ನಿಂಬೆಯ ಪ್ರಯೋಜನಗಳ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು. ಆದರೆ ಅದರ ಎಲೆಗಳು ಸಹ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ ಎಂದು ನಿಮಗೆ ತಿಳಿದಿದೆಯೇ? ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ನೀವು ನಿಂಬೆ ಎಲೆಗಳನ್ನು(Lemon leaf) ಬಳಸಬಹುದು. ಆದರೆ ನಿಂಬೆ ಎಲೆ ಕಹಿ ಮತ್ತು ಯಾವುದೇ ಪ್ರಯೋಜನವಿಲ್ಲ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಈ ಎಲೆಗಳನ್ನು ತಿನ್ನುವುದು ಅಥವಾ ಅವುಗಳ ರಸದ ವಾಸನೆ ತೆಗೆದುಕೊಳ್ಳೊದರಿಂದ ಅನೇಕ ಪ್ರಯೋಜನಗಳಿವೆ ಎಂದು ತಿಳಿದರೆ ನಿಮಗೆ ಅಚ್ಚರಿಯಾದೀತು…
ನಿಂಬೆ ಎಲೆಗಳನ್ನು ಸೇವಿಸೋದು ಹೇಗೆ?
ನಿಂಬೆ ಎಲೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಹೌದು, ಆದರೆ ಅದನ್ನು ಅಗಿಯುವುದನ್ನು ನೀವು ತಪ್ಪಿಸಬೇಕು. ನೀವು ನಿಂಬೆ ಎಲೆಗಳನ್ನು ಚಹಾದಲ್ಲಿ ಮಿಶ್ರಣ ಮಾಡುವ ಮೂಲಕ ಸೇವಿಸಬಹುದು. ಇದು ಚಹಾಕ್ಕೆ (Tea) ವಿಶೇಷ ಸ್ವಾಧ ನೀಡುತ್ತದೆ, ಅಲ್ಲದೇ ಆರೋಗ್ಯಕ್ಕೂ ಸಹ ಉತ್ತಮವಾಗಿದೆ.
ನಿಂಬೆ ಎಲೆಗಳು ಯಾವ ಔಷಧೀಯ ಗುಣಗಳನ್ನು ಹೊಂದಿವೆ?
ಇದು ಆಂಟಿವೈರಲ್(Anti viral), ಆಂಟಿ-ಆಕ್ಸಿಡೆಂಟ್, ಆಲ್ಕಲಾಯ್ಡ್, ಟ್ಯಾನಿನ್, ಫ್ಲೇವನಾಯ್ಡ್ ಮತ್ತು ಫಿನೊಲಿಕ್ ಅಂಶಗಳನ್ನು ಒಳಗೊಂಡಿದೆ. ಇದು ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬುಗಳಂತಹ ಪೋಷಕಾಂಶಗಳನ್ನು ಸಹ ಹೊಂದಿದೆ. ಇದಲ್ಲದೆ, ಇದು ಆಂಥೆಲ್ಮಿಂಟಿಕ್, ಆಂಟಿ-ಫ್ಲುಲೆನ್ಸ್, ಆಂಟಿಮೈಕ್ರೊಬಿಯಲ್, ಕ್ಯಾನ್ಸರ್ ವಿರೋಧಿ, ಉರಿಯೂತ ಶಮನಕಾರಿ ಪರಿಣಾಮಗಳನ್ನು ಸಹ ಒಳಗೊಂಡಿದೆ.
ಮೂತ್ರಪಿಂಡಗಳಲ್ಲಿ ಕಲ್ಲು (Kidney stone) ರೂಪುಗೊಳ್ಳೋದನ್ನು ತಪ್ಪಿಸುತ್ತೆ!
ಎನ್ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿಂಬೆ ಎಲೆಗಳಲ್ಲಿ ಕಂಡುಬರುವ ಸಿಟ್ರಿಕ್ ಆಮ್ಲವು ಮೂತ್ರಪಿಂಡಗಳಲ್ಲಿ ಕಲ್ಲು ರೂಪುಗೊಳ್ಳೋದನ್ನು ಮತ್ತು ಬೆಳೆಯೋದನ್ನು ತಡೆಯುತ್ತೆ. ಆದ್ದರಿಂದ, ನೀವು ಪದೇ ಪದೇ ಮೂತ್ರಪಿಂಡದಲ್ಲಿ ಕಲ್ಲುಗಳಿಂದ ನೋವು ಅನುಭವಿಸುತ್ತಿದ್ದರೆ, ನಿಂಬೆ ಎಲೆ ನಿಮಗೆ ರಾಮಬಾಣವಾಗಿದೆ.
ಮೈಗ್ರೇನ್(Migrane) ನೋವಿನಿಂದ ಪರಿಹಾರ
ಒಂದು ಅಧ್ಯಯನದ ಪ್ರಕಾರ, ಲಿಂಬೆ ಎಲೆಗಳು ಮೈಗ್ರೇನ್ ನಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿಯಾಗಿವೆ. ನಿಂಬೆ ಎಲೆಗಳು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿವೆ. ಆಂಟಿ-ಆಕ್ಸಿಡೆಂಟ್ ಪರಿಣಾಮವು ದೇಹದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮೈಗ್ರೇನ್ ಸಮಸ್ಯೆಯನ್ನು ಸುಧಾರಿಸಲು ಕೆಲಸ ಮಾಡುತ್ತೆ. ಮೈಗ್ರೇನ್ ಮತ್ತು ಮಾನಸಿಕ ರೋಗಗಳಿಂದ ಪರಿಹಾರ ಪಡೆಯಲು ತಜ್ಞರು ನಿಂಬೆ ಎಲೆಗಳ ವಾಸನೆ ಸೇವಿಸುವಂತೆ ಹೇಳುತ್ತಾರೆ.
ನಿದ್ರೆಯ ಸಮಸ್ಯೆಯನ್ನು ನಿವಾರಿಸುತ್ತೆ
ಸಂಶೋಧನೆಯ ಪ್ರಕಾರ, ನೀವು ರಾತ್ರಿ ನಿದ್ರೆ ಮಾಡದಿದ್ದರೆ, ನಿದ್ರಾಹೀನತೆಯ(Sleeplessness) ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಂಬೆ ಎಲೆಗಳು ನಿಮಗೆ ಔಷಧಿಯಾಗಿ ಕೆಲಸ ಮಾಡುತ್ತವೆ. ಇದರಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ಆಲ್ಕಲಾಯ್ಡ್ ಗಳು ನಿದ್ರೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುವ ಕೆಲಸ ಮಾಡುತ್ತೆ. ಹಾಗಾಗಿ, ನಿಂಬೆ ಎಲೆಗಳಿಂದ ತಯಾರಿಸಿದ ತೈಲಗಳು ನಿಮಗೆ ಪ್ರಯೋಜನಕಾರಿ.
ತೂಕ(Weight) ನಿಯಂತ್ರಿಸಲು
ತೂಕ ಹೆಚ್ಚಾಗಿ ನೀವು ತೊಂದರೆಗೀಡಾಗಿದ್ದರೆ, ನಿಂಬೆ ಎಲೆಗಳು ನಿಮ್ಮ ಸಮಸ್ಯೆಯನ್ನು ಕೊನೆಗೊಳಿಸಬಹುದು. ನಿಂಬೆ ಎಲೆಗಳಿಂದ ತಯಾರಿಸಿದ ಜ್ಯೂಸ್ ಪೆಕ್ಟಿನ್ ಎಂದು ಕರೆಯಲ್ಪಡುವ ಕರಗುವ ನಾರನ್ನು ಹೊಂದಿರುತ್ತೆ, ಇದು ತೂಕ ನಷ್ಟಕ್ಕೆ ಪರಿಣಾಮಕಾರಿ. ನಿಂಬೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಆ ನೀರನ್ನು ಕುಡಿಯಿರಿ.
ಹೊಟ್ಟೆಯ(Stomach) ಹುಳುಗಳನ್ನು ಕೊಲ್ಲುತ್ತೆ
ವೈದ್ಯಕೀಯ ಸಂಶೋಧನೆಯ ಪ್ರಕಾರ, ನಿಂಬೆ ಎಲೆಗಳು ಆಂಥೆಲ್ಮಿಂಟಿಕ್ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ಹೊಟ್ಟೆಯ ಹುಳುಗಳನ್ನು ತೊಡೆದುಹಾಕುವ ಕೆಲಸ ಮಾಡುತ್ತವೆ. ಹಾಗಾಗಿ, ಹೊಟ್ಟೆಯ ಹುಳುಗಳನ್ನು ತೊಡೆದುಹಾಕಲು ನಿಂಬೆ ಎಲೆಗಳನ್ನು ಬಳಸಬಹುದು. ನೀವು ನಿಂಬೆ ಎಲೆಗಳ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಸೇವಿಸಬಹುದು.