Change Your Bed sheet: ಎಷ್ಟು ದಿನಕ್ಕೊಮ್ಮೆ ಬೆಡ್ ಶೀಟ್ ಬದಲಾಯಿಸಬೇಕು?

First Published | Jan 10, 2022, 6:13 PM IST

ಕೊರೋನಾ ಅವಧಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಮಗೆ ಹಲವಾರು ಸಲಹೆ ನೀಡಲಾಗುತ್ತದೆ. ಆದರೆ ಒಂದೇ ಬೆಡ್ ಶೀಟ್ನಲ್ಲಿ(bedsheet) ದೀರ್ಘಕಾಲ ಇರುವುದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂಬುದು ನಿಮಗೆ ಗೊತ್ತೇ? ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳೂ ಇದರಿಂದ ಬರುತ್ತದೆ ಅನ್ನೋದು ತಿಳಿದಿರಲಿ. 

ನಾವೆಲ್ಲರೂ ಖಂಡಿತವಾಗಿಯೂ ನಮ್ಮ ಮನೆಗಳಲ್ಲಿ ಹಾಸಿಗೆಯ ಮೇಲೆ ಶೀಟ್ ಹಾಕುತ್ತೇವೆ. ಬೆಡ್ ಶೀಟ್ ಕೋಣೆಯ ಅಂದವನ್ನು ಹೆಚ್ಚಿಸಿದರೂ ಶುಚಿತ್ವದ ವಿಚಾರದಲ್ಲಿ ಬೆಡ್ ಶೀಟ್ ನತ್ತ ಗಮನ ಹರಿಸುವವರು ಕಡಿಮೆ. ಹೆಚ್ಚಿನ ಜನರು ಮನೆಗಳಲ್ಲಿ ಬೆಡ್ಶೀಟ್ಗಳಲ್ಲಿ ಕೊಳಕು ಕಂಡಾಗ ಬದಲಾಯಿಸುತ್ತಾರೆ ಅಥವಾ ಕೋಣೆಯಲ್ಲಿ ಸ್ವಲ್ಪ ಬದಲಾವಣೆಗಾಗಿ ಬದಲಾಯಿಸುತ್ತಾರೆ.

ವಾಸ್ತವವಾಗಿ, ಕಳೆದ ವಾರ ಹಾಸಿಗೆಯ ಮೇಲೆ ಹಾಕಲಾದ ಬೆಡ್ ಶೀಟ್ ಸತ್ತ ಜೀವಕೋಶಗಳು (dead cells), ಧೂಳು, ಎಣ್ಣೆ ಮತ್ತು ಇತರ ವಸ್ತುಗಳಂತಹ ಅನೇಕ ವಸ್ತುಗಳನ್ನು ಸಂಗ್ರಹಿಸುತ್ತಿರುತ್ತದೆ. ಈ ಧೂಳು, ಕೊಳೆ ಹೆಚ್ಚಾದಂತೆ ಅದು ಕಾಲಾನಂತರದಲ್ಲಿ ಅನಾರೋಗ್ಯಕ್ಕೆ (health problem) ಕಾರಣವಾಗಬಹುದು.

Tap to resize

ಸಾಮಾನ್ಯವಾಗಿ ಶೀಟ್‌ಗಳನ್ನು 3-4 ವಾರಗಳಲ್ಲಿ ಮನೆಗಳಲ್ಲಿ ತೊಳೆಯಲಾಗುತ್ತದೆ. ಇದರಿಂದ ಮೊಡವೆ, ಅಲರ್ಜಿಗಳು, ಎಕ್ಸಿಮಾ, ಆಸ್ತಮಾ, ಶೀತ ಮತ್ತು ಜ್ವರದಿಂದ ಹಿಡಿದು ನಿದ್ರೆಯ ಗುಣಮಟ್ಟ (quality sleep)ಕಡಿಮೆಯಾಗುವವರೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. 

ವರದಿಯ ಪ್ರಕಾರ, ನ್ಯುಮೋನಿಯಾ ಮತ್ತು ಗೊನೊರಿಯಾಕ್ಕೆ ಸಂಬಂಧಿಸಿದ ಬ್ಯಾಕ್ಟೀರಿಯಾಗಳು (bacteria)ಹಾಸಿಗೆಯಲ್ಲಿ 7 ದಿನಗಳಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ . ಇದರಿಂದ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದುದರಿಂದ ಜನರು ತಮ್ಮ ಬೆಡ್ ಶೀಟ್ ಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು ಎಂಬುದಕ್ಕೆ ಇದು ಕಾರಣವಾಗಿದೆ. 

ಸಂಶೋಧನೆಯ ಸಮಯದಲ್ಲಿ, ಸೆವಿಲ್ಲೆ ವಿಶ್ವವಿದ್ಯಾನಿಲಯದ ಜೀವಶಾಸ್ತ್ರ (biology)ವಿಭಾಗವು ಸೂಕ್ಷ್ಮದರ್ಶಕದ ಅಡಿಯಲ್ಲಿ 4 ವಾರಗಳ ಹಳೆಯ ಬೆಡ್ ಶೀಟ್ ಗಳನ್ನು ನೋಡಲಾಯಿತು. ಮಾದರಿಗಳನ್ನು ಪರೀಕ್ಷಿಸಲಾಯಿತು ಮತ್ತು ನ್ಯುಮೋನಿಯಾ, ಗೊನೊರಿಯಾ ಮತ್ತು ಅಪೆಂಡಿಸೈಟಿಸ್ಗೆ ಸಂಬಂಧಿಸಿರುವ ಬ್ಯಾಕ್ಟೀರಾಯ್ಡ್ಗಳನ್ನು ಒಳಗೊಂಡಿರುವುದು ಕಂಡುಬಂದಿದೆ. 

ವಿಜ್ಞಾನ ವಿಭಾಗವು ಗಂಟಲಿನ ಸೋಂಕನ್ನು ಉಂಟು ಮಾಡುವ ಫ್ಯೂಸೋ ಬ್ಯಾಕ್ಟೀರಿಯಾವನ್ನು ಬೆಡ್‌ಶೀಟ್‌ನಲ್ಲಿ ಕಂಡಿದೆ. ಇದು ಲೆಮಿರೆಸ್ ಸಿಂಡ್ರೋಮ್ ಮತ್ತು ಗೊನೊರಿಯಾವನ್ನು ಉಂಟುಮಾಡುತ್ತದೆ. ಆದುದರಿಂದ ಪ್ರತಿ ವಾರ ಬೆಡ್ ಶೀಟ್ ಬದಲಾಯಿಸಬೇಕು ಎಂಬುದನ್ನು ನೆನಪಿನಲ್ಲಿಡಿ. 

ಬೆಡ್ ಶೀಟ್ಗಳು ಸ್ವಚ್ಛವಾಗಿ ಕಾಣಿಸಿದರೂ ಪ್ರತಿಯೊಬ್ಬರೂ ಪ್ರತಿ ವಾರ ತಮ್ಮ ಶೀಟ್ ಗಳನ್ನು ತೊಳೆಯಬೇಕು ಎಂದು ತಜ್ಞರು ಹೇಳುತ್ತಾರೆ. ಇದು ಸಾಧ್ಯವಾಗದಿದ್ದರೆ, ಪ್ರತಿ 2 ವಾರಗಳಿಗೊಮ್ಮೆ, ಶೀಟ್ ಗಳನ್ನು ತೊಳೆಯಬೇಕು. ಏಕೆಂದರೆ ನಮ್ಮ ದೇಹವು ಪ್ರತಿದಿನ 40,000 ಸತ್ತ ಚರ್ಮವನ್ನು (dead skin)ಬಿಡುಗಡೆ ಮಾಡುತ್ತದೆ, ಇದು ನಮ್ಮ ಆರೋಗ್ಯ, ಇಮ್ಮ್ಯೂನಿಟಿ  ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರುವ ಬಹಳಷ್ಟು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ.

Latest Videos

click me!