆಲಸ ಮಾಡಲು ಹೋಗದಿರುವುದು, ಮನೆಯ ಮೇಜಿನ ಬಳಿ ಕೆಲಸ ಮಾಡುವುದು, ಡೆಸ್ಕ್ ಟಾಪ್ ಮುಂದೆ ಸರಿಯಾಗಿ ಕುಳಿತುಕೊಳ್ಳದಿರುವುದು ಅಸಮಾಧಾನದ ಭಂಗಿಗಳು ಮತ್ತು ವಿವಿಧ ಮಸ್ಕುಲೋಸ್ಕೆಲಿಟಲ್ ನೋವಿಗೆ ಕಾರಣವಾಗಬಹುದು. ಮಕ್ಕಳು ಪ್ರಸ್ತುತ ಮಣಿಕಟ್ಟಿನ ನೋವಿನ ಬಗ್ಗೆ ಹೆಚ್ಚು ದೂರುತ್ತಿದ್ದಾರೆ.

ಏನು ಮಾಡಬೇಕು
ಪೋಷಕರು ಮಕ್ಕಳನ್ನು ಪ್ರತಿದಿನ ವ್ಯಾಯಾಮ ಮಾಡಲು ಪ್ರೇರೇಪಿಸಬೇಕಾದುದು ಮುಖ್ಯ.  ಇದು ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕೀಲುಗಳಿಗೆ ನಮ್ಯತೆಯನ್ನು ನೀಡುತ್ತದೆ. ದೇಹವು ಸ್ಟ್ರಾಂಗ್(Strong) ಆಗಲು ಇದು ಸಹಾಯ ಮಾಡುತ್ತದೆ. 

ಬಿಸಿ ಅಥವಾ ತಂಪಾದ ಮಸಾಜ್ (Massage)
ಐಡಿಯೋಪತಿಕ್ ಸಂಧಿವಾತದಿಂದ ಬಳಲುತ್ತಿರುವ ಮಕ್ಕಳು, ವಿಶೇಷವಾಗಿ ಬೆಳಿಗ್ಗೆ ಕಾಲು, ಕೈ ಸೆಟೆದುಕೊಂಡು ನೋವು ಅನುಭವಿಸುತ್ತಾರೆ. ಕೆಲವು ಮಕ್ಕಳಿಗೆ ತಂಪಾದ ವಸ್ತುಗಳಿಂದ ಮಸಾಜ್ ಮಾಡಿದರೆ ಪರಿಹಾರ ಸಿಗುತ್ತದೆ ಆದರೆ ಹೆಚ್ಚಿನ ಮಕ್ಕಳಿಗೆ ಬಿಸಿ ವಸ್ತುಗಳಿಂದ ಮಸಾಜ್ ಮಾಡಿದರೆ ನೋವು ಕಡಿಮೆಯಾಗುತ್ತದೆ. 

ಸಮಯಕ್ಕೆ ಸರಿಯಾಗಿ ತಿನ್ನಿ
ಸಂಧಿವಾತದಿಂದ ಬಳಲುತ್ತಿರುವ ಕೆಲವು ಮಕ್ಕಳು ತಮ್ಮ ಹಸಿವನ್ನು ಕಳೆದುಕೊಳ್ಳುತ್ತಾರೆ. ಔಷಧಿಗಳಿಂದಾಗಿ ಮಕ್ಕಳು ತೂಕ ಹೆಚ್ಚಿಸಿಕೊಳ್ಳಬಹುದು ಅಥವಾ ದೈಹಿಕವಾಗಿ ಸಕ್ರಿಯರಾಗಿರುವುದಿಲ್ಲ. ಆರೋಗ್ಯಕರ ಆಹಾರವು(Food) ತೂಕವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

Latest Videos

click me!