ಅರಿಶಿನದ (Turmeric) ವಿಷಯಕ್ಕೆ ಬಂದ್ರೆ, ತೀಕ್ಷ್ಣವಾದ ಯೆಲ್ಲೊ ಕಲರ್ ನಮ್ಮ ಕಣ್ಣ ಮುಂದೆ ಬರುತ್ತೆ. ಆದರೆ ಇನ್ನು ಮುಂದೆ ಹಾಗಾಗೋಲ್ಲ ಯಾಕಂದ್ರೆ ಅರಿಶಿನ ಕೇವಲ ಹಳದಿ ಬಣ್ಣದಲ್ಲಿಲ್ಲ. ಕಪ್ಪು ಬಣ್ಣದಲ್ಲೂ ಲಭ್ಯವಿದೆ. ಇದನ್ನು ಕಪ್ಪು ಅರಿಶಿನ ಎಂದು ಕರೆಯಲಾಗಿದ್ದರೂ, ಇದು ಕಪ್ಪು ಮತ್ತು ನೀಲಿ ಬಣ್ಣಗಳ ಕಾಂಬಿನೇಷನಲ್ಲಿದೆ.
ಕಪ್ಪು ಅರಿಶಿನ (Black Turmeric) ಸಾಮಾನ್ಯವಾಗಿ ಭಾರತ ಮತ್ತು ಮಧ್ಯಪ್ರದೇಶದ ಈಶಾನ್ಯದಲ್ಲಿ ಬೆಳೆಯಲಾಗುತ್ತೆ. ಕಪ್ಪು ಅರಿಶಿನ ಆಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ. ಇದರ ವೈಜ್ಞಾನಿಕ ಹೆಸರು ಕರ್ಕುಮಾ ಸೀಸಿಯಾ. ಈ ಸಸ್ಯ ಮಣಿಪುರ ಮತ್ತು ಇತರ ಕೆಲವು ರಾಜ್ಯಗಳ ಬುಡಕಟ್ಟು ಜನಾಂಗಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ, ಇಲ್ಲಿ ಅದರ ಬೇರುಗಳಿಂದ ತಯಾರಿಸಿದ ಪೇಸ್ಟ್ ಅನ್ನು ಹಾವು ಮತ್ತು ಚೇಳುಗಳ ಗಾಯ ಮತ್ತು ಕಡಿತಗಳ ಮೇಲೆ ಹಚ್ಚುತ್ತಾರೆ.
ಕಪ್ಪು ಅರಿಶಿನದಲ್ಲಿ ಯಾವ ಔಷಧೀಯ ಗುಣ ಕಂಡುಬರುತ್ತೆ?
ಒಂದು ಸ್ಟಡಿ ಪ್ರಕಾರ, ಕಪ್ಪು ಅರಿಶಿನದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಇದು ಆಯುರ್ವೇದದ ಉತ್ತಮ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಇದು ವಿವಿಧ ಔಷಧೀಯ ಗುಣ ಹೊಂದಿದೆ. ಅವುಗಳಲ್ಲಿ ಪ್ರಮುಖವಾದದು ಆಂಟಿ ಫಂಗಲ್, ಅಸ್ತಮಾ-ವಿರೋಧಿ, ಅಂಟಿ ಆಕ್ಸಿಡೆಂಟ್, ನೋವು ನಿವಾರಕ, ಲೊಕೊಮೋಟರ್ ಡಿಪ್ರೆಸೆಂಟ್, ಬ್ಯಾಕ್ಟೀರಿಯಾ ವಿರೋಧಿ(Anti- bacterial), ಆಂಟಿ-ಅಲ್ಸೇರ್ ಮತ್ತು ಸ್ನಾಯುಗೆ ರೆಸ್ಟ್ ನೀಡುವ, ಆತಂಕ ಮತ್ತು ಸಿಎನ್ಎಸ್ ಖಿನ್ನತೆಯಿಂದ ಪರಿಹಾರ ನೀಡುವ ಗುಣ ಪ್ರಮುಖವಾಗಿದೆ. ಇದು ನಿಮ್ಮ ದೇಹವನ್ನು ಅನೇಕ ರೀತಿಯ ರೋಗಗಳಿಂದ ರಕ್ಷಿಸುತ್ತೆ.
ಶ್ವಾಸಕೋಶದ (Lungs) ಕಾಯಿಲೆ ದೂರವಾಗುತ್ತೆ
ಕಪ್ಪು ಅರಿಶಿನ ಉಸಿರಾಟದ ಕಾಯಿಲೆಗೆ ತುಂಬಾ ಪ್ರಯೋಜನಕಾರಿ. ಇದು ಉರಿಯೂತ ಶಮನಕಾರಿ ಗುಣಲಕ್ಷಣ ಹೊಂದಿದ್ದು, ಶೀತ, ನೆಗಡಿ, ಕೆಮ್ಮು, ಅಸ್ತಮಾದಂತಹ ರೋಗಕ್ಕೆ ಪರಿಹಾರ ನೀಡುತ್ತೆ. ನೀವು ಇದನ್ನು ಹಳದಿ ಅರಿಶಿನದಂತೆ ಬಳಸಬಹುದು.
ಮೈಗ್ರೇನ್ ಗೆ(Migraine) ಪರಿಹಾರ
ಮೈಗ್ರೇನ್ ಸಮಸ್ಯೆ ಹೆಚ್ಚಿನ ಮಹಿಳೆಯರಲ್ಲಿ ಕಂಡುಬರುತ್ತೆಯಾದರೂ, ಈ ರೋಗ ಯಾರಿಗೆ ಯಾವಾಗ ಬೇಕಾದರೂ ಕಾಡಬಹುದು. ಇದರಿಂದಾಗಿ ತಲೆಯ ಹಿಂಭಾಗ ಮತ್ತು ಒಂದು ಭಾಗದಲ್ಲಿ ಸಹಿಸಲಸಾಧ್ಯವಾದ ನೋವು ಇರುತ್ತೆ. ಮೈಗ್ರೇನ್ ನಿಂದ ಬಳಲುತ್ತಿರುವ ವ್ಯಕ್ತಿಯು ದೊಡ್ಡ ಶಬ್ದ ಮತ್ತು ದೀಪಗಳಿಗೆ ಇರಿಟೇಟ್ ಆಗುತ್ತಾನೆ. ಕಪ್ಪು ಅರಿಶಿನ ಅದನ್ನು ನಿವಾರಿಸುವ ಕೆಲಸ ಮಾಡುತ್ತೆ . ಪರಿಹಾರಕ್ಕಾಗಿ, ತಾಜಾ ಅರಿಶಿನವನ್ನು ರುಬ್ಬಿ ಅದರ ಪೇಸ್ಟ್ ಹಣೆಗೆ ಹಚ್ಚಿ.
ಮುಟ್ಟಿನ ನೋವು (Periods pain) ಸಹ ಕಡಿಮೆ ಮಾಡುತ್ತೆ
ಅನೇಕ ಮಹಿಳೆಯರು ತಮ್ಮ ಪಿರೇಡ್ಸ್ ಟೈಂನಲ್ಲಿ ಸಾಕಷ್ಟು ನೋವನ್ನು ಅನುಭವಿಸ್ತಾರೆ. ಆಗ ಕಪ್ಪು ಅರಿಶಿನದ ಉರಿಯೂತ ಶಮನಕಾರಿ ಗುಣಲಕ್ಷಣ ಪರಿಹಾರ ನೀಡುತ್ತೆ. ಇದಕ್ಕಾಗಿ, ಬಿಸಿ ಹಾಲಿಗೆ ಕಪ್ಪು ಅರಿಶಿನ ಪುಡಿ ಬೆರೆಸಿ ಕುಡಿಯೋದು ಒಳ್ಳೆದು.
ಜೀರ್ಣಕ್ರಿಯೆಗೆ(Digestion) ಸಂಬಂಧಿಸಿದ ಅನಾರೋಗ್ಯವು ಸಹ ಕೊನೆಗೊಳ್ಳುತ್ತೆ
ಕಪ್ಪು ಅರಿಶಿನ ಗ್ಯಾಸ್ಟ್ರಿಕ್ ಸಮಸ್ಯೆ ತೊಡೆದುಹಾಕುವ ಕೆಲಸ ಮಾಡುತ್ತೆ. ಆಸಿಡ್ ರಿಫ್ಲಕ್ಸ್, ಗ್ಯಾಸ್, ಉರಿಯೂತ, ಬಿಕ್ಕಳಿಕೆ, ಅಜೀರ್ಣ, ಹುಣ್ಣು, ಗ್ಯಾಸ್ಟ್ರಿಕ್ ಸಮಸ್ಯೆಗಳಾಗಿವೆ. ಅನೇಕ ಬಾರಿ ಈ ಸಮಸ್ಯೆ ಸರಿಯಿಲ್ಲದ ಲೈಫ್ ಸ್ಟೈಲ್ ಮತ್ತು ಡಯಟಿಂದ ಸಂಭವಿಸುತ್ತೆ. ಇದನ್ನು ತೊಡೆದುಹಾಕಲು, ಸ್ವಲ್ಪ ಪ್ರಮಾಣದ ಕಪ್ಪು ಅರಿಶಿನವನ್ನು ಆಹಾರ ಅಥವಾ ನೀರಿನೊಂದಿಗೆ ಸೇವಿಸಬಹುದು.
ಕ್ಯಾನ್ಸರ್ (Cancer) ದೂರ ಮಾಡುತ್ತೆ
ಕರ್ಕ್ಯುಮಿನ್ ಎಂಬ ಅಂಶವು ಕಪ್ಪು ಅರಿಶಿನದಲ್ಲಿ ಕಂಡುಬರುತ್ತೆ, ಇದು ಕ್ಯಾನ್ಸರ್ ವಿರೋಧಿ ಗುಣಲಕ್ಷಣ ಹೊಂದಿದೆ. ಈ ಕಾರಣದಿಂದಾಗಿ, ದೇಹದಲ್ಲಿನ ಕ್ಯಾನ್ಸರ್ ಕೋಶ ಬೆಳೆಯೋದಿಲ್ಲ. ಆದುದರಿಂದ ಇದನ್ನು ನಿಮ್ಮ ಆಹಾರಾದಲ್ಲಿ ಸೇರಿಸುವುದು ಉತ್ತಮ ಪರಿಹಾರವಾಗಿದೆ.