ಇನ್ನೊಬ್ಬರು ಬಳಸಿದ ಬ್ರಶ್ ಮಾತ್ರವಲ್ಲ, ಪೇಸ್ಟನ್ನೂ ಬಳಸೋದು ಡೇಂಜರ್!

First Published | Oct 20, 2021, 6:28 PM IST

ಟೂತ್ ಪೇಸ್ಟ್ (toothpaste) ನಾವು ಪ್ರತಿದಿನ ಬಳಸುವ ಅತ್ಯಗತ್ಯ ವಸ್ತು.  ದಿನಕ್ಕೆ ಕನಿಷ್ಠ ಎರಡು ಬಾರಿ ಹಲ್ಲುಜ್ಜಬೇಕು ಎಂದು ಎಲ್ಲರಿಗೂ ತಿಳಿದಿದೆ, ಮತ್ತು ಹಲ್ಲಿನ ರಕ್ಷಣೆಗೆ ಬೇರೆ ಬೇರೆ ವಿಧದ ಟೂತ್ ಪೇಸ್ಟ್ ಬಳಕೆ ಮಾಡುತ್ತೇವೆ. ಆದರೆ ಒಂದು ಒಳ್ಳೆಯ ಪ್ರಶ್ನೆಯೆಂದರೆ " ಎಷ್ಟು ಟೂತ್ ಪೇಸ್ಟ್ ಬಳಸಬೇಕು?

ನಿಜವಾಗಿಯೂ ನಿಮಗೆ ಎಷ್ಟು ಟೂತ್ ಪೇಸ್ಟ್ (tooth paste) ಬಳಸುವುದು ಸರಿಯಾದ ವಿಧಾನ ಅನ್ನೋದು ಗೊತ್ತಿದೆಯೇ? ವಯಸ್ಕರಿಗೆ ಈ ಪ್ರಮಾಣ ಎಷ್ಟು ಬೇಕು? ಪೋಷಕರು ತಮ್ಮ ಚಿಕ್ಕ ಮಕ್ಕಳ ಹಲ್ಲುಗಳನ್ನು ಸ್ವಚ್ಛಗೊಳಿಸಲು ಎಷ್ಟು ಟೂತ್ ಪೇಸ್ಟ್ ಬಳಸಬೇಕು? ಅನ್ನೋದು ಜಾಹಿರಾತು ನೋಡಿದ್ರೆ ತಿಳಿಯಲು ಸಾಧ್ಯವಿಲ್ಲ. 

 ಹೆಚ್ಚಿನ ವಯಸ್ಕರು ಜಾಹೀರಾತುಗಳಲ್ಲಿ ತೋರಿಸುವ ವಿಧಾನದಂತೆ ಟೂತ್ ಬ್ರಷ್ ನ ಸಂಪೂರ್ಣ ಬ್ರಶಿಂಗ್ ಮೇಲ್ಮೈಯನ್ನು ಮುಚ್ಚುವಷ್ಟು ಟೂತ್ ಪೇಸ್ಟ್ ಬಳಸುತ್ತಾರೆ. ಇಷ್ಟು ಅಗತ್ಯ ಇದೆ ಎಂದು ಭಾವಿಸುತ್ತಾರೆ. ನಿಜವಾಗ್ಲೂ ಬ್ರಷ್ ಮಾಡಲು ಅಷ್ಟೆಲ್ಲಾ ಪೇಸ್ಟ್ ಬೇಕಾ? ಎಂದು ಯಾವತ್ತಾದರೂ ಯೋಚನೆ ಮಾಡಿದ್ದೀರಾ? 

Tap to resize

ಹೆಚ್ಚಿನ ಜನರು ಟೂತ್ ಪೇಸ್ಟ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ.  ಮಾಡುತ್ತಾರೆ; ವಯಸ್ಕರು ತಮ್ಮ ಹಲ್ಲುಗಳನ್ನು (clean the teeth)ಸರಿಯಾಗಿ ಸ್ವಚ್ಛಗೊಳಿಸಲು ತುಂಬಾ ಪೇಸ್ಟ್ ಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಬೇಕಾಗಿರೋದು ಅಂದಾಜು ಬಟಾಣಿ ಗಾತ್ರದ ಟೂತ್ ಪೇಸ್ಟ್ ಅಷ್ಟೇ. 

ಜಾಹಿರಾತುಗಳಲ್ಲಿ ಬೇರೆ ಬೇರೆ ವಿಧದ ಟೂತ್ ಪೇಸ್ಟ್ ಬಳಕೆ ಮಾಡುತ್ತಾರೆ. ನಿಮಗೂ ಯಾವ ಟೂತ್ ಪೇಸ್ಟ್ ಬಳಕೆ ಮಾಡೋದು ಅನ್ನೋ ಕನ್ ಫ್ಯೂಶನ್ ಇರತ್ತೆ, ಹೆಚ್ಚು ಯೋಚನೆ ಮಾಡಬೇಡಿ. ಸಾಮಾನ್ಯವಾಗಿ ಎಲ್ಲಾ ಟೂತ್ ಪೇಸ್ಟ್ ಗಳು ಒಂದೇ ರೀತಿಯ ಪರಿಣಾಮ ಬೀರುತ್ತದೆ. ಅವುಗಳಿಗಿಂತ ನೀವು ಹೆಚ್ಚು ನ್ಯಾಚುರಲ್ ಆಗಿರುವ ಪೇಸ್ಟ್ ಬಳಕೆ ಮಾಡೋದು ಉತ್ತಮ. 

 ಇನ್ನು ಮಕ್ಕಳಿಗೆ  ಬಳಸುವ ಟೂತ್ ಪೇಸ್ಟ್ ಪ್ರಮಾಣವು ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ. ಶಿಶುಗಳ ಹಲ್ಲುಗಳನ್ನು ಬ್ರಷ್ ಮಾಡಲು  ಟೂತ್ ಪೇಸ್ಟ್ ನ ತೆಳುವಾದ ಸ್ಟ್ರೀಕ್ ಗಿಂತ ಹೆಚ್ಚಿನದನ್ನು ಬಳಸಬಾರದು. ವಯಸ್ಕರಿಗೆ ಶಿಫಾರಸು ಮಾಡಲಾದ ಮೊತ್ತದ ಅರ್ಧದಷ್ಟು ಭಾಗವನ್ನು 5 ವರ್ಷಕ್ಕಿಂತ ಹೆಚ್ಚು ವಯಸ್ಸಿನ  ಮಕ್ಕಳ ಹಲ್ಲುಗಳನ್ನು (children teeth)ಬ್ರಷ್ ಮಾಡಲು ಬಳಸಿ.

ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ, ನೀವು ಆಗಾಗ್ಗೆ ಟೂತ್ ಪೇಸ್ಟ್ ಖರೀದಿಸಬೇಕಾಗಿಲ್ಲ. ಅಗತ್ಯಕ್ಕಿಂತ ಹೆಚ್ಚು ಟೂತ್ ಪೇಸ್ಟ್ ಬಳಸುವವರಲ್ಲಿ ಸಾಮಾನ್ಯವಾಗಿ ಕಂಡುಬರುವ ಅತಿಯಾದ ಫ್ಲೋರಿಡೇಶನ್ ನಿಂದ ಹಲ್ಲುಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದು. 

ಮತ್ತೊಂದು ವಿಷಯ ಏನೆಂದರೆ ಟೂತ್ ಪೇಸ್ಟ್ ಕೊಂಚ ಹಾಕಿದ ಬಳಿಕ ಅದನ್ನು ಕೈಗೆ ಟ್ಯಾಪ್ ಮಾಡಿ. ಇದರಿಂದ ಪೇಸ್ಟ್ ಬ್ರಶ್ ನ ತಳಕ್ಕೆ ಸಾಗುತ್ತದೆ. ಇದರಿಂದಾಗಿ ಬ್ರಷ್ ಮಾಡಲು ಸುಲಭವಾಗುತ್ತದೆ. ಯಾವುದೇ ಪೇಸ್ಟ್ ನಿಂದ ಅಲ್ಲ, ಬದಲಾಗಿ ನೀವು ಹೇಗೆ ಬ್ರಶ್ ಮಾಡುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆ. 

ಇನ್ನು ಟೂತ್ ಪೇಸ್ಟ್ ಬಳಕೆ ಮಾಡುವಾಗ ಮನೆಯಲ್ಲಿ ಪ್ರತಿಯೊಬ್ಬರು ಬೇರೆ ಬೇರೆ ಟೂತ್ ಪೇಸ್ಟ್ ಬಳಕೆ ಮಾಡಿ. ಯಾಕೆಂದರೆ ಬ್ರಷ್ ಮೇಲೆ ಪೇಸ್ಟ್ ಹಾಕುವಾಗ ಅದು ಬ್ರಷ್ ಗೂ ಕನೆಕ್ಟ್ ಆಗುತ್ತದೆ. ಒಬ್ಬರು ಬಳಸಿದ ಪೇಸ್ಟ್ ಇನ್ನೊಬ್ಬರು ಬಳಕೆ ಮಾಡಿದರೆ ಅದರಿಂದ ಬ್ಯಾಕ್ಟೀರಿಯಾ (bacteria)ಎಕ್ಸ್ ಚೇಂಜ್ ಆಗುವ ಸಾಧ್ಯತೆ ಹೆಚ್ಚಿದೆ. 

Latest Videos

click me!