ಕೆಲವು ಜನರು ಹೆಚ್ಚು ಬೆವರುತ್ತಾರೆ. ಯಾವುದೇ ರೋಗ, ಫಿಸಿಕಲ್ ಆಕ್ಟಿವಿಟಿ ಮತ್ತು ಶಾಖವಿಲ್ಲದೆ ಬೆವರುವುದು(Sweating) ಆರೋಗ್ಯಕ್ಕೆ ಒಳ್ಳೆಯದಲ್ಲ. ದೇಹದಿಂದ ಬೆವರನ್ನು ಹೊರಹಾಕುವ ಗ್ರಂಥಿಗಳು ಗಂಟೆಗಟ್ಟಲೆ ಓವರ್ ಆಕ್ಟಿವ್ ಆದಾಗ ಈ ಸಮಸ್ಯೆ ಉಂಟಾಗುತ್ತೆ. ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಗೊತ್ತಾ?
ಅತಿಯಾದ ಬೆವರುವಿಕೆ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಸಾವಿರಾರು ವರ್ಷಗಳ ಹಿಂದಿನ ಆಯುರ್ವೇದ(Ayurveda) ವೈದ್ಯರು ತಿಳಿಸಿದ ಔಷಧಿ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಅತಿಯಾಗಿ ಬೆವರುವುದಕ್ಕೆ ಕಾರಣ ಏನು ಗೊತ್ತಾ? ಅದಕ್ಕೆ ಮುಖ್ಯ ಕಾರಣವೆಂದರೆ ದೇಹದಲ್ಲಿ ಪಿತ್ತ ದೋಷದ ಹೆಚ್ಚಳ. ಹೆಚ್ಚು ಬೆವರುವ ಸಮಸ್ಯೆ ಕಂಟ್ರೋಲ್ ಮಾಡೋದ್ರೆ, ದೇಹದ ವಾಸನೆ ಮತ್ತು ಶಾಖವನ್ನು ಕಡಿಮೆ ಮಾಡಬಹುದು.
ಕೆಲವರು ಏಕೆ ಹೆಚ್ಚು ಬೆವರ್ತ್ತಾರೆ?
ಅತಿಯಾಗಿ ಬೆವರುವುದಕ್ಕೆ ಎರಡು ಕಾರಣಗಳಿರಬಹುದು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಮೊದಲ ಕಾರಣ - ಯಾವುದೇ ರೋಗವಿಲ್ಲದೆ ಹೆಚ್ಚು ಬೆವರುತ್ತಿದ್ದರೆ, ಎಸ್ಕ್ರೆಟಾರಿ ಗ್ರಂಥಿ ಅದಕ್ಕೆ ಕಾರಣವಾಗಿರುತ್ತೆ. ಈ ಗ್ರಂಥಿ ಆಕ್ಟಿವ್(Active) ಆದಾಗ, ದೇಹವು ಸಾಮಾನ್ಯಕ್ಕಿಂತ ಹೆಚ್ಚು ಬೆವರಲು ಪ್ರಾರಂಭಿಸುತ್ತೆ.
ಎರಡನೆಯ ಕಾರಣ- ಹೆಚ್ಚು ಬೆವರಲು ಮತ್ತೊಂದು ಕಾರಣವೂ ಇದೆ. ಅದೇನೆಂದರೆ ಒಬ್ಬ ವ್ಯಕ್ತಿಯ ಥೈರಾಯ್ಡ್ (Thyroid)ಗ್ರಂಥಿಯ ಡಿಸ್ಆರ್ಡರ್, ಮಧುಮೇಹ (Diabetic), ಋತುಬಂಧ (Periods), ಜ್ವರ (Fever), ಆತಂಕ (Anxiety) ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಂದ ನೀವು ಬಳಲುತ್ತಿದ್ದರೆ ಹೆಚ್ಚು ಬೆವರಲು ಆರಂಭವಾಗುತ್ತೆ.
ನಿಮಗೂ ಸಹ ಇಂತಹ ಸಮಸ್ಯೆ ಕಂಡು ಬಂದರೆ ನೀವು ಕೆಲವೊಂದು ಆಯುರ್ವೇದ ಡ್ರಿಂಕ್ಸ್ ಮಾಡಿ ಸೇವಿಸಬೇಕು. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕೊತ್ತಂಬರಿ ನೀರು(Coriander water) - ಕೊತ್ತಂಬರಿ ಬೀಜಗಳನ್ನು ರುಬ್ಬಿ ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ಇದರಿಂದ ದೇಹವು ಆರೋಗ್ಯವಾಗಿರುತ್ತೆ.
ಖಸ್ ಬೇರಿನ (Root) ನೀರು - ಸಾದಾ ನೀರನ್ನು ಕುಡಿಯುವ ಬದಲು, ದಿನವಿಡೀ ಖಸ್ ನೀರನ್ನು ಕುಡಿಯಿರಿ. ಇದಕ್ಕಾಗಿ, ಒಂದು ಟೀಸ್ಪೂನ್ ಖಸ್ ಬೇರನ್ನು 2 ಲೀಟರ್ ನೀರಿನಲ್ಲಿ 20 ನಿಮಿಷಗಳ ಕಾಲ ನೆನೆಸಿಡಿ. ಇದರ ನಂತರ, ಅದನ್ನು ಬಸಿದು ಸೇವಿಸಿ. ಇದು ದೇಹವನ್ನು ತಂಪಾಗಿಸುತ್ತೆ.
ಈ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಸ್ನಾನ ಮಾಡಿ :
ಈ ಪೇಸ್ಟ್ ದೇಹಕ್ಕೆ ಹಚ್ಚಿ - ಬಿಳಿ ಶ್ರೀಗಂಧದ ಪೇಸ್ಟ್ (Sandalwood paste)ತಯಾರಿಸಿ ಮತ್ತು ಬೆವರುವ ಸ್ಥಳದಲ್ಲಿ ಅದನ್ನು ಚೆನ್ನಾಗಿ ಹಚ್ಚಿ. 15-20 ನಿಮಿಷಗಳ ನಂತರ ತೊಳೆಯಿರಿ. ಇದು ಬೆವರನ್ನು ಕಡಿಮೆ ಮಾಡುತ್ತೆ.
ಸಾದಾ ನೀರಿನಿಂದ ಸ್ನಾನ(Bath) ಮಾಡಬೇಡಿ - 20 ಗ್ರಾಂ ಕಡಲೆ ಹುಡಿಯನ್ನು 15-20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ನಂತರ, ಅದನ್ನು ಬಸಿದು ಸ್ನಾನ ಮಾಡಿ. ಇದರಿಂದ ಸಹ ಬೆವರುವಿಕೆ ಕಡಿಮೆಯಾಗುತ್ತದೆ. ಇದು ಚರ್ಮಕ್ಕೂ ಉತ್ತಮ ಆರೈಕೆ ನೀಡುತ್ತೆ.
ನೀವು ಹೆಚ್ಚು ಬೆವರುತ್ತಿದ್ದರೆ, ಆಹಾರದ ನಿಯಂತ್ರಣ ಕೂಡ ಅಗತ್ಯವಾಗಿದೆ
ಮಸಾಲೆಯುಕ್ತ (Masala)ಆಹಾರ ಮತ್ತು ಹುಳಿ ಆಹಾರ ಕಡಿಮೆ ಮಾಡಿ ಅಥವಾ ತಿನ್ನಲೇಬೇಡಿ.
ಊಟದಲ್ಲಿ ತುಂಬಾ ಬಿಸಿ ಆಹಾರ ಸೇರಿಸಬೇಡಿ.
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನೆನೆಸಿದ 10 ಒಣದ್ರಾಕ್ಷಿ ತಿನ್ನಿ.
ಆಹಾರದಲ್ಲಿ ಹೆಚ್ಚು ಮಸಾಲೆಯುಕ್ತ ಮತ್ತು ಸಿಹಿ ಆಹಾರ ಸೇವಿಸಬೇಡಿ .
ವೈದ್ಯಕೀಯ ವಿಜ್ಞಾನ ಏನು ಹೇಳುತ್ತದೆ?
ಹೈಪರ್ಹೈಡ್ರೋಸಿಸ್ ಎಂಬುದು ಒಬ್ಬ ವ್ಯಕ್ತಿಯು ಹೆಚ್ಚು ಬೆವರುವ ಒಂದು ಸಾಮಾನ್ಯ ಸ್ಥಿತಿ. ದೇಹದ ತಾಪಮಾನ ಕಂಟ್ರೋಲ್ ಮಾಡಲು ದೇಹವು ಅತಿಯಾಗಿ ಬೆವರುತ್ತೆ. ಬೆವರಿನ ಪ್ರಮಾಣವು ಸಾಮಾನ್ಯಕ್ಕಿಂತ ಐದು ಪಟ್ಟು ಹೆಚ್ಚು ಇರಬಹುದು. ತಜ್ಞರ ಪ್ರಕಾರ, ಜನಸಂಖ್ಯೆಯ ಸುಮಾರು 3% ರಷ್ಟು ಜನ ಹೈಪರ್ಹೈಡ್ರೊಸಿಸ್ ನಿಂದ ಬಳಲುತ್ತಿದ್ದಾರೆ. ಅತಿಯಾದ ಬೆವರುವಿಕೆ, ಅಥವಾ ಹೈಪರ್ಹೈಡ್ರೋಸಿಸ್, ಥೈರಾಯ್ಡ್ ಸಮಸ್ಯೆಗಳು, ಮಧುಮೇಹ(Diabetes) ಅಥವಾ ಸೋಂಕಿನ ಎಚ್ಚರಿಕೆಯ ಸಂಕೇತ.