ವೃದ್ಧಾಪ್ಯದಲ್ಲಿ ಅಲ್ಝೈಮರ್ ನ ಅಪಾಯ ಕಡಿಮೆ ಮಾಡಲು ಬೆಸ್ಟ್ ಆಹಾರವಿದು!

Published : Sep 22, 2022, 05:56 PM IST

ಅಲ್ಝೈಮರ್ ಒಂದು ನರ ಸಂಬಂಧಿ ಕಾಯಿಲೆಯಾಗಿದ್ದು, ಇದು ವೃದ್ಧಾಪ್ಯದಲ್ಲಿ ಹೆಚ್ಚು ಸಾಮಾನ್ಯ. ಆದರೆ, ಇಂದಿನ ಜೀವನಶೈಲಿ, ಆಹಾರವು ಹೇಗಿದೆಯೆಂದರೆ ಜನರು ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಅಲ್ಝೈಮರ್ ಒಂದು ಮರೆವಿನ ಕಾಯಿಲೆ. ಈ ಸಮಸ್ಯೆ ಕಾಣಿಸಿಕೊಂಡರೆ ರೋಗಿಗಳು, ಒಂದೊಂದು ವಿಷಯವನ್ನೂ ಮರೆಯಲು ಆರಂಭಿಸುತ್ತಾರೆ. ಈ ಸಮಸ್ಯೆ ಗಂಭೀರ ಮಟ್ಟಕ್ಕೆ ತಲುಪುವ ಮುನ್ನ ನೀವು ಎಚ್ಚೆತ್ತುಕೊಳ್ಳೋದು ಮುಖ್ಯ.

PREV
111
ವೃದ್ಧಾಪ್ಯದಲ್ಲಿ ಅಲ್ಝೈಮರ್ ನ ಅಪಾಯ ಕಡಿಮೆ ಮಾಡಲು ಬೆಸ್ಟ್ ಆಹಾರವಿದು!

ಅಲ್ಝೈಮರ್ (Alzheimer) ಒಂದು ಎಂತಹ ಸಮಸ್ಯೆ ಎಂದರೆ ಅದನ್ನು ಹೆಚ್ಚಿನ ಜನ ನಿರ್ಲಕ್ಷ್ಯ ಮಾಡಲು ಆರಂಭಿಸುತ್ತಾರೆ. ಆದರೆ ಸಕಾಲದಲ್ಲಿ ಅಲ್ಝೈಮರ್ ರೋಗ ಲಕ್ಷಣಗಳನ್ನು ಗುರುತಿಸಿದರೆ, ಅದನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಅಲ್ಝೈಮರ್ಸ್ ದಿನವನ್ನು ಆಚರಿಸಲಾಗುತ್ತೆ. ಮಾನಸಿಕ ಆರೋಗ್ಯ ಸರಿಯಾಗಿದ್ದರೆ, ನೀವು ಅಲ್ಝೈಮರ್‌ನಂತಹ ಕಾಯಿಲೆಯನ್ನು ತಪ್ಪಿಸಬಹುದು. ಮೆದುಳಿನ ಆರೋಗ್ಯಕ್ಕೆ ಬೇಕಾಗುವ ಕೆಲವು ಆಹಾರಗಳಿವೆ ಅವುಗಳ ಬಗ್ಗೆ ತಿಳಿಯೋಣ.

211
ಹಸಿರು ಎಲೆ ತರಕಾರಿಗಳನ್ನು ಸೇವಿಸಿ (Green vegetables)

ಕೆಲವು ಆಹಾರ ಮೆದುಳಿನ ವಯಸ್ಸನ್ನು ಹೆಚ್ಚಿಸುತ್ತೆ. ಮೆದುಳು ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಲೇ ಇರುತ್ತೆ. ಇದು ವೃದ್ಧಾಪ್ಯದಲ್ಲಿ ಅಲ್ಝೈಮರ್ಸ್, ಬುದ್ಧಿಮಾಂದ್ಯತೆಯಂತಹ ರೋಗಗಳನ್ನು ಸಹ ತಡೆಗಟ್ಟಬಹುದು. ನಿಮ್ಮ ಆಹಾರದಲ್ಲಿ ಹೆಚ್ಚು ಹಸಿರು ಎಲೆ ತರಕಾರಿಗಳನ್ನು ಸೇರಿಸಿ. 

311

ಪಾಲಕ್ ಸೊಪ್ಪು(Palak), ಬ್ರೊಕೋಲಿ, ಎಲೆಕೋಸು, ಇತ್ಯಾದಿಗಳು ಉತ್ಕರ್ಷಣ ನಿರೋಧಕ ಮತ್ತು ಫೈಟೋನ್ಯೂಟ್ರಿಯೆಂಟ್ ಗಳಿಂದ ಸಮೃದ್ಧವಾಗಿವೆ, ಇದು ಮೆದುಳಿನ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತೆ. ಹಸಿರು ಎಲೆ, ತರಕಾರಿಗಳ ನೆನಪಿನ ಶಕ್ತಿ ಕಡಿಮೆಯಾಗೋದನ್ನು ತಡೆಯುತ್ತದೆ.

411
ಮೀನು(Fish)

ಅಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯ ಸಮಸ್ಯೆಗಳನ್ನು ಹೊಂದಿರುವ ಜನರು ಸಹ ಮೀನುಗಳನ್ನು ಸೇವಿಸಬಹುದು. ಮೀನು ತೆಳ್ಳಗೆ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒದಗಿಸುತ್ತೆ. ಸಂಶೋಧನೆ ಪ್ರಕಾರ, ಹೆಚ್ಚು ಮೀನುಗಳನ್ನು ಸೇವಿಸುವ ಜನರಿಗೆ ವೃದ್ಧಾಪ್ಯದಲ್ಲಿ ನೆನಪಿನ ಶಕ್ತಿ ಕುಂದುವುದು ಕಡಿಮೆಯಾಗುತ್ತಂತೆ
 

511

ನೀವು ಸಾಲ್ಮನ್, ಸಾರ್ಡಿನ್, ಕಾಡ್, ಟ್ಯೂನಾ ಮೀನುಗಳನ್ನು ಸೇವಿಸಬಹುದು. ಅವು ಒಮೆಗಾ -3 ಕೊಬ್ಬಿನಾಮ್ಲಗಳು, ವಿಟಮಿನ್ ಬಿ 12(Vitamin B 12) ಅನ್ನು ಹೊಂದಿರುತ್ತವೆ, ಇದು ಅಲ್ಝೈಮರ್ಸ್, ಬುದ್ಧಿಮಾಂದ್ಯತೆಯಂತಹ ರೋಗಗಳಿಂದ ರಕ್ಷಿಸುತ್ತೆ ಮತ್ತು ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತೆ.

611
ಬೀನ್ಸ್ (Beans) -

ಬೀನ್ಸ್ ಪ್ರೋಟೀನ್, ಫೈಬರ್ (Fiber), ಸಂಕೀರ್ಣ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತೆ. ಇದು ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಆರೋಗ್ಯಕರ ಆಹಾರವಾಗಿದೆ (Healthy Fodd). ಇದು ಉತ್ತಮ ಪ್ರಮಾಣದ ಫೋಲೇಟ್ ಸಹ ಹೊಂದಿರುತ್ತೆ. ಫೋಲೇಟ್ ಭರಿತ ಆಹಾರಗಳ ಕಡಿಮೆ ಸೇವನೆಯು ವೃದ್ಧಾಪ್ಯದಲ್ಲಿ ಅಲ್ಝೈಮರ್ ಗೆ ತುತ್ತಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತೆ.
 

711

ದ್ವಿದಳ ಧಾನ್ಯಗಳಿಂದ ಸಮೃದ್ಧವಾಗಿರುವ ಆಹಾರ ಮೆದುಳಿನ ಆರೋಗ್ಯವನ್ನು ರಕ್ಷಿಸುತ್ತೆ. ದ್ವಿದಳ ಧಾನ್ಯಗಳ ಸೇವನೆಯು ನೆನಪಿನ ಶಕ್ತಿಗೆ (Memory power)ಹಾನಿಯನ್ನು ಉಂಟುಮಾಡೋದಿಲ್ಲ. ಹಾಗಾಗಿ, ನೀವು ಅಲ್ಝೈಮರ್ ಅಥವಾ ಬುದ್ಧಿಮಾಂದ್ಯತೆ ಅಪಾಯವನ್ನು ಕಡಿಮೆ ಮಾಡಲು ಬಯಸಿದರೆ, ಖಂಡಿತವಾಗಿಯೂ ದ್ವಿದಳ ಧಾನ್ಯಗಳನ್ನು ಸೇವಿಸಿ.

811
ಗ್ರೀನ್ ಟೀ (Green tea)

ಸಕ್ಕರೆ ಮುಕ್ತ ಗ್ರೀನ್ ಟೀ ಕುಡಿಯೋದರಿಂದ ಸೌಮ್ಯ ಅರಿವಿನ ನಷ್ಟ, ಬುದ್ಧಿಮಾಂದ್ಯತೆ ಅಥವಾ ಅಲ್ಝೈಮರ್ಸ್ ನಿಂದ ಉಂಟಾಗುವ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ವಿವಿಧ ರೀತಿಯ ಚಹಾ ಕುಡಿಯುವುದರಿಂದ ನಿಮ್ಮ ಮೆದುಳಿನ ಆರೋಗ್ಯವನ್ನು ಸುಧಾರಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. 

911

ಹಸಿರು ಚಹಾದಲ್ಲಿರುವ ಕ್ಯಾಟೆಚಿನ್ಸ್ ಒಂದು ರೀತಿಯ ಫ್ಲೇವನಾಯ್ಡ್ ಗಳಾಗಿವೆ, ಇದು ತುಂಬಾ ಬಲವಾದ ಉತ್ಕರ್ಷಣ ನಿರೋಧಕವಾಗಿದೆ. ಇದು ಉರಿಯೂತ ಶಮನಕಾರಿ. ಗ್ರೀನ್ ಟೀಯಲ್ಲಿನ ಈ ಎಲ್ಲಾ ಗುಣಲಕ್ಷಣಗಳಿಂದಾಗಿ, ಇದು ಮೆದುಳಿಗೆ(Brain) ಆರೋಗ್ಯಕರವಾಗಿದೆ. ಮೆಮೊರಿ ಪವರ್ ಹೆಚ್ಚಿಸಲು ಸಹಾಯಕವಾಗಿದೆ.

1011
ಬೆರ್ರಿಗಳು(Berries)

ಬುದ್ಧಿಮಾಂದ್ಯತೆ, ಅಲ್ಝೈಮರ್ಸ್ ಅಪಾಯವನ್ನು ಕಡಿಮೆ ಮಾಡಲು ಬೆರ್ರಿಗಳನ್ನು ಸೇವಿಸಬೇಕು. ಅವು ಗ್ರೀನ್ ಟೀ ಯಂತಹ ಫ್ಲೇವನಾಯ್ಡ್‌ಗಳನ್ನು ಸಹ ಹೊಂದಿರುತ್ತವೆ. ಅವು ಉತ್ಕರ್ಷಣ ನಿರೋಧಕಗಳು, ಉರಿಯೂತ ಶಮನಕಾರಿ ಸಂಯುಕ್ತಗಳು, ಫೈಬರ್, ವಿಟಮಿನ್ಸ್, ಮಿನರಲ್ಸ್‌ ಗಳಿಂದ ಸಮೃದ್ಧವಾಗಿವೆ. ಪ್ರತಿದಿನ ಒಂದು ಲೋಟ ಬ್ಲೂಬೆರ್ರಿ ಜ್ಯೂಸ್  ಕುಡಿಯೋದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತೆ. ಅಲ್ಲದೆ, ಸ್ಟ್ರಾಬೆರಿ ತಿನ್ನೋದರಿಂದ ವೃದ್ಧಾಪ್ಯದಲ್ಲಿ ಅಲ್ಝೈಮರ್ಸ್ ಸಮಸ್ಯೆ ತಪ್ಪಿಸಬಹುದು.

1111

ನಟ್ಸ್ (Nuts)- ಪ್ರತಿದಿನ ನಟ್ಸ್ ಸೇವನೆಯು ಮೆದುಳನ್ನು ಆರೋಗ್ಯವಾಗಿಡುತ್ತೆ. ವೃದ್ಧಾಪ್ಯದಲ್ಲಿ ಅಲ್ಜೈಮರ್ ಅಪಾಯ ಕಡಿಮೆ ಮಾಡಲು, ನಿಯಮಿತವಾಗಿ ಆಹಾರದಲ್ಲಿ ನಟ್ಸ್ ಸೇರಿಸಿ. ಇವು ಆಲ್ಝೈಮರ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ವಾಲ್ನಟ್ಸ್ ತಿನ್ನುವುದು ಮೆದುಳಿನ ಸ್ನಾಯುಗಳನ್ನು ಬಲವಾಗಿರಿಸುತ್ತೆ. ಇದರಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ವಿಟಮಿನ್ ಇ ಇದೆ, ಇದು ಮೆದುಳು ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತೆ.

Read more Photos on
click me!

Recommended Stories